ಇಷ್ಟಕ್ಕೂ ಆಕೆ ಯಾರೂ ಅಲ್ಲ, ಒಂದು ಕಾಲದ ಸ್ಟಾರ್ ಬ್ಯೂಟಿ ನಗ್ಮಾ. ಹೌದು, ನಗ್ಮಾ ಎಲ್ಲರಿಗೂ ನೆನಪಿರುತ್ತಾರೆ. ತೆಲುಗಿನಲ್ಲಿ ಚಿರಂಜೀವಿ, ನಾಗಾರ್ಜುನ, ಬಾಲಯ್ಯ, ವೆಂಕಟೇಶ್, ಸುಮನ್, ಹೀಗೆ ಸ್ಟಾರ್ ಹೀರೋಗಳ ಜೊತೆ ನಟಿಸಿ ಮೆಚ್ಚುಗೆ ಪಡೆದಿದ್ದಾರೆ. ತಮಿಳು, ಮಲಯಾಳಂ, ಕನ್ನಡ ಸಿನಿಮಾಗಳಲ್ಲೂ ಮಿಂಚಿದ ನಗ್ಮಾ.. ಬಾಲಿವುಡ್‌ನಲ್ಲೂ ಸ್ಟಾರ್ ಇಮೇಜ್ ತಂದುಕೊಂಡಿದ್ದಾರೆ. ಹೀರೋಯಿನ್ ಆಗಿ ಆಫರ್ಗಳು ಕಡಿಮೆಯಾದ ತಕ್ಷಣ ಸಿನಿಮಾಗಳನ್ನು ಬಿಟ್ಟರು ನಗ್ಮಾ. ಅವರ ತಂಗಿಯಂದಿರು ಇಬ್ಬರು ಇಂಡಸ್ಟ್ರಿಯಲ್ಲಿ ಹೀರೋಯಿನ್ಗಳಾಗಿ ಮಿಂಚಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇನ್ನು ಈ ಬ್ಯೂಟಿ ಫ್ಯಾಮಿಲಿ ಬ್ಯಾಕ್ಗ್ರೌಂಡ್ ಏನು ಅಂದ್ರೆ.. ?