ಉಲ್ಲಾಸದ ಹೂಮಳೆ ಗಾಯಕಿ ಶ್ರೇಯಾಗೆ ಬರ್ಥ್‌ಡೇ ವಿಶ್‌ನ ಸುರಿಮಳೆ

First Published Mar 12, 2020, 6:39 PM IST

ಸುಮಧುರ ಕಂಠದ ಒಡತಿ ಶ್ರೇಯಾ ಘೋಷಾಲ್. ತಮ್ಮ ಹಾಡಿನ ಮೂಲಕ ಭಾರತೀಯರ ಮನ ಗೆದ್ದಿರುವ ಶ್ರೇಯಾ ಬಹು ಭಾಷಾ ಗಾಯಕಿ. ಹಿಂದಿಯ ಝೀ ಟಿವಿಯ 'ಸರಿಗಮ' ಸ್ಪರ್ಧೆಯ ವಿಜೇತರಾಗುವ ಮೂಲಕ ಪರಿಚಯವಾದವರು. ಬಾಲಿವುಡ್ ಮೂಲಕ ಹಿನ್ನಲೆ ಗಾಯನ ಶುರು ಮಾಡಿದ ಶ್ರೇಯಾಗೆ ಕನ್ನಡದ ನಂಟೂ ಉಂಟು. ನಮ್ಮ ಕನ್ನಡದ ಹಲವು ಸಿನಿಮಾಗಳಲ್ಲೂ ಹಾಡಿರುವ ಶ್ರೇಯಾ ಘೋಷಾಲ್‌ಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. ಶ್ರೇಯಾ ಬರ್ಥ್‌ಡೇಗೆ  ಸೆಲೆಬ್ರೆಟಿಗಳಿಂದ ಅಭಿಮಾನಿಗಳ ವರೆಗೆ ಎಲ್ಲರೂ ವಿಶ್‌ ಸುರಿಮಳೆ ಸುರಿಸಿದ್ದಾರೆ.

12 ಮಾರ್ಚ್‌ 1984ರಲ್ಲಿ ಜನಿಸಿದ ಶ್ರೇಯಾ ಘೋಷಾಲ್ ಮೂಲ ಪಶ್ಚಿಮ ಬಂಗಾಳ.
undefined
ಹಿಂದಿಯೊಂದಿಗೆ ದಕ್ಷಿಣದ ಭಾಷೆಗಳಾದ ಕನ್ನಡ, ತೆಲಗು, ತಮಿಳು, ಮಲೆಯಾಳಿ ಚಿತ್ರದಲ್ಲಿ ಹಿನ್ನಲೆ ಗಾಯನದ ಕೀರ್ತಿ ಇವರದ್ದು.
undefined
ಇವರ ಗಾಯನಕ್ಕೆ 4 ಬಾರಿ ನ್ಯಾಷನಲ್‌ ಆವಾರ್ಡ್‌ ದೊರೆತಿದೆ.
undefined
ವಿವಿಧ ಭಾರತೀಯ ಭಾಷೆಗಳಲ್ಲಿ ಚಲನಚಿತ್ರ ಸಂಗೀತ ಮತ್ತು ಆಲ್ಬಮ್‌ಗಳಿಗಾಗಿ ಹಾಡಿರುವ ಶ್ರೇಯಾ ಭಾರತೀಯ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿ.
undefined
4 ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, 2 ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, 7 ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು 6 ಸೌತ್‌ ಫಿಲ್ಮ್‌ಫೇರ್ ಆವಾರ್ಡ್‌ಗಳನ್ನು ಗೆದ್ದಿದ್ದಾರೆ.
undefined
4ನೇ ವಯಸ್ಸಿಗೆ ಶಾಸ್ತ್ರೀಯ ಸಂಗೀತ ಅಭ್ಯಾಸ ಶುರು ಮಾಡಿ, 16 ನೇ ವಯಸ್ಸಿಗೆ ದೇವದಾಸ್‌ ಚಿತ್ರದ ಗಾಯನಕ್ಕೆ ನ್ಯಾಷನಲ್‌ ಆವಾರ್ಡ್‌ ಬಾಚಿಕೊಂಡ ಪ್ರತಿಭೆ.
undefined
ಪ್ಲೇಬ್ಯಾಕ್ ಗಾಯನ ಜೊತೆ ಹಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್‌ ಆಗಿ ಕಾಣಿಸಿಕೊಂಡಿದ್ದಾರೆ.
undefined
2003ರಲ್ಲಿ ಪ್ಯಾರಿಸ್ ಪ್ರಾಣಯ ಚಿತ್ರದಲ್ಲಿ "ಕೃಷ್ಣ ನೀ ಬೇಗನೆ ಬಾರೋ" ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ.
undefined
ಜೊತೆ ಜೊತೆಯಲಿ, ಮುಂಗಾರು ಮಳೆ, ಹುಡುಗಾಟ, ಮಿಲನ, ಸಂಚಾರಿ, ಸಂಜು ವೆಡ್ಸ್‌ ಗೀತಾ, ಕೋಟ್ಟಿಗೊಬ್ಬ 2, ಕಿರಿಕ್‌ ಪಾರ್ಟಿ ಹೀಗೆ ಸುಮಾರು 150ಕ್ಕೂ ಹೆಚ್ಚು ಕನ್ನಡ ಫಿಲ್ಮ್‌ಗಳಿಗೆ ಹಾಡಿರುವ ಚಿತ್ರಗಳ ಪಟ್ಟಿ ತುಂಬಾ ಉದ್ದ.
undefined
ಶ್ರೇಯಾ ವಾಯ್ಸ್‌ ಕೇಳ್ತಾ ಇದ್ದರೆ ಏನೋ ಒಂಥರ ಏನೋ ಒಂಥರ.
undefined
click me!