ಜಯಲಲಿತಾ ಸಮಾಧಿಗೆ ಭೇಟಿ ನೀಡಿದ ಕಂಗನಾಗೆ ಮಲ್ಟಿಫ್ಲೆಕ್ಸ್ ಮೇಲೆ ಕಣ್ಣು!

First Published Sep 4, 2021, 5:21 PM IST

ಚೆನ್ನೈ(ಸೆ. 04)  ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಜೀವನ ಆಧಾರಿತ ಸಿನಿಮಾ ಥಲೈವಿ ಹವಾ ಜೋರಾಗಿಯೇ ಇದೆ.  ಚಿತ್ರ ಬಿಡುಗಡೆಗೂ ಮುನ್ನ ಚೆನ್ನೈನಲ್ಲಿರುವ ಜಯಲಲಿತಾ ಅವರ ಸ್ಮಾರಕಕ್ಕೆ ಭೇಟಿ ನೀಡಿದರು.

ಥಲೈವಿ ಓಟಿಟಿ ಮಾದರಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ನಟಿ ಕಂಗನಾ ರಣಾವತ್ ತಮ್ಮದೇ ಮಾದರಿಯಲ್ಲಿ ಪ್ರಚಾರವನ್ನು ಆರಂಭಿಸಿಕೊಂಡಿದ್ದಾರೆ.

ಕೊರೋನಾ ನಿಯಮದ ಕಾರಣಕ್ಕೆ ಚಿತ್ರಮಂದಿರಗಳಿಗೆ ಅವಕಾಶ ಇಲ್ಲ. ಅವಕಾಶ ನೀಡಿ ಎನ್ನುವ ಒತ್ತಾಯ ಮೇಲಿಂದ ಮೇಲೆ ಬರುತ್ತಿದೆ. ಇದು ತಿರುವು ಪಡೆದುಕೊಂಡಿದೆ.

ಈ ವೇಳೆ ಕಂಗನಾ  ಮಲ್ಟಿಫ್ಲೆಕ್ಸ್ ಗಳ  ವಿರುದ್ಧವೂ ಹರಿಹಾಯ್ದಿದ್ದಾರೆ.  ಪಿವಿಆರ್, Inox ಮತ್ತು ಸಿನಿಪೊಲೀಸ್ ಥೈಲವಿ ಚಿತ್ರ ಪ್ರದರ್ಶನ ಮಾಡುವುದಿಲ್ಲ ಎಂದು ಹೇಳಿವೆ.

ಥಲೈವಿ ಚಿತ್ರ ನಿರ್ಮಾಪಕರಿಗೆ ಮಲ್ಟಿಫ್ಲೆಕ್ಸ್ ಗಳು ತೊಂದರೆ ಕೊಡುತ್ತಿವೆ. ಕಿರುಕುಳ ನೀಡಲು ಆರಂಭಿಸಿವೆ ಎಂದು ಹೇಳಿದ್ದಾರೆ. 

ಇಸ್ಟಾಗ್ರ್ಯಾಮ್ ನಲ್ಲಿ ಸರಣಿಯಾಗಿ ಪೋಸ್ಟ್ ಹಾಕಿರುವ ಕಂಗನಾ  ಒಟಿಟಿ ಮಾದರಿಯಲ್ಲಿ ಸಿನಿಮಾ ಬಿಡುಗಡೆಯಾಗುವುದಾದರೆ ಮಲ್ಟಿಫ್ಲೆಕ್ಸ್ ನವರು ಬೆಂಬಲ ನೀಡಬೇಕು .

ಲಿಂಗ ಆಧಾರಿತವಾಗಿ ಸಿನಿಮಾವನ್ನು ಕಾಣಲಾಗುತ್ತಿದೆ.  ಬಿಗ್ ಹೀರೋಗಳ ಸಿನಿಮಾ ಬಂದರೆ ಅನ್ನು ಟ್ರೀಟ್ ಮಾಡುವ ಬಗೆಯೇ ಬೇರೆ ಎಂದಿದ್ದಾರೆ.

ಬೇರೆ ದೃಷ್ಟಿ ಕೋನದಲ್ಲಿ ಆಲೋಚನೆ ಮಾಡಬೇಕಿರುವುದು  ಇಂದಿನ ಅಗತ್ಯ.  ಹಾಗಾಗಿ ಭಿನ್ನವಾಗಿ ಯೋಚನೆ ಮಾಡುವುದರೊಂದಿಗೆ ಸಪೋರ್ಟಿವ್ ಆಗಿ ನಿಲ್ಲಬೇಕು ಎಂದಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ ರಾಧೆ, ವಿಜಯ್ ಅಭಿನಯದ ಮಾಸ್ಟರ್ ಉದಾಹರಣೆ ಕೊಟ್ಟು ಅವರಿಗೆ ನಾಲ್ಕು ವಾರದ ರೂಲ್ಸ್ ಹಾಕಿರಲಿಲ್ಲ ಎಂದಿದ್ದಾರೆ.

click me!