ಹಾಗೆಯೇ ಎನ್‌ಕೌಂಟರ್ ಸ್ಪೆಷಲಿಸ್ಟ್ ಸ್ಟೀಫನ್ ರಾಜ್‌ಗೂ ಬಾಲಯ್ಯ ಯಾರು ಅಂತ ಗೊತ್ತಾಗುತ್ತೆ. ಅವರು ಬೇರೆ ಯಾರೂ ಅಲ್ಲ, ಡಾಕು ಮಹಾರಾಜ ಅಂತ ಗುರುತಿಸ್ತಾನೆ. ನಿಜವಾಗ್ಲೂ ಈ ಡಾಕು ಮಹಾರಾಜ ಯಾರು... ಆ ಹುಡುಗಿಯ ಕುಟುಂಬಕ್ಕೂ, ಅವನಿಗೂ ಏನು ಸಂಬಂಧ... ಆ ಮಟ್ಟದ ವ್ಯಕ್ತಿ ಒಬ್ಬ ಡ್ರೈವರ್ ಆಗಿ ಅವರ ಮನೆಯಲ್ಲಿ ಯಾಕೆ ಸೇರಬೇಕಾಯ್ತು, ಬಾಬಿ ಡಿಯೋಲ್‌ಗೂ ಬಾಲಯ್ಯನಿಗೂ ಇರೋ ದ್ವೇಷ ಏನು ಅನ್ನೋದೆಲ್ಲ ಗೊತ್ತಾಗ್ಬೇಕಂದ್ರೆ ಸಿನಿಮಾ ನೋಡ್ಬೇಕು.