ಮಲಯಾಳಂ ನಟಿ ಸೋನಾ ಎಂ ಅಬ್ರಾಹಂ ಹಲವು ವರ್ಷಗಳ ಹೋರಾಟದ ನೋವನ್ನು ಹೊರ ಹಾಕಿದ್ದಾರೆ.
2013ರಲ್ಲಿ 'ಪೋರ್ ಸೇಲ್' ಚಿತ್ರದಲ್ಲಿ ಬಾಲನಟಿಯಾಗಿ ಅಭನಯಿಸಿದ್ದರು ಇವರು
ಚಿತ್ರದಲ್ಲಿದ ಅತ್ಯಾಚಾರ ಸನ್ನಿವೇಶವೊಂದನ್ನು ಮೊಬೈಲ್‌ನಲ್ಲಿಯೇ ಚಿತ್ರೀಕರಣ ಮಾಡಲಾಗಿತ್ತು. ಸಿನಿಮಾದಲ್ಲಿ ಬಳಸಿಕೊಂಡ ನಂತರ ಎಲ್ಲೆಡೆ ವಿಡಿಯೋ ಡಿಲೀಟ್ ಮಾಡಲಾಗುತ್ತದೆ ಎಂದು ನಿರ್ದೇಶಕರು ಇವರು ಭರವಸೆ ನೀಡಿದ್ದರು.
ಆದರೆ, ಅತ್ಯಾಚಾರ ವಿಡಿಯೋ ಯೂಟ್ಯೂಬ್ ಹಾಗೂ ಪೋರ್ನ್ ಸೈಟ್‌ಗಳಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ನಟಿ 2014ರಲ್ಲಿಯೇ ಕಾನೂನು ಮೊರೆ ಹೋಗಿದ್ದರು.
ಎರ್ನಾಕುಲಂ ಸಿಟಿ ಪೊಲೀಸ್ ಕಮೀಷನರ್ ಸಹಿ ಇರುವ ಪತ್ರ ಪಡೆದು ನಂತರ ಯುಟ್ಯೂಬ್‌ನಿಂದ ತೆಗೆದು ಹಾಕಲಾಗಿತ್ತು. ಆದರೆ, ಪೋರ್ನ್ ಸೈಟ್‌ನಿಂದ ತೆಗೆಸಲು ಹೋರಾಡುತ್ತಲೇ ಇದ್ದಾರೆ.
2016ರಲ್ಲಿ ಸೋನಾ ಹಾಗೂ ಪೋಷಕರು ನಿರ್ದೇಶಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದರು. ಆದರೆ ನಿರ್ಮಾಪಕರು ಈ ಜವಾಬ್ದಾರಿ ತೆಗೆದುಕೊಳ್ಳಲು ಮುಂದಾಗಿಲ್ಲ.
ಈ ಕೇಸ್ ಸೈಬರ್ ಸೆಲ್‌ಗೆ ಹಸ್ತಾಂತರವಾಯ್ತು. ಬಂಧಿಸಲಾಗಿದ್ದ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ.
5ನೇ ವರ್ಷದ ಕಾನೂನು ವಿದ್ಯಾರ್ಥಿನಿ ಆಗಿರುವ ಸೋನಾ ಈ ವಿಚಾರದ ಬಗ್ಗೆ ಮಾತನಾಡಿ, ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
'ಪೋರ್ ಸೇಲ್': ಪುಟ್ಟ ಬಾಲಕಿಯ ಅತ್ಯಾಚಾರ ನೋಡಿ, ಆಕೆಯ ಅಕ್ಕ ಆತ್ಮಹತ್ಯ ಮಾಡಿಕೊಂಡು ಬದುಕನ್ನು ಕೊನೆಗಾಣಿಸುವ ಕಥೆ ಹೊಂದಿದೆ.
ಸೋನಾ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮಹಿಳಾ ಸಂಘಗಳು ಹಾಗೂ ನೆಟ್ಟಿಗರು ಹೋರಾಟಕ್ಕೆ ಸಾಥ್ ನೀಡಿದ್ದಾರೆ.