'ಮೂರನೇ ವ್ಯಕ್ತಿಯಿಂದ ದಾಂಪತ್ಯ ಹಳಸಿತ್ತು, ಈಗೆಲ್ಲ ಸರಿ ಹೋಗಿದೆ' ಮತ್ತೆ ಒಂದಾದ ನವಾಜುದ್ದೀನ್ ಸಿದ್ದಿಕಿ ದಂಪತಿ

First Published | Mar 28, 2024, 2:07 PM IST

ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಪತ್ನಿ ಆಲಿಯಾ ಸಿದ್ದಿಕಿ ಕಳೆದ ಕೆಲ ವರ್ಷಗಳ ಕಹಿ ಪ್ರತ್ಯೇಕತೆಯ ನಂತರ ಮತ್ತೆ ಒಟ್ಟಿಗೆ ಸೇರಿದ್ದಾರೆ. ಮೂರನೇ ವ್ಯಕ್ತಿಯಿಂದ ತಾವು ಬೇರೆಯಾಗಿದ್ದೆವು ಎಂದು ಆಲಿಯಾ ಹೇಳಿದ್ದಾರೆ. 

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಪತ್ನಿ ಆಲಿಯಾ ಸಿದ್ದಿಕಿ ಕಹಿ ಪ್ರತ್ಯೇಕತೆಯ ನಂತರ ಮತ್ತೆ ಒಟ್ಟಿಗೆ ಸೇರಿದ್ದಾರೆ. ತಮ್ಮ 14 ನೇ ವಿವಾಹ ವಾರ್ಷಿಕೋತ್ಸವದ ಆಚರಣೆಯ ಚಿತ್ರಗಳನ್ನು ಹಂಚಿಕೊಂಡ ಬಳಿಕ ಈ ಬಗ್ಗೆ ತುಟಿ ಬಿಚ್ಚಿದ್ದಾರೆ. 

ಗ್ಯಾಂಗ್ಸ್ ಆಫ್ ವಾಸೇಪುರ್ ನಟ ಸಿದ್ದಿಕಿ ಹಾಗ ಆತನ ತಾಯಿಯ ಮೇಲೆ 2020ರಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಆಲಿಯಾ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. 

Tap to resize

ನವಾಜುದ್ದೀನ್ ತನ್ನನ್ನು ಹಾಗೂ ಇಬ್ಬರು ಮಕ್ಕಳನ್ನು ಮನೆಯಿಂದ ಹೊರ ಹಾಕಿದ್ದಾಗಿ ಆಲಿಯಾ ಆರೋಪಿಸಿದ್ದರು. ದುಬೈನಲ್ಲಿ ಮಕ್ಕಳ ಶಾಲೆ ತಪ್ಪಿಸಿ ಏಕಾಏಕಿ ಹಿಂದಿರುಗಿದ್ದಕ್ಕಾಗಿ ಹಾಗೆ ಮಾಡಿದ್ದಾಗಿ ನವಾಜುದ್ದೀನ್ ಹೇಳಿದ್ದರು. 

ಅಲ್ಲದೆ, ನಾವಜುದ್ದೀನ್ ಹೆಸರು ನಟಿ ನಿಹಾರಿಕಾ ಸಿಂಗ್ ಜೊತೆ ಕೇಳಿ ಬರಲಾರಂಭಿಸಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ದಂಪತಿಯು ಪರಸ್ಪರ ಸಾಕಷ್ಟು ಕೆಸರೆರಚಾಟ ಮಾಡಿಕೊಂಡಿದ್ದರು. 

ಆದರೆ, ಇದೀಗ ದುಬೈನಲ್ಲಿ ಪತಿ ಪತ್ನಿ ಹಾಗೂ ಇಬ್ಬರು ಮಕ್ಕಳು ಒಟ್ಟಿಗೇ ಇರುವ ಚಿತ್ರವನ್ನು ಆಲಿಯಾ ಹಂಚಿಕೊಂಡಿದ್ದು, 'ನನ್ನ ಒನ್ ಆ್ಯಂಡ್ ಓನ್ಲಿ ಲವ್ ಜೊತೆಗೆ 14 ವರ್ಷಗಳ ಆಶೀರ್ವಾದ, ಆ್ಯನಿವರ್ಸರಿ ಚೀರ್ಸ್' ಎಂದು ಬರೆದಿದ್ದಾರೆ. 

ಬಿಗ್ ಬಾಸ್ ಒಟಿಟಿ ಸೀಸನ್ 2 ನಲ್ಲಿ ಕಾಣಿಸಿಕೊಂಡಿದ್ದ ಆಲಿಯಾ, ಮೂರನೇ ವ್ಯಕ್ತಿಯಿಂದ ನಮ್ಮ ಸಂಬಂಧ ಹಾಳಾಗಿತ್ತು. ಈಗ ಎಲ್ಲವೂ ಬದಲಾಗಿದೆ. ಮಕ್ಕಳಿಗಾಗಿ ನಾವು ಮತ್ತೆ ಒಂದಾಗಿ ಬದುಕಲು ನಿರ್ಧರಿಸಿದ್ದೇವೆ ಎಂದಿದ್ದಾರೆ. 

ಕಳೆದ ವರ್ಷವಷ್ಟೇ ಆಲಿಯಾ ದುಬೈನಲ್ಲಿ ತಮಗೆ ಇಟಲಿ ಮೂಲದ ವ್ಯಕ್ತಿಯೊಂದಿಗೆ ಪ್ರೀತಿಯಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ, ಈಗ ಮತ್ತೆ ಹಳೆಯ ಗಂಡನ ಪಾದವೇ ಗತಿ ಎಂದು ಹಿಂದಿರುಗಿದ್ದಾರೆ. 

ಮಕ್ಕಳಾದ ಶೋರಾ ಮತ್ತು ಯಾನಿ ಈ ದಂಪತಿಯು ಒಟ್ಟಾಗಿರುವುದರಿಂದ ಸಂತೋಷವಾಗಿದ್ದಾರೆ ಎನ್ನಲಾಗಿದೆ. ನಮ್ಮ ನಡುವಿನ ಕೆಟ್ಟ ವಿಷಯವನ್ನು ಜಗತ್ತಿಗೆ ಬಹಿರಂಗಪಡಿಸಿದಷ್ಟೇ ಎಲ್ಲವೂ ಸರಿಯಾಗಿರುವುದನ್ನೂ ಹೇಳುವುದು ಮುಖ್ಯವಾಗಿದೆ ಎಂದು ಆಲಿಯಾ ಹೇಳಿದ್ದಾರೆ. 

'ಮಕ್ಕಳು ಬೆಳೆಯುತ್ತಿದ್ದಾರೆ, ಮಗಳು ಶೋರಾ ತಂದೆಯನ್ನು ಬಹಳ ಹಚ್ಚಿಕೊಂಡಿದ್ದಾಳೆ. ಇನ್ನು ನಾವು ಸೋಲೊಪ್ಪಿಕೊಂಡು ಶರಣಾಗದೆ ಬೇರೆ ವಿಧಿ ಇರಲಿಲ್ಲ, ಹಾಗಾಗಿ ಶಾಂತಿಯಿಂದ ಒಟ್ಟಾಗಿ ಬದುಕಲು ನಿಶ್ಚಯಿಸಿದ್ದೇವೆ ' ಎಂದು ಆಲಿಯಾ ಹೇಳಿದ್ದಾರೆ. 

Latest Videos

click me!