250ನೇ ಸಂಚಿಕೆಗೆ ಕಲೆಕ್ಷನ್ ಕಿಂಗ್ ಮೋಹನ್ ಬಾಬು ಅತಿಥಿಯಾಗಿ ಆಗಮಿಸಿ ತಮ್ಮ ವೃತ್ತಿಜೀವನದ ವಿಶೇಷಗಳನ್ನು ಅಲಿ ಜೊತೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ದಿವಂಗತ ನಂದಮೂರಿ ತಾರಕ ರಾಮರಾವ್ ಬಗ್ಗೆ ಚರ್ಚೆ ನಡೆಯಿತು. ಮೋಹನ್ ಬಾಬು ಎನ್.ಟಿ.ಆರ್ ಬಗ್ಗೆ ಮಾತನಾಡುತ್ತಾ.. ಅಣ್ಣನ ಮನಸ್ಸಿನಲ್ಲಿ ಪ್ರೀತಿ ಗಳಿಸುವ ಅವಕಾಶ ನನಗೆ ಸಿಕ್ಕಿತು. ಅದನ್ನು ಈ ಜನ್ಮದ ಭಾಗ್ಯ ಎಂದು ಭಾವಿಸುತ್ತೇನೆ. ಮೇಜರ್ ಚಂದ್ರಕಾಂತ್ ಚಿತ್ರವನ್ನು ಅಣ್ಣನ ಜೊತೆ ಮಾಡಬೇಕೆಂದುಕೊಂಡಾಗ ಹೋಗಿ ಕೇಳಿದೆ, ಮೊದಲು ಅವರು ಒಪ್ಪಲಿಲ್ಲ. ನಂತರ ಮನವಿ ಮಾಡಿದಾಗ ಒಪ್ಪಿಕೊಂಡರು. ಹೀಗೆ ಮೇಜರ್ ಚಂದ್ರಕಾಂತ್ ಚಿತ್ರ ನಿರ್ಮಾಣವಾಗಿ ಭರ್ಜರಿ ಯಶಸ್ಸು ಗಳಿಸಿತು ಎಂದು ಮೋಹನ್ ಬಾಬು ಹೇಳಿದರು.