ಸಲ್ಮಾನ್ ಖಾನ್ ಹಿಂದಕ್ಕೆ ಹಾಕಿದ ಸೋನು ಸೂದ್, ಸಾಕ್ಷ್ಯ ಇಲ್ಲಿದೆ!

First Published | May 31, 2020, 10:24 PM IST

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಸಿಕೊಂಡಿರುವ ಸಲ್ಮಾನ್ ಖಾನ್ ರನ್ನು ಖಳನಟ ಸೋನು ಸೂದ್ ಹಿಂದಕ್ಕೆ ಹಾಕಿದ್ದಾರೆ. ಇದಕ್ಕೆಲ್ಲ ಕಾರಣ ಅವರು ಮಾಡಿರುವ ಸಮಾಜಮುಖಿ ಕೆಲಸ. ವಲಸೆ ಕಾರ್ಮಿಕರ ನೆರವಿಗೆ ನಿಂತ ಸೋನು ಸೂದ್ದ ಸಲ್ಮಾನ್ ಖಾನ್ ಅವರನ್ನು ಹಿಂದಕ್ಕೆ ಹಾಕಿದ್ದಾರೆ. ಹೌದು ಈ ಸುದ್ದಿಯನ್ನು ಆಧಾರ ಸಮೇತ ಗೂಗಲ್ ನಮ್ಮ ಮುಂದೆ ಬಿಚ್ಚಿಟ್ಟಿದೆ. 

ಸೋನು ಸೂದ್ ಹೆಲ್ಪ್ ಲೈನ್ ನಂಬರ್ ಏನು? ಸೋನು ಸೂದ್ ಬಸ್ ಅರೆಂಜ್ ಮಾಡಿದ್ದಾರಾ? ಸೋನು ಸೂದ್ ವಲಸೆ ಕಾರ್ಮಿಕರಿಗೆ ಹೇಗೆ ಸಹಾಯ ಮಾಡುತ್ತಿದ್ದಾರೆ? ಈ ಪ್ರಶ್ನೆಗಳನ್ನು ಗೂಗಲ್ ನಲ್ಲಿ ಮೇಲಿಂದ ಮೇಲೆ ಕೇಳಲಾಗಿದೆ.
ಸಲ್ಮಾನ್ ಖಾನ್ ಸಹ ಕೊರೋನಾ ಬಗ್ಗೆ ನಿರಂತರವಾಗಿ ಮಾತನಾಡುತ್ತಿದ್ದಾರೆ. ನಡುವೆ ತಮ್ಮ ಫಾರ್ಮ್ ಹೌಸ್ ನಲ್ಲಿ ಸೇರಿಕೊಂಢು ಹಾಡೊಂದನ್ನು ಶೂಟಿಂಗ್ ಮಾಡಿ ಬಿಟ್ಟಿದ್ದಾರೆ.
Tap to resize

ಆದರೆ ಕಳೆದ ಕೆಲ ದಿನಗಳಿಂದ ಗೂಗಲ್ ಟ್ರೆಂಡ್ ಬದಲಾಗಿದೆ. ಸೋಶಿಯಲ್ ಮೀಡಯಾ ಮತ್ತು ಗೂಗಲ್ ಸೋನು ಸೂದ್ ಅವರನ್ನ ಹುಡುಕುತ್ತಿದೆ. ಇದಕ್ಕೆ ಕಾರಣಗಳು ಇವೆ.
ಖಳನಟರಾಗಿಯೇ ಗುರುತಿಸಿಕೊಂಡಿರುವ ಸೋನು ಸೂದ್ ನಿಜ ಜೀವನದಲ್ಲಿ ನಾಯಕನ ಕೆಲಸ ಮಾಡಿದ್ದಾರೆ.
ಸಾವಿರಾರು ವಲಸೆ ಕಾರ್ಮಿಕರನ್ನು ಕೊರೋನಾ ಸಂಕಷ್ಟದ ಸಮಯದಲ್ಲಿ ಸುರಕ್ಷಿತವಾಗಿ ಅವರ ತವರಿಗೆ ಕಳಿಸುವ ಕೆಲಸ ಮಾಡಿದ್ದಾರೆ. ಬಸ್ ವ್ಯವಸ್ಥೆ ಮಾಡಿದ್ದಾರೆ. ಊಟ ನೀಡಿದ್ದಾರೆ.
ಕೆಲವು ಕಡೆ ಏರ್ ಲಿಫ್ಟ್ ಸಹ ಮಾಡಿಸಿದ್ದಾರೆ. ಇದೇ ಕಾರಣಕ್ಕೆ ಸೋನು ಸೂದ್ ಸಲ್ಮಾನ್ ಖಾನ್ ರನ್ನು ಹಿಂದಕ್ಕೆ ಹಾಕಿದ್ದಾರೆ.

Latest Videos

click me!