National Film Awards 2021: 4ನೇ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕಂಗನಾ

First Published | Oct 25, 2021, 3:54 PM IST

ಕಾಂಟ್ರವರ್ಸಿಗಳಿರಲಿ, ವಿಪರೀತ ಹೇಳಿಕೆಗಳಿರಲಿ, ಏನೇ ಆದ್ರೂ ನಟಿ ಕಂಗನಾ ರಣಾವತ್(Kangana Ranaut) ಅವರ ನಟನೆಯ ಬಗ್ಗೆ ಎರಡು ಮಾತಿಲ್ಲ. ಅವರನ್ನು ಎಷ್ಟೇ ಹೇಟ್ ಮಾಡುವವರಿದ್ದರೂ ಅವರ ನಟನೆಗೆ ಸೋಲದೆ ಇರರು. ಅಂಥಹಾ ಅದ್ಭುತ ಪ್ರತಿಭೆಯ ನಟಿ ಕಂಗನಾ. ಈಗ ನಾಲ್ಕನೇ ಬಾರಿಗೆ National Film Awards 2021ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಅಕ್ಟೋಬರ್ 25 ರ ಸೋಮವಾರದಂದು 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು ಬಾಲಿವುಡ್ ಕಂಗನಾ ರಣಾವತ್ 4ನೇ ಬಾರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಈ ವರ್ಷ ಗೆದ್ದವರಿಗೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಪ್ರಶಸ್ತಿಗಳನ್ನು ನೀಡಿದ್ದಾರೆ. ಪ್ರಶಸ್ತಿ ಪುರಸ್ಕೃತರಲ್ಲಿ ಕಂಗನಾ ರಣಾವತ್ ಮತ್ತು ಮನೋಜ್ ಬಾಜಪೇಯಿ ಸೇರಿದ್ದಾರೆ.

ಮಣಿಕರ್ಣಿಕಾ: ಕ್ವೀನ್ ಆಫ್ ಝಾನ್ಸಿ ಮತ್ತು ಪಂಗಾ ಸಿನಿಮಾದ ಅಭಿನಯಕ್ಕಾಗಿ ಕಂಗನಾ(Kangana Ranaut) ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯಿತು. ಸಾಂಪ್ರದಾಯಿಕ ಸೀರೆಯನ್ನು ಧರಿಸಿದ ನಟಿ ವೇದಿಕೆಯ ಮೇಲೆ ನಡೆದು ಪ್ರಶಸ್ತಿ ಸ್ವೀಕರಿಸಿದರು.

Tap to resize

ಇದು ಅವರ ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿ. ಈ ಹಿಂದೆ ಫ್ಯಾಷನ್‌ ಪಾತ್ರಕ್ಕಾಗಿ ಬೆಸ್ಟ್ ಸಪೋರ್ಟಿಂಗ್ ನಟಿ ಪ್ರಶಸ್ತಿ ಗೆದ್ದಿದ್ದರು. ಕ್ವೀನ್ ಮತ್ತು ತನು ವೆಡ್ಸ್ ಮನು ರಿಟರ್ನ್ಸ್‌ಗಾಗಿ ಅವರು ಅತ್ಯುತ್ತಮ ನಟಿ ಪ್ರಶಸ್ತಿ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದರು.

ರಾಷ್ಟ್ರೀಯ ಪ್ರಶಸ್ತಿಗಳನ್ನು 2021 ಅನ್ನು ಮಾರ್ಚ್‌ನಲ್ಲಿ ಘೋಷಿಸಲಾಯಿತು. ಪ್ರತಿಷ್ಠಿತ ಪ್ರಶಸ್ತಿ ಪ್ರದರ್ಶನವು 2019 ರಲ್ಲಿ ಅತ್ಯುತ್ತಮ ಚಲನಚಿತ್ರಗಳನ್ನು ಗುರುತಿಸಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಾರ್ಷಿಕ ಪ್ರಶಸ್ತಿಗಳು ವಿಳಂಬವಾಗಿದ್ದವು.

ಬಾಲಿವುಡ್(Bollywood) ನೆಪೊಟಿಸಂ ಸೇರಿ ದೇಶದಲ್ಲಿ ಯಾವುದೇ ಬೆಳವಣಿಗೆಗಳಾದಾಗ ಪ್ರತಿಕ್ರಿಯಿಸೋ ಕಂಗನಾ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಟ್ವಿಟರ್‌ನಿಂದ ಬ್ಯಾನ್ ಆದರು. ಇದೆಲ್ಲದರ ಮಧ್ಯೆ ನಟಿ ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ

ತಮಿಳುನಾಡು ಸಿಎಂ ಜಯಲಲಿತಾ ಅಭಿನಯದ ತಲೈವಿ ಸಿನಿಮಾ ಕಂಗನಾ ರಣಾವತ್‌ಗೆ ಸೌತ್ & ನಾರ್ತ್‌ನಲ್ಲಿ ಒಂದೇ ರೀತಿಯ ಫೇಮ್ ತಂದುಕೊಟ್ಟ ಸಿನಿಮಾ. ಬಾಲಿವುಡ್‌ ಸಿನಿಮಾಗಳು ಒಟಿಟಿ ರಿಲೀಸ್ ಕಾಣುವ ಸಂದರ್ಭ ಥಿಯೇಟರ್‌ನಲ್ಲಿ ರಿಲೀಸ್ ಆದ ಸಿನಿಮಾ ಕೂಡಾ ಹೌದು

Kangana Ranaut

ಕಾಂಟ್ರವರ್ಸಿಗಳಿರಲಿ, ವಿಪರೀತ ಹೇಳಿಕೆಗಳಿರಲಿ, ಏನೇ ಆದ್ರೂ ನಟಿ ಕಂಗನಾ ರಣಾವತ್(Kangana Ranaut) ಅವರ ನಟನೆಯ ಬಗ್ಗೆ ಎರಡು ಮಾತಿಲ್ಲ. ಅವರನ್ನು ಎಷ್ಟೇ ಹೇಟ್ ಮಾಡುವವರಿದ್ದರೂ ಅವರ ನಟನೆಗೆ ಸೋಲದೆ ಇರರು. ಅಂಥಹಾ ಅದ್ಭುತ ಪ್ರತಿಭೆಯ ನಟಿ ಕಂಗನಾ. ಈಗ ನಾಲ್ಕನೇ ಬಾರಿಗೆ National Film Awards 2021ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ನಾವೆಲ್ಲರೂ ನಮ್ಮ ಹೆತ್ತವರ ಪ್ರೀತಿ, ಕಾಳಜಿ ಮತ್ತು ತ್ಯಾಗಗಳಿಗೆ ಅರ್ಹರಾಗಬೇಕೆಂಬ ಆಳವಾದ ಬಯಕೆಯೊಂದಿಗೆ ಬೆಳೆಯುತ್ತೇವೆ. ಎಲ್ಲಾ ತೊಂದರೆಗಳ ನಂತರ ನಾನು ನನ್ನ ಮಮ್ಮಿ ತಂದೆಗೆ ಇಂತಹ ದಿನಗಳನ್ನು ಕೊಡುತ್ತೇನೆ. ಅಂತಹ ದಿನಗಳು ಅಂದಿನ ಆ ಎಲ್ಲಾ ದುಷ್ಕೃತ್ಯಗಳನ್ನು ಸರಿದೂಗಿಸುತ್ತದೆ. ನನ್ನ ಮಮ್ಮಿ ಪಾಪಾ ಆಗಿದ್ದಕ್ಕಾಗಿ ಧನ್ಯವಾದಗಳು ಎಂದು ನಟಿ ಪೋಸ್ಟ್ ಶೇರ್ ಮಾಡಿದ್ದಾರೆ.

ಚಂದದ ರೇಶಿಮೆ ಸೀರೆ ಉಟ್ಟು, ಹೆವಿ ಆಭರಣಗಳನ್ನು ಧರಿಸಿದ್ದ ನಟಿ ಕೆಂಬಣ್ಣದ ಬಿಂದಿ ಇಟ್ಟಿದ್ದರು. ಮುಡಿಗೆ ಮಲ್ಲಿಗೆ ಇಟ್ಟಿದ್ದ ಕಂಗನಾ ಪ್ರಶಸ್ತಿ ಜೊತೆಗೆ ಎಂದಿನಂತೆ ತಮ್ಮ ವಿಕ್ಟರಿ ಸಿಂಬಲ್ ತೋರಿಸಿದ್ದಾರೆ.

Latest Videos

click me!