OTT Releases: ವೀಕೆಂಡ್ ಒಟಿಟಿ ಪ್ರೇಮಿಗಳಿಗೆ ಹಬ್ಬ, ಥ್ರಿಲ್ಲರ್, ಸಸ್ಪೆನ್ಸ್ ಜೊತೆ ರೋಮ್ಯಾನ್ಸ್ – ಕಾಮಿಡಿ ಕಮಾಲ್

Published : Dec 19, 2025, 03:18 PM IST

ಶುಕ್ರವಾರ ಬರ್ತಿದ್ದಂತೆ ಸಿನಿ ಪ್ರಿಯರಿಗೆ ಹಬ್ಬ. ಒಂದ್ಕಡೆ ಥಿಯೇಟರ್ ನಲ್ಲಿ ಸಿನಿಮಾ ಬಿಡುಗಡೆ ಆದ್ರೆ ಇನ್ನೊಂದ್ಕಡೆ ಒಟಿಟಿಯಲ್ಲಿ ಸಿನಿಮಾ ಜೊತೆ ಸಿರೀಸ್ ರೀಲಿಸ್ ಆಗುತ್ತೆ. ಈ ಬಾರಿಯೂ ಸಾಕಷ್ಟು ಸಿರೀಸ್, ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. 

PREV
17
ಶ್ರೀಮತಿ ದೇಶಪಾಂಡೆ

ಮಾಧುರಿ ದೀಕ್ಷಿತ್ ಅಭಿನಯದ ಶ್ರೀಮತಿ ದೇಶಪಾಂಡೆ ಒಟಿಟಿಯಲ್ಲಿ ಬಿಡುಗಡೆ ಆಗಿದೆ. 25 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ ಸರಣಿ ಕಿಲ್ಲರ್ ಕ್ರೈಂ ಥ್ರಿಲ್ಲರ್ ಕಥೆ ಇದಾಗಿದೆ. ಫ್ರೆಂಚ್ ಸಿರೀಸ್ 'ಲಾ ಮಾಂಟೆ' ನಿಂದ ಪ್ರೇರಿತವಾಗಿದೆ. ಡಿಸೆಂಬರ್ 19, ಶುಕ್ರವಾರ ಅಂದ್ರೆ ಇಂದಿನಿಂದ OTT ಪ್ಲಾಟ್ಫಾರ್ಮ್ ಜಿಯೋ ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಮಾಡಬಹುದು.

27
ರಾತ್ ಅಕೇಲಿ ಹೈ: ದಿ ಬನ್ಸಾಲ್ ಮರ್ಡರ್ಸ್

ರಾತ್ ಅಕೇಲಿ ಹೈ: ದಿ ಬನ್ಸಾಲ್ ಮರ್ಡರ್ಸ್ ನವಾಜುದ್ದೀನ್ ಸಿದ್ದಿಕಿ, ರಾಧಿಕಾ ಆಪ್ಟೆ ಮತ್ತು ಚಿತ್ರಾಂಗದ ಸಿಂಗ್ ನಟಿಸಿರುವ ರೋಮಾಂಚಕಾರಿ ಅಪರಾಧ ಥ್ರಿಲ್ಲರ್ ಆಗಿದೆ. ಕಾನ್ಪುರದ ಐಷಾರಾಮಿ ಬಂಗಲೆಯಲ್ಲಿ ಶ್ರೀಮಂತ ಮತ್ತು ಪ್ರಭಾವಿ ಬನ್ಸಾಲ್ ಕುಟುಂಬದ ಕ್ರೂರ ಸಾಮೂಹಿಕ ಹತ್ಯೆಯನ್ನು ತನಿಖೆ ಮಾಡುವ ಇನ್ಸ್ಪೆಕ್ಟರ್ ಜತಿಲ್ ಯಾದವ್ ಸುತ್ತ ಕಥೆ ಸುತ್ತುತ್ತದೆ. ತನಿಖೆ ಮುಂದುವರೆದಂತೆ, ಅವರು ದುರಾಶೆ, ದ್ರೋಹ ಮತ್ತು ಮಾರಕ ಪಿತೂರಿಯನ್ನು ಒಳಗೊಂಡ ರಹಸ್ಯಗಳನ್ನು ಬಹಿರಂಗಪಡಿಸುತ್ತಾರೆ. ಇಂದಿನಿಂದ ನೆಟ್ಫ್ಲಿಕ್ಸ್ನಲ್ಲಿ ಈ ಥ್ರಿಲ್ಲರ್ ವೀಕ್ಷಿಸಬಹುದು.

37
ಫೋರ್ ಮೋರ್ ಶಾಟ್ಸ್ ಪ್ಲೀಸ್!

ವೀಕ್ಷಕರಿಗೆ ಇಷ್ಟವಾಗುದ್ದ ಫೋರ್ ಮೋರ್ ಶಾಟ್ಸ್ ಪ್ಲೀಸ್ ಸಿರೀಸ್ ನ ನಾಲ್ಕನೇ ಮತ್ತು ಅಂತಿಮ ಸೀಸನ್ ಬಿಡುಗಡೆಯಾಗಿದೆ. ನಾಲ್ಕು ಪ್ರಮುಖ ಪಾತ್ರಗಳಾದ ಸಿದ್ಧಿ, ದಾಮಿನಿ, ಅಂಜನಾ ಮತ್ತು ಉಮಾಂಗ್ ಅವರ ಕಥೆಯ ಮುಂದುವರೆದ ಭಾಗ ಇದು. ಇಲ್ಲಿ ಅತಿದೊಡ್ಡ ಹೊಂದಾಣಿಕೆಯಾಗಲಿದ್ದು, ಆರು ತಿಂಗಳೊಳಗೆ ಅನೇಕ ಸತ್ಯ ಹೊರಗೆ ಬರಲಿದೆ. ರೋಮ್ಯಾಂಟಿಕ್ ಕಾಮಿಡಿ ಸೀರಿಸ್ ನಲ್ಲಿ ಸಯಾನಿ ಗುಪ್ತಾ, ಕೀರ್ತಿ ಕುಲ್ಹಾರಿ, ಬನಿ ಜೆ ಮತ್ತು ಮಾನ್ವಿ ಗಗ್ರೂ ನಟಿಸಿದ್ದಾರೆ. ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮ್ ಮಾಡಬಹುದು.

47
ನಯನಂ

ನಯನಂ ನೇತ್ರಶಾಸ್ತ್ರಜ್ಞರ ಜೀವನದ ಸುತ್ತ ಸುತ್ತುವ ಒಂದು ಮನಮುಟ್ಟುವ ಮಾನಸಿಕ ವೈಜ್ಞಾನಿಕ ಕಾದಂಬರಿ ಥ್ರಿಲ್ಲರ್ ಆಗಿದೆ. ಬಡವರಿಗಾಗಿ ಅವರು ಕಣ್ಣಿನ ಆಸ್ಪತ್ರೆ ನಡೆಸುತ್ತಾರೆ. ಇಂದಿನಿಂದ OTT ಪ್ಲಾಟ್ಫಾರ್ಮ್ ZEE5 ನಲ್ಲಿ ಇದನ್ನು ವೀಕ್ಷಿಸಬಹುದು.

57
ಡೊಮಿನಿಕ್ ಅಂಡ್ ದಿ ಲೇಡಿಸ್ ಪರ್ಸ್

ನಿಗೂಢ ಹಾಸ್ಯ ಮಿಶ್ರಿತ ಡೊಮಿನಿಕ್, ಧೈರ್ಯಶಾಲಿ, ಅವಮಾನಿತ ಮಾಜಿ ಪೊಲೀಸ್ ಅಧಿಕಾರಿಯ ಕಥೆ ಹೇಳುತ್ತದೆ. ಅವರೀಗ ಖಾಸಗಿ ಪತ್ತೇದಾರಿಯಾಗಿದ್ದಾರೆ. ಕಳೆದು ಹೋದ ಪರ್ಸ್ನ ಮಾಲೀಕರನ್ನು ಹುಡುಕುವ ಸರಳ ಪ್ರಕರಣದ ಕಥೆಯನ್ನು ಇದು ಹೇಳುತ್ತದೆ. ಶೀಘ್ರದಲ್ಲೇ ಇದು ಕೊಲೆ ರಹಸ್ಯವಾಗಿ ಬದಲಾಗುತ್ತದೆ. ಮಲಯಾಳಂ ಚಿತ್ರದಲ್ಲಿ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ZEE5 ಒಟಿಟಿಯಲ್ಲಿ ನೀವಿದನ್ನು ನೋಡಬಹುದು.

67
ದಿ ಗ್ರೇಟ್ ಫ್ಲಡ್

ದಕ್ಷಿಣ ಕೊರಿಯಾದ ಈ ವೈಜ್ಞಾನಿಕ ಕಾದಂಬರಿ ಸಿನಿಮಾದಲ್ಲಿ ಕಿಮ್ ಡಾ ಮಿ, ಪಾರ್ಕ್ ಹೇ ಸೂ ಮತ್ತು ಕ್ವಾನ್ ಯುನ್ ಸಿಯೊಂಗ್ ನಟಿಸಿದ್ದಾರೆ. ಇದು ಎಐ ಸಂಶೋಧಕನ ಸುತ್ತ ಕಥೆ ಸುತ್ತುತ್ತದೆ. ವಿನಾಶಕಾರಿ ಪ್ರವಾಹ ಇಡೀ ಜಗತ್ತನ್ನು ಮುಳುಗಿಸಿದಾಗ, ಅವಳು ಮತ್ತು ಅವಳ ಚಿಕ್ಕ ಮಗ ಮುಳುಗುತ್ತಿರುವ ಕಟ್ಟಡದಲ್ಲಿ ಸಿಲುಕಿಕೊಳ್ಳುತ್ತಾರೆ. ಕಥೆಯು ಅವರ ಬದುಕುಳಿಯುವ ಹೋರಾಟದ ಮೇಲೆ ಕೇಂದ್ರಿಕೃತವಾಗಿದೆ. ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಮಾಡಬಹುದು.

77
ಹ್ಯೂಮನ್ ಸ್ಪೆಸಿಮನ್ಸ್

ಕನೇ ಮಿನಾಟೊ ಅವರ 'ಹ್ಯೂಮನ್ ಸ್ಪೆಸಿಮನ್ಸ್' ಕಾದಂಬರಿಯನ್ನು ಆಧರಿಸಿದೆ. ಜಪಾನೀಸ್ ಮಾನಸಿಕ ಥ್ರಿಲ್ಲರ್ ಪ್ರೊಫೆಸರ್ ಶಿರೋ ಸಕಾಕಿಯನ್ನು ಈ ಕಥೆ ಕೇಂದ್ರೀಕರಿಸುತ್ತದೆ. ಪ್ರೈಮ್ ವೀಡಿಯೊದಲ್ಲಿ ನೀವು ಇದನ್ನು ನೋಡಬಹುದು.

Read more Photos on
click me!

Recommended Stories