ಬಹುಕಾಲದ ಗೆಳತಿ ರಮ್ಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ನಾಗಿನಿ-2' ಹೀರೋ ನಿನಾದ್

Published : May 21, 2022, 03:42 PM ISTUpdated : May 21, 2022, 03:43 PM IST

ಕನ್ನಡ ಕಿರುತೆರೆಯ ಖ್ಯಾತ ನಟ ನಿನಾದ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಖ್ಯಾತ ನಟ ನಿನಾದ ಬಹುಕಾಲದ ಗೆಳತಿ ರಮ್ಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ನಿನಾದ್ ಪ್ರೇಯಸಿ ರಮ್ಯಾಗೆ ಮಾಂಗಲ್ಯ ಧಾರಣೆ ಮಾಡಿದರು.  

PREV
17
ಬಹುಕಾಲದ ಗೆಳತಿ ರಮ್ಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ನಾಗಿನಿ-2' ಹೀರೋ ನಿನಾದ್

ಕನ್ನಡ ಕಿರುತೆರೆಯ ಖ್ಯಾತ ನಟ ನಿನಾದ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಖ್ಯಾತ ನಟ ನಿನಾದ ಬಹುಕಾಲದ ಗೆಳತಿ ರಮ್ಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ನಿನಾದ್ ಪ್ರೇಯಸಿ ರಮ್ಯಾಗೆ ಮಾಂಗಲ್ಯ ಧಾರಣೆ ಮಾಡಿದರು.

27

ನಿನಾದ್ ಮತ್ತು ರಮ್ಯಾ ಮದುವೆ ಮೇ 20 ರಂದು ಬೆಂಗಳೂರಿನಲ್ಲಿ ನೆರವೇರಿತು. ಈ ಮದುವೆ ಸಮಾರಂಭದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆ ಗಣ್ಯರು ಹಾಜರಿದ್ದರು. ನವ ಜೋಡಿಗೆ ಶುಭಹಾರೈಸಿದು. ನಿನಾದ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

37

ನಟ ನಿನಾದ್ ಬಿಳಿ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದರು. ರಮ್ಯಾ ಸಹ ರಾಯಲ್ ಲುಕ್ ಲ್ಲಿ ಕಂಗೊಳಿಸುತ್ತಿದ್ದರು. ಅಂದಹಾಗೆ ನಟ ನಿನಾದ್ ತನ್ನ ಪ್ರೀತಿ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ.

47

ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ನಿನಾದ್ ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದರು. ಈ ಬಗ್ಗೆ ನಿನಾದ್ ಸಾಮಾಜಿಕ ಜಾಲತಾಣದಲ್ಲಿ, 'ಎಲ್ಲರೊಟ್ಟಿಗೆ ಸಂತೋಷದ ವಿಚಾರವನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಇಂದು ಗುರು ಹಿರಿಯರ ಸಮ್ಮುಖದಲ್ಲಿ ಅವರ ಆಶೀರ್ವಾದ ಪಡೆದುಕೊಂಡು ರಮ್ಯಾ ಮತ್ತು ನಾನು ನಿಶ್ಚಿತಾರ್ಥ ಮಾಡಿಕೊಂಡಿದ್ದೀವಿ' ಎಂದು ಬರೆದಿದ್ದರು.

57

'ನಮ್ಮ ಆಯ್ಕೆಯನ್ನು ನಮ್ಮ ಪೋಷಕರು ಒಪ್ಪಿರುವುದಕ್ಕೆ ನಮಗೆ ತುಂಬಾನೇ ಸಂತೋಷವಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲಿರಲಿ. ನಾನು ನಿಮ್ಮ ನಿನಾದ್ ಇವಳು ನನ್ನ ರಮ್ಯಾ' ಎಂದು ಭಾವಿ ಪತ್ನಿಯನ್ನು ಪರಿಚಯಿಸಿದ್ದರು.

67

ಕನ್ನಡ ಕಿರುತೆರೆಯ ಜನಪ್ರಿಯ ನಟನಾಗಿ ಹೊರಹೊಮ್ಮಿರುವ ನಿನಾದ್ ಸದ್ಯ ನಾಗಿನಿ-2 ನಲ್ಲಿ ನಟಿಸಿದ್ದರು. ಬಾಲಕಲಾವಿದನಾಗಿ ನಿನಾದ್ ಬಣ್ಣದ ಲೋಕದ ಜರ್ನಿ ಪ್ರಾರಂಭ ಮಾಡಿದರು.

77

ನಿನಾದ್ ನಾಗಿನ-2 ಧಾರಾವಾಹಿಯಲ್ಲಿ ತ್ರಿಶೂಲ್ ಪಾತ್ರದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಸಿದ್ದರು. ತ್ರಿಶೂಲ್ ಹಿಂದಿನ ಜನ್ಮದಲ್ಲಿ ನಾಗರಾಜನಾಗಿದ್ದರು. ಈ ಧಾರಾವಾಹಿ ನಿನಾದ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ.

Read more Photos on
click me!

Recommended Stories