ಧೋನಿ - ಫೆಡರರ್: ದೀಪಿಕಾ ಪಡುಕೋಣೆ ಡೇಟ್ ಮಾಡಿದ ಕ್ರೀಡಾಪಟುಗಳು!

First Published | Oct 1, 2020, 4:58 PM IST

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಈ ದಿನಗಳಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ. ಡ್ರಗ್ಸ್‌ ಕೇಸ್‌ನಲ್ಲಿ ಅವರ ಹೆಸರು ಕೇಳಿ ಬಂದಿದ್ದು ಅದಕ್ಕೆ ಸಂಬಂಧಿಸಿದಂತೆ ನಟಿ ವಿಚಾರಣೆಗೆ ಹಾಜಾರಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಈ ಸಮಯದಲ್ಲಿ ದೀಪಿಕಾಳ ಹಳೆ ಲಿಂಕ್‌ಅಪ್‌ಗಳು ಮತ್ತೆ ಪ್ರಚಾರ ಪಡೆಯುತ್ತಿವೆ. ಕ್ಯಾಪ್ಟನ್‌ ಕೂಲ್‌ ಧೋನಿ ಸೇರಿದಂತೆ ಹಲವು ಕ್ರೀಡಾಪಟುಗಳ ಜೊತೆ ದೀಪಿಕಾಳ ಹೆಸರು ಕೇಳಿಬಂದಿತ್ತು. ನಟಿ ಡೇಟ್‌ ಮಾಡಿದ್ದರು ಎಂದು ಹೇಳಲಾದ ಕ್ರೀಡಾಪಟುಗಳು ಇವರುಗಳು.

ಬಾಲಿವುಡ್ ಸೂಪರ್‌ಸ್ಟಾರ್ ದೀಪಿಕಾ ಪಡುಕೋಣೆ ನಟ ರಣವೀರ್ ಸಿಂಗ್ ಅವರನ್ನು ಇಟಲಿಯ ಲೇಕ್ ಕೊಮೊ ಕೊಮೊದಲ್ಲಿ ವಿವಾಹವಾದರು. ಆದರೆ ಪಡುಕೋಣೆ ತನ್ನ ಪ್ರಿನ್ಸ್ ಚಾರ್ಮಿಂಗ್ ಭೇಟಿಯಾಗುವ ಮೊದಲು, ಕೆಲವರ ಜೊತೆ ಲಿಂಕ್‌ಅಪ್‌ ಆಗಿದ್ದರು.
ಪದ್ಮಾವತ್‌ ನಟಿಯ ಹೆಸರು ಕೋ ಸ್ಟಾರ್‌ಗಳಲ್ಲದೆ ಕ್ರೀಡಾಪಟುಗಳ ಜೊತೆಯೂ ಕೇಳಿಬಂದಿದೆ.
Tap to resize

ಎಂ.ಎಸ್.ಧೋನಿ, ನೊವಾಕ್ ಜೊಕೊವಿಕ್,ಯುವರಾಜ್ ಸಿಂಗ್ ಮತ್ತು ಇನ್ನಿತರ ಕ್ರೀಡಾಪಟುಗಳೊಂದಿಗೆ ಡೇಟಿಂಗ್ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಯುವರಾಜ್ ಸಿಂಗ್: 2007 ರ ಟಿ 20 ವಿಶ್ವಕಪ್ ನಂತರ ದೀಪಿಕಾ ಕ್ರಿಕೆಟಿಗ ಯುವರಾಜ್ ಸಿಂಗ್ ಅವರೊಂದಿಗೆ ಸಂಬಂಧ ಹೊಂದಿದ್ದರು. ದಿ ಟೆಲಿಗ್ರಾಫ್ ಜೊತೆ ಮಾತನಾಡಿದ ಯುವರಾಜ್ ಸಿಂಗ್ ದೀಪಿಕಾ ಅವರೊಂದಿಗಿನ ಶಾರ್ಟ್‌ ರಿಲೆಷನ್‌ಶಿಪ್‌ ಬಗ್ಗೆ ರೀವಿಲ್‌ ಮಾಡಿದ್ದರು.
'ನಾನು ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿ ಬಂದಿದೆ ಮತ್ತು ನಾವು ಮುಂಬಯಿಯಲ್ಲಿರುವ ಕಾಮನ್‌ ಫ್ರೆಂಡ್‌ ಮೂಲಕ ಭೇಟಿಯಾಗಿದ್ದೆವು. ನಾವು ಒಬ್ಬರನ್ನೊಬ್ಬರು ಇಷ್ಟಪಟ್ಟೆವು ಮತ್ತು ಇನ್ನಷ್ಟು ತಿಳಿದುಕೊಳ್ಳಲು ಬಯಸಿದ್ದೆವು. ದೀರ್ಘಾವಧಿಯ ವಿಷಯ ವರ್ಕ್‌ ಆಗುತ್ತದೆಯೇ ಎಂದು ತಿಳಿಯಲು ನಾವು ಪರಸ್ಪರ ಸಾಕಷ್ಟು ಸಮಯವನ್ನು ಕಳೆಯಲಿಲ್ಲ . ವಿಷಯಗಳು ಬದಲಾದಂತೆ ಅವಳು ಮುಂದುವರೆದಳು ಮತ್ತು ನಾನು ಕೂಡಾ ' ಎಂದು ಹೇಳಿದ ಯುವಿ.
ಎಂ.ಎಸ್.ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್. ಧೋನಿ ಮತ್ತು ದೀಪಿಕಾ ಪರಸ್ಪರ ಭೇಟಿಯಾದರು. ಅವರ ಅನೇಕ ಪಂದ್ಯಗಳಿಗೆ ಧೋನಿ ನಟಿಯನ್ನು ಆಹ್ವಾನಿಸಿದರು.
ಈ ಸಮಯದಲ್ಲಿ, ದೀಪಿಕಾ ಅವರಿಗೆ ಇಷ್ಟವಾಗದ ಕಾರಣ ಧೋನಿ ತಮ್ಮ ಟ್ರೇಡ್‌ಮಾರ್ಕ್ ಉದ್ದನೆಯ ಕೂದಲನ್ನು ಕಟ್‌ ಮಾಡುತ್ತಾರೆ ಎಂಬ ವರದಿಗಳು ಬಂದವು .
ನೊವಾಕ್ ಜೊಕೊವಿಕ್: ದೀಪಿಕಾ ಪಡುಕೋಣೆ 2016 ರಲ್ಲಿ ಏಸ್ ಟೆನಿಸ್ ಆಟಗಾರ್ತಿ ನೊವಾಕ್ ಜೊಕೊವಿಕ್ ಜೊತೆ ಡಿನ್ನರ್‌ ಡೇಟ್‌ಗೆ ಹೋದಾಗ, ಟ್ಯಾಬ್ಲಾಯ್ಡ್‌ಗಳು ಮತ್ತು ಗಾಸಿಪ್ ಕಾಲಂಗಳು ಸುದ್ದಿ ಮಾಡಿದ್ದವು.
ನೊವಾಕ್ ಅವರ ಮಾಜಿ ಗೆಳತಿ, ನಟಾಸಾ ಬೆಕ್ವಾಲಾಕ್ ನೊವಾಕ್ ಮತ್ತು ದೀಪಿಕಾ ಸಾಕಷ್ಟು ಹತ್ತಿರವಾಗಿದ್ದಾರೆ ಎಂದು ಆರೋಪಿಸಿದ್ದರು ಎಂಬ ವರದಿಗಳೂ ಸಹ ಕಾಣಿಸಿಕೊಂಡವು.
ರೋಜರ್ ಫೆಡರರ್: ಟೆನ್ನಿಸ್‌ ಸೂಪರ್‌ ಸ್ಟಾರ್‌ ರೋಜರ್‌ ಫೆಡರರ್‌ ಜೊತೆ ಸಹ ದೀಪಿಕಾಳ ಹೆಸರು ಕೇಳಿಬಂದಿದೆ.
ನೊವಾಕ್ ಜೊಕೊವಿಕ್ ನಂತರ, ದೀಪಿಕಾ ಟೆನಿಸ್ ಸ್ಟಾರ್‌ ರೋಜರ್ ಫೆಡರರ್ ಜೊತೆ ಸಂಪರ್ಕ ಹೊಂದಿದ್ದರು. ರೋಜರ್ ಮತ್ತು ದೀಪಿಕಾ ಆಟವನ್ನು ಎಂಜಾಯ್‌ ಮಾಡುವ ಅನೇಕ ಫೋಟೋಗಳು ಹರಿದಾಡಿದವು.
ದೀಪಿಕಾ ಗೆಳೆಯ ರಣವೀರ್ ಸಿಂಗ್ ಅವರನ್ನು ಟೆನಿಸ್ ಲೆಜೆಂಡ್‌ ರೋಜರ್ ಫೆಡರರ್‌ಗಾಗಿ ಬಿಡುವುದಾಗಿ ಹೇಳಿದ್ದರು ಎಂದು ಏಷ್ಯನ್ ಏಜ್‌ ವರದಿ ಮಾಡಿತ್ತು.
ರಾಫೆಲ್ ನಡಾಲ್ : ದೀಪಿಕಾ ಮತ್ತು ಸ್ಪ್ಯಾನಿಷ್ ಟೆನಿಸ್ ಲೆಜೆಂಡ್‌ ರಾಫೆಲ್ ನಡಾಲ್ ದೆಹಲಿಯಲ್ಲಿ 2015 ರಲ್ಲಿ ಕೆಲವು ದಿನಗಳನ್ನು ಕಳೆದರು.ಅವರ ಕೆಮಿಸ್ಟ್ರಿ ಹೆಡ್‌ಲೈನ್‌ ಸೆಳೆದಿದ್ದವು.
ನಂತರ, ಇವರಿಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಮಾತನಾಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ.ನಡಾಲ್ ನಟಿಯನ್ನು incredible ಎಂದು ಹೇಳಿದ್ದರು, ದೀಪಿಕಾ ನಡಾಲ್‌ಗೆ 'ಅದ್ಭುತ ನೆನಪುಗಳು' ಎಂದು ಧನ್ಯವಾದ ಅರ್ಪಿಸಿದರು

Latest Videos

click me!