ಬಾಲಿವುಡ್‌ನ ಹ್ಯಾಪಿ ಕಪಲ್ ಅಜೇಯ್ ದೇವಗನ್ ಮತ್ತು ಕಾಜೋಲ್ ಮಗಳ ನ್ಯಾಸ ನೆಟ್ಟಿಗರಿಗೆ ಫೆವರೆಟ್. ಈಕೆ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ಫೋಟೊಗಳು ಸುದ್ದಿ ಮಾಡ್ತಾ ಇರ್ತಾವೆ. ಇವಳ ಫೋಟೊಗಳು ಆಗಾಗ ಟ್ರೋಲ್ ಆಗಿ, ವೈರಲ್ ಆಗಿದ್ದೂ ಇದೆ. ಕೂದಲು ಬಿಟ್ಟುಕೊಂಡು, ಬಂಗಾರದ ಬಣ್ಣದ ಲೇಹಂಗಾದಲ್ಲಿ ಮುದ್ದಾಗಿ ಕಾಣುತ್ತಿರುವ ಸ್ಟಾರ್ ಕಿಡ್ ನ್ಯಾಸಾ ಫೋಟೋಗೆ ಫಿದಾ ಆದವರು ಕಡಿಮೆ ಏನಿಲ್ಲ. ಓಪನ್ ಹೇರ್ ಬಿಟ್ಟು ಕೊಂಡ ಹಾರಾಡುತ್ತಿರುವ ಕೂದಲ ಹಾಗೆ ನ್ಯಾಸಳ ಪೋಟೋಗಳು ಕೂಡ ಸಖತ್ ಲೈಕ್ ಪಡೆಕೊಂಡು ಹರಿದಾಡುತ್ತಿವೆ. ಹೇಗಿವೆ, ನೀವೇ ನೋಡಿ.