ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅನುಷ್ಕಾ ಶೆಟ್ಟಿ ಕೊನೆಗೂ ಟ್ವಿಟರ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಟ್ವಿಟರ್‌ಗೆ ಜಾಯಿನ್ ಆದ 16 ಗಂಟೆಯಲ್ಲಿ ನಟಿಯನ್ನು 9 ಲಕ್ಷ ಜನ ಫಾಲೋ ಮಾಡಿದ್ದಾರೆ.
ಹಾಯ್ ಆಲ್, ಎಲ್ಲರೂ ಚೆನ್ನಾಗಿದ್ದೀರಿ ಎಂದುಕೊಂಡಿದ್ದೇನೆ. ನನ್ನನ್ನು ಅಪೀಶಿಯಲ್ ಟ್ವಿಟರ್ ಖಾತೆಯಲ್ಲಿ ಫಾಲೋ ಮಾಡಿ ಎಂದು ಐಡಿ ಬರೆದಿದ್ದಾರೆ.
ಸದ್ಯ ನಟಿ ತಮ್ಮ ನಿಶ್ಯಬ್ಧಂ ಸಿನಿಮಾ ಪ್ರಮೋಷನ್ ಮಾಡ್ತಾ ಇದ್ದಾರೆ.
@MsAnushkaShetty ಇಲ್ಲಿ ಅನುಷ್ಕಾ ಅವರನ್ನು ಫಾಲೋ ಮಾಡಬಹುದು
ಸಿನಿಮಾ ಶುಕ್ರವಾರ ಅಮೆಝಾನ್ ಪ್ರೈಂನಲ್ಲಿ ರಿಲೀಸ್ ಆಗಲಿದೆ.
ಸಿನಿಮಾವನ್ನು ಹೇಮಂತ್ ಮಧುಕರ್ ನಿರ್ದೇಶಿಸಿದ್ದಾರೆ.
ನಿಶ್ಯಬ್ಧಂನಲ್ಲಿ ಆರ್ ಮಾಧವನ್, ಅಂಜಲಿ, ಶಾಲಿನಿ ಪಾಂಡೆ, ಸುಬ್ಬರಾಜು, ಶ್ರೀನಿವಾಸ್ ಅವಸರಲ ನಟಿಸಿದ್ದಾರೆ.
ಸಿನಿಮಾವನ್ನು ಅಮೆರಿಕದಲ್ಲಿ ಶೂಟ್ ಮಾಡಲಾಗಿದೆ.
ಎಲ್ಲವನ್ನೂ ನಿಜವಾದ ಲೊಕೇಷನ್‌ನಲ್ಲಿಯೇ ಶೂಟ್ ಮಾಡಲಾಗಿದೆ, ಸೆಟ್‌ಗಳನ್ನು ಸನಿರ್ಮಿಸಿಲ್ಲ ಎಂದಿದೆ ಚಿತ್ರತಂಡ. 56 ದಿನಗಳಲ್ಲಿಯೇ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ
Suvarna News