ಪುಷ್ಪ 3 ಸ್ಪೆಷಲ್ ಸಾಂಗ್‌ಗೆ ಈ ನಟಿ ಡ್ಯಾನ್ಸ್ ಮಾಡಿದ್ರೆ ಸೂಪರ್ ಎಂದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್!

Published : Jan 24, 2025, 03:57 PM IST

ದೇವಿಶ್ರೀ ಪ್ರಸಾದ್ ಮತ್ತು ಸುಕುಮಾರ್ ಕಾಂಬಿನೇಷನ್ ಅಂದ್ರೆ ಐಟಂ ಸಾಂಗ್ ಪಕ್ಕಾ. ಪುಷ್ಪ 3 ಚಿತ್ರದಲ್ಲಿ ಐಟಂ ಸಾಂಗ್ ಯಾರು ಮಾಡ್ತಾರೆ ಅನ್ನೋ ಚರ್ಚೆ ಶುರು ಮಾಡಿದ್ದಾರೆ ದೇವಿಶ್ರೀ ಪ್ರಸಾದ್.

PREV
14
ಪುಷ್ಪ 3 ಸ್ಪೆಷಲ್ ಸಾಂಗ್‌ಗೆ ಈ ನಟಿ ಡ್ಯಾನ್ಸ್ ಮಾಡಿದ್ರೆ ಸೂಪರ್ ಎಂದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್!

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟಿಸಿರೋ ಪುಷ್ಪ 2 ವಿಶ್ವಾದ್ಯಂತ 1800 ಕೋಟಿ ಗಳಿಸಿ ಸೂಪರ್ ಹಿಟ್ ಆಗಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರ ಎಲ್ಲರ ನಿರೀಕ್ಷೆ ಮೀರಿ ಯಶಸ್ಸು ಗಳಿಸಿದೆ. ಪುಷ್ಪ 3 ಬರ್ತಿದೆ ಅಂತ ಆಗ್ಲೇ ಹೇಳಿದ್ದಾರೆ. ಮಧ್ಯದಲ್ಲಿ ಸುಕುಮಾರ್ ರಾಮ್ ಚರಣ್ ಜೊತೆ ಒಂದು ಸಿನಿಮಾ ಮಾಡ್ತಾರೆ.

24

ದೇವಿಶ್ರೀ ಪ್ರಸಾದ್ ಮತ್ತು ಸುಕುಮಾರ್ ಕಾಂಬಿನೇಷನ್ ಅಂದ್ರೆ ಐಟಂ ಸಾಂಗ್ ಪಕ್ಕಾ. ಪುಷ್ಪದ ಮೊದಲ ಭಾಗದಲ್ಲಿ ಸಮಂತ 'ಊ ಅಂತಾವಾ' ಹಾಡಿಗೆ ಅಲ್ಲು ಅರ್ಜುನ್ ಜೊತೆ ಸಖತ್ ಸ್ಟೆಪ್ ಹಾಕಿದ್ರು. ಈ ಹಾಡು ಎಷ್ಟು ಫೇಮಸ್ ಆಯ್ತು ಅಂತ ಹೇಳೋ ಅಗತ್ಯ ಇಲ್ಲ. ಪುಷ್ಪ 2ರಲ್ಲಿ ಶ್ರೀಲೀಲ 'ಕಿಸಿಕ್' ಹಾಡಿಗೆ ಐಟಂ ಸಾಂಗ್ ಮಾಡಿದ್ರು. ಅವರ ಡ್ಯಾನ್ಸ್ ಎಲ್ಲರಿಗೂ ಇಷ್ಟ ಆಯ್ತು.

34

ಪುಷ್ಪ 3ರಲ್ಲಿ ಐಟಂ ಸಾಂಗ್ ಯಾರು ಮಾಡ್ತಾರೆ ಅನ್ನೋ ಚರ್ಚೆ ಶುರು ಮಾಡಿದ್ದಾರೆ ದೇವಿಶ್ರೀ ಪ್ರಸಾದ್. ಅವರು ಹೇಳಿದ್ದಿಷ್ಟು: 'ಪುಷ್ಪ 3 ಐಟಂ ಸಾಂಗ್ ಬಗ್ಗೆ ಈಗಲೇ ಚರ್ಚೆ ಶುರುವಾಗಿದೆ. ಆದ್ರೆ ಫೈನಲ್ ನಿರ್ದಾರ ನಿರ್ದೇಶಕರು ಮತ್ತು ನಿರ್ಮಾಪಕರದ್ದು. ಸಾಯಿ ಪಲ್ಲವಿ ಡ್ಯಾನ್ಸ್ ನನಗೆ ತುಂಬಾ ಇಷ್ಟ.

44

ಜಾನ್ವಿ ಕಪೂರ್ ಕೂಡ ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ. ಅವರ ತಾಯಿ ಶ್ರೀದೇವಿ ಅವರ ಗ್ರೇಸ್ ಜಾನ್ವಿಗೂ ಇದೆ. ಪುಷ್ಪ 3ರಲ್ಲಿ ಜಾನ್ವಿ ಐಟಂ ಸಾಂಗ್ ಮಾಡಿದ್ರೆ ಸೂಪರ್ ಆಗುತ್ತೆ. ಇದು ನನ್ನ ಅಭಿಪ್ರಾಯ ಅಷ್ಟೇ' ಅಂತ ದೇವಿಶ್ರೀ ಪ್ರಸಾದ್ ಹೇಳಿದ್ದಾರೆ.

Read more Photos on
click me!

Recommended Stories