ದಕ್ಷಿಣ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ನಯನತಾರಾ ಮುಂಚೂಣಿಯಲ್ಲಿದ್ದಾರೆ. ಸಿನಿಮಾ ಜೊತೆಗೆ ಜಾಹೀರಾತಿನಲ್ಲೂ ನಟಿಸಿ ಭಾರಿ ಸಂಭಾವನೆ ಪಡೆಯುತ್ತಾರೆ. 50 ಸೆಕೆಂಡ್ ಜಾಹೀರಾತಿಗೆ ₹5 ಕೋಟಿ ಪಡೆದಿದ್ದಾರೆ.
ಆ ಜಾಹೀರಾತು ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹಾಗಾಗಿ ₹5 ಕೋಟಿ ಸಂಭಾವನೆ ಪಡೆದಿದ್ದಾರೆ. ಅಂದರೆ ಸೆಕೆಂಡಿಗೆ ₹10 ಲಕ್ಷ ಹಣವನ್ನು ಸಂಭಾವನೆ ಪಡೆದಂತಾಗಿದೆ. ಹೀಗಾಗಿ, ಒಂದು ಸೆಕೆಂಡಿಗೆ 10 ಲಕ್ಷ ರೂ. ಸಂಭಾವನೆ ಪಡೆದ ನಟಿ ಎಂಬ ಖ್ಯಾತಿಗೂ ಒಳಗಾಗಿದ್ದಾರೆ.