ಬಾಲಿವುಡ್ ಚಿತ್ರರಂಗದಲ್ಲಿ ಪ್ರತಿಯೊಬ್ಬ ಸ್ಟಾರ್ ನಟ-ನಟಿಯರ ಜೊತೆ ಒಳ್ಳೆಯ ಸ್ನೇಹ ಸಂಬಂಧ ಹೊಂದಿರುವ ಏಕೈಕ ನಿರ್ದೇಶಕ ಅಂದ್ರೆ ಕರಣ್ ಜೋಹಾರ್. ಅದೇ ಕರಣ್ ಜೋಹಾರ್ ಈಗ ಸೋಷಿಯಲ್ ಮೀಡಿಯಾದಿಂದ ದೂರ ಉಳಿಯುತ್ತಿದ್ದಾರೆ.
ಹೌದು! ಅಕ್ಟೋಬರ್ 10 ವಿಶ್ವ ಮಾನಸಿಕ ಆರೋಗ್ಯ ದಿನವಾಗಿದ್ದು ಈ ದಿನ ನನಗೆ ಪಾಸಿಟಿವ್ ಎನರ್ಜಿ ಮತ್ತು ನೆಮ್ಮದಿ ಬೇಕು ಎಂದು ಟ್ವಿಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.
'ಜೀವನದಲ್ಲಿ ಪಾಸಿಟಿವ್ ಎನರ್ಜಿಗೆ ಜಾಗ ಮಾಡುತ್ತಿರುವೆ. ಇದೇ ನನ್ನ ಮೊದಲ ಹೆಜ್ಜೆ ಆಗಲಿದೆ. ಗುಡ್ ಬೈ ಟ್ವಿಟರ್' ಎಂದು ಕರಣ್ ಬರೆದುಕೊಂಡಿದ್ದಾರೆ.
ಕರಣ್ ಅಭಿಮಾನಿಗಳು 'ಜೀವನದಲ್ಲಿ ನೆಮ್ಮದಿ ಮತ್ತು ಪಾಸಿಟಿವ್ ಎನರ್ಜಿ ತುಂಬಾನೇ ಮುಖ್ಯವಾಗುತ್ತದೆ ಹೀಗಾಗಿ ತಲೆ ಕೆಡಿಸಿಕೊಳ್ಳಬೇಡಿ ಇದರಿಂದ ದೂರ ಉಳಿದು ಬಿಡಿ' ಎಂದು ಕಾಮೆಂಟ್ ಮಾಡಿದ್ದಾರೆ.
ಟ್ವಿಟರ್‌ನಿಂದ ಮಾತ್ರ ಕರಣ್ ಹೊರ ಬಂದಿರುವುದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆಕ್ಟಿವ್ ಆಗಿರುತ್ತಾರಂತೆ. ವಿಶ್ವ ಮಾನಸಿಕ ಆರೋಗ್ಯ ದಿನ ಮಾನಸಿಕ ಆರೋಗ್ಯದ ಬಗ್ಗೆನೂ ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು.
'ವರ್ಷಗಳು ಕಳೆಯುತ್ತಿದ್ದಂತೆ ನಾನು ಎಮ್ಮೆ ಚರ್ಮದ ರೀತಿ ಆದೆ. ಜನರು ನನ್ನ ಬಗ್ಗೆ ಮಾತನಾಡುವ ರೀತಿ ಕಾಮೆಂಟ್‌ಗಳನ್ನು ನೋಡಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಓದುವ ರೀತಿ ತಪ್ಪಿದ್ದರೆ ಅಗ ನನಗೆ ಹಿಂಸೆ ಆಗಬೇಕು'
'ಎಷ್ಟು ಕ್ರೂರಿ ಅಂದ್ರೆ ನನ್ನ ಮಕ್ಕಳನ್ನು ನಿಂದಿಸುತ್ತಿದ್ದರು. ದಯವಿಟ್ಟು ಅವರನ್ನು ಬಿಟ್ಟು ಬಿಡಿ. ನನ್ನ ಬಗ್ಗೆ ಏನು ಬೇಕು ಹೇಳಿ? ನನ್ನ ಲಿಂಗ್ ನನ್ನ ಸುತ್ತ ಇರುವ ಗಾಸಿಪ್ ಅಥವಾ ಅದಕ್ಕಿಂತ ಕೆಟ್ಟದು?'
'ನಾನು ಥೆರಪಿಗಳಿಗೆ ಒಳಗಾಗಿರುವೆ ನನ್ನಗೂ ಹಿಂದೆ ನಡೆದಿರುವ ಘಟನೆಗಳು ಮಾನಸಿಕವಾಗಿ ನೋವುಂಟು ಮಾಡಿದೆ. ಆದೆ ಈಗ ಮಾನಸಿಕವಾಗಿ ಗಟ್ಟಿಯಾಗಿರುವೆ' ಎಂದಿದ್ದಾರೆ ಕರಣ್.