ನಾನು ಗರ್ಭಿಣಿಯಾದರೂ ಗರ್ಲ್‌ಫ್ರೆಂಡ್ಸ್‌ ಜೊತೆ ಬ್ಯುಸಿಯಾಗಿದ್ದ: ಸಿದ್ದಿಕಿ ಪತ್ನಿ ಅರೋಪ

First Published | Jul 15, 2020, 1:39 PM IST

ಇತ್ತೀಚೆಗೆ ಬಾಲಿವುಡ್‌ನ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ದಿಕಿಯ ಡಿವೋರ್ಸ್‌ ವಿಷಯ ಸದ್ದು ಮಾಡುತ್ತಿದೆ. ಪತ್ನಿ ಆಲಿಯಾ ಸಿದ್ದಿಕಿಗೆ ನೋಟಿಸ್‌ ನೀಡಿರುವ ವಿಷಯ ತಿಳಿದೇ ಇದೆ. ಈಗ ನಟನ ಬಗ್ಗೆ ಗಂಭೀರ ಅರೋಪಗಳನ್ನು ಹೊರಿಸಿದ್ದಾರೆ ಪತ್ನಿ ಆಲಿಯಾ. ಅವರು ನೀಡಿದ ಸಂದರ್ಶನ ವೈರಲ್ ಆಗುತ್ತಿದೆ. ಮತ್ತೊಮ್ಮೆ ತಮ್ಮ ಗಂಡನ ಬಗ್ಗೆ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾಳೆ. ಈ ಬಾರಿ ಆಲಿಯಾಳ ಆರೋಪ ನಿಜಕ್ಕೂ ಆಘಾತಕಾರಿ.

ನವಾಜುದ್ದೀನ್ ಸಿದ್ದಿಕಿಯ ವೈಯಕ್ತಿಕ ಜೀವನ ಈ ದಿನಗಳಲ್ಲಿ ನಿರಂತರವಾಗಿ ಸುದ್ದಿಯಾಗುತ್ತಿದೆ. ಇತ್ತೀಚೆಗೆ, ಅವರ ಪತ್ನಿ ಆಲಿಯಾ ಅವರ ವಕೀಲರ ಮೂಲಕ ವಿಚ್ಚೇದನದ ನೋಟೀಸ್ ಕಳುಹಿಸಿದ್ದಾರೆ.
ಇದರ ನಂತರ, ನಟನ ಸೊಸೆ, ಸಶಾ ಸಿದ್ದಿಕಿ, ನವಾಜುದ್ದೀನ್ ಸಹೋದರ ಮಿನಾಜುದ್ದೀನ್ ಸಿದ್ದಿಕಿ ಬಗ್ಗೆ, ವರ್ಷಗಳಿಂದ ಲೈಂಗಿಕ ಕಿರುಕುಳಕ್ಕೆ ಹೇಗೆ ಬಲಿಯಾಗಿದ್ದಾಳೆ ಎಂಬುದರ ಬಗ್ಗೆಯೂ ಬಹಿರಂಗಪಡಿಸಿದರು.
Tap to resize

ಆಲಿಯಾ ಮತ್ತೆ ಕೆಲವು ಆಘಾತಕಾರಿ ವಿಷಯಗಳನ್ನು ಬಹಿರಂಗ ಮಾಡಿದ್ದಾರೆ, ನವಾಜ್ ವಿರುದ್ಧಗಂಭೀರ ಆರೋಪಗಳನ್ನು ಮಾಡಿದ್ದಾರೆ. 2003ರಿಂದ ನವಾಜ್‌ ಪರಿಚಯವಿರುವುದಾಗಿ ಆಲಿಯಾ ಹೇಳಿದ್ದಾರೆ. 'ನಾವು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದೆವು. ಅವರ ಸಹೋದರ ಶಮಾಸ್ ನನ್ನೊಂದಿಗೆ ವಾಸಿಸುತ್ತಿದ್ದರು. ಅವರು ಮತ್ತು ನಾನು ಒಂದು ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ,ಎಂದ ನಟನ ಪತ್ನಿ ಆಲಿಯಾ ಹೇಳಿದ್ದಾರೆ.
'ಕ್ರಮೇಣ ನವಾಜ್ ಮತ್ತು ನನ್ನ ನಡುವಿನ ನಿಕಟತೆ ಬೆಳೆಯಿತು. ನಮ್ಮ ಜರ್ನಿ ಪುನರಾರಂಭವಾಯಿತು ಮತ್ತು ನಾವು ಅಂತಿಮವಾಗಿ ಮದುವೆಯಾದೆವು. ಆದಾಗ್ಯೂ, ನಮಗೆ ಮೊದಲಿನಿಂದಲೂ ಸಮಸ್ಯೆಗಳಿದ್ದವು. ಎಲ್ಲವೂ ಮುಗಿಯುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಅದು 15-16 ವರ್ಷಗಳಾದರೂ ಚಿತ್ರಹಿಂಸೆ ನಿಲ್ಲಲಿಲ್ಲ' ಎಂದಿದ್ದಾರೆ ನವಾಜುದ್ದೀನ್ ಸಿದ್ದಿಕಿ ಹೆಂಡತಿ.
'ನಾವು ಡೇಟಿಂಗ್ ಮಾಡುತ್ತಿದ್ದಾಗ ಮತ್ತು ಮದುವೆಯಾಗುವಾಗಲೂ ಸಿದ್ಧಿಕಿ ಬೇರೊಬ್ಬರೊಂದಿಗಿನ ಸಂಬಂಧದಲ್ಲಿದ್ದರು ಎಂಬುದು ನನಗೆ ಚೆನ್ನಾಗಿ ನೆನಪಿದೆ. ಮದುವೆಯ ಮೊದಲು ಮತ್ತು ನಂತರವೂ ನಾವು ಸಾಕಷ್ಟು ಜಗಳವಾಡುತ್ತಿದ್ದೆವು. ನಾನು ಗರ್ಭಿಣಿಯಾಗಿದ್ದಾಗ, ನಾನೇ ಡ್ರೈವ್‌ ಮಾಡಿಕೊಂಡು ವೈದ್ಯರ ಬಳಿಗೆ ಹೋಗುತ್ತಿದ್ದೆ,' ಎಂದು ಆರೋಪಿಸಿದ್ದಾರೆ ಆಲಿಯಾ.
'ನನಗೆ ಲೇಬರ್ ಪೈನ್‌ ಪ್ರಾರಂಭವಾದಾಗ ನನ್ನ ಪತಿ ನನ್ನೊಂದಿಗೆ ಇರಲಿಲ್ಲ. ಅವನು ತನ್ನ ಗರ್ಲ್‌ಫ್ರೆಂಡ್‌ನೊಂದಿಗೆಪೋನ್‌ನಲ್ಲಿ ಮಾತನಾಡುತ್ತಿದ್ದನು. ಫೋನ್ ಬಿಲ್‌ನ ಸ್ಟೇಟ್‌ಮೆಂಟ್‌ನ ಕಾರಣದಿಂದ ನನಗೆ ಎಲ್ಲವೂ ತಿಳಿದಿದೆ,' ಎಂದು ಅವರು ಹೇಳಿದರು.
'ಈ ಮದುವೆಯಿಂದ ಅವಳ ಮೇಲೆ ಆಗುತ್ತಿರುವ ದೌರ್ಜನ್ಯಗಳು ಈಗೀಗ ಮಿತಿ ಮೀರಿದೆ. ನಮ್ಮ ದಾಂಪತ್ಯದಲ್ಲಿಬಹಳ ಸಮಯದಿಂದ ಕಷ್ಟಗಳು ಇದ್ದವು. ನಾನು ಮದುವೆಯಾಗಿದ್ದು ನಿಜ ಆದರೆ ಈಗ ಅದನ್ನು ಮುಂದುವರಿಸುವುದು ತುಂಬಾ ಕಷ್ಟ. ನಾನು ಅನೇಕ ವಿಷಯಗಳನ್ನು ಪರಿಹರಿಸಲು ಪ್ರಯತ್ನಿಸಿದೆ ಮತ್ತು ಅವುಗಳು ಉತ್ತಮಗೊಳ್ಳಲು ಕಾಯುತ್ತಿದ್ದೆ. ಆದರೆ ಅಂತಿಮವಾಗಿ ನಾನು ವಿಚ್ಛೇದನ ಪಡೆಯುವ ನಿರ್ಧಾರ ತೆಗೆದುಕೊಳ್ಳಬೇಕಾಯಿತು' ಎಂದು ಪಿಂಕಿವಿಲ್ಲಾಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
'ಸ್ವಾಭಿಮಾನವು ಮದುವೆಯಲ್ಲಿ ದೊಡ್ಡ ವಿಷಯ. ನನಗೆ ಯಾವುದೇ ಅಸ್ತಿತ್ವವೇ ಇಲ್ಲ ಎನ್ನುವ ಹಾಗೇ ಭಾವಿಸಲಾಗುತ್ತದೆ. ಅವನ ಸಹೋದರ ಶಮ್ಸ್ ಇದಕ್ಕೆ ದೊಡ್ಡ ಕಾರಣ. ನಾನು ಈಗ ನನ್ನ ಹಳೆಯ ಹೆಸರು ಅಂಜನಾ ಕಿಶೋರ್ ಪಾಂಡೆಗೆ ಬದಲಾಯಿಸಿಕೊಂಡಿದ್ದೇನೆ' ಎಂದ ಆಲಿಯಾ ಭವಿಷ್ಯದ ಬಗ್ಗೆ ಮಾತನಾಡುತ್ತಾ,' ನಾನು ಇನ್ನೂ ಇದರ ಬಗ್ಗೆ ಹೆಚ್ಚು ಯೋಚಿಸಿಲ್ಲ' ಎಂದು ಎನ್ನುತ್ತಾರೆ.

Latest Videos

click me!