ಸೌತ್ ಸಿನಿಮಾ ರಂಗದ ನವದಂಪತಿಗಳಾದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಸದ್ಯ ಸ್ಪೇನ್‌ನಲ್ಲಿ ರೋಮ್ಯಾಂಟಿಕ್ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಈ ಕಪಲ್ ಜೊತೆಯಾಗಿ ಬಾರ್ಸಿಲೋನಾದಲ್ಲಿ ಉತ್ತಮ ಸಮಯವನ್ನು ಕಳೆದ ನಂತರ ಇತ್ತೀಚೆಗೆ ವೇಲೆನ್ಸಿಯಾಕ್ಕೆ ಪ್ರಯಾಣಿಸಿದರು.
ಈ ಸಮಯದ ಫೋಟೋಗಳನ್ನು ವಿಘ್ನೇಶ್ ಶಿವನ್ ಅವರು ತಮ್ಮ Instagram ಆಕೌಂಟ್‌ನಲ್ಲಿ ಶೇರ್ ಮಾಡಿದ್ದಾರೆ. ರೋಮ್ಯಾಂಟಿಕ್ ಹಾಲಿಡೇಯಲ್ಲಿ ನಯನತಾರಾ, ವಿಘ್ನೇಶ್ ಶಿವನ್ ದಂಪತಿಗಳು ಕಿಸ್ ವಾಲ್‌ನಲ್ಲಿ ಪೋಸ್ ನೀಡಿದ್ದಾರೆ
ವಿಘ್ನೇಶ್ ಶಿವನ್ ತಮ್ಮ ಪತ್ನಿ ನಯನತಾರಾ ಅವರ ಸ್ಪೇನ್ ಪ್ರವಾಸದಿಂದ ರೋಮ್ಯಾಂಟಿಕ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ, ಈ ಜೋಡಿ ತಮಮ್ ಪ್ರೀತಿ ತುಂಬಿದ ಸಮಯದ ಸ್ನೀಕ್ ಪೀಕ್‌ಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ.
ಇತ್ತೀಚೆಗಷ್ಟೇ ಅವರು ಬಾರ್ಸಿಲೋನಾದ ಕಿಸ್ ವಾಲ್‌ನಲ್ಲಿ ದೂರದಿಂದ ಚುಂಬಿಸುತ್ತಿರುವಂತೆ ನಟಿಸುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಈ ಫೋಟೋಗೆ 'At the #KissWall
#Barcelona ಎಂದು ಶೀರ್ಷಿಕೆ ನೀಡಲಾಗಿದೆ.
ಇದಕ್ಕೂ ಮೊದಲು ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ತಮ್ಮ ಲೇಡಿಲವ್‌ನ ಮತ್ತೊಂದು ಆಡೋರಬಲ್ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ನಯನತಾರಾ ಅವರು ರಾತ್ರಿ 9 ಗಂಟೆಗೆ ಬಾಲ್ಕನಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ನೋಡಬಹುದು.
'There will be no Spain if there is no pain. #WorkHard#Travel, and then #WorkHard to travel again... ಸಾಂಕ್ರಾಮಿಕ ಸಮಯದಲ್ಲಿ ತುಂಬಾ ತಡೆರಹಿತ ಕೆಲಸದ ನಂತರ ಈ ರಜೆಯ ಅಗತ್ಯ ತುಂಬಾ ಇತ್ತು. ಇಷ್ಟು ದೀರ್ಘ ಸಮಯದ ನಂತರ ಬೇರೆ ದೇಶದಲ್ಲಿರುವುದು ತುಂಬಾ ವಿಚಿತ್ರವೆನಿಸುತ್ತದೆ ಮತ್ತು ಇದು ಪುನಶ್ಚೇತನ ಮತ್ತು ಉಲ್ಲಾಸದಾಯಕವಾಗಿದೆ. ನಾನು ಪ್ರಯಾಣಿಸಲು, ತಿನ್ನಲು ಮತ್ತು ಪ್ರಪಂಚದಾದ್ಯಂತ ಸಂಗೀತವನ್ನು ಕೇಳಲು ಬಹಳಷ್ಟು ಹಣವನ್ನು ಉಳಿಸುತ್ತಿದ್ದೇನೆ' ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.
Nayanthara
ಹಲವಾರು ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದ ನಂತರ, ನಯನತಾರಾ ಮತ್ತು ವಿಘ್ನೇಶ್ ಶಿವನ್ ಈ ವರ್ಷ ಜೂನ್ 9 ರಂದು ವಿವಾಹವಾದರು. ನೆಟ್‌ಫ್ಲಿಕ್ಸ್ ಈ ಕಾಲ್ಪನಿಕ ವಿವಾಹವನ್ನು ಸಾಕ್ಷ್ಯಚಿತ್ರವಾಗಿ ಚಿತ್ರೀಕರಿಸಿದೆ. ಇದರ ಸ್ಟ್ರೀಮಿಂಗ್‌ಗಾಗಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.