ಶಿವಣ್ಣ ಚಿತ್ರದಲ್ಲಿ ಮೆಹ್ರೀನ್‌ ಪಿರ್ಜಾದ ನಾಯಕಿ

First Published | Jul 22, 2021, 10:14 AM IST
  • ಶಿವಣ್ಣ ಸಿನಿಮಾದಲ್ಲಿ ಮೆಹ್ರೀನ್‌ ಪಿರ್ಜಾದ ನಾಯಕಿ
  • ಸ್ಯಾಂಡಲ್‌ವುಡ್‌ಗೆ ಬರ್ತಿದ್ದಾರೆ ಬಾಲಿವುಡ್ ಬೆಡಗಿ
ನಟ ಶಿವರಾಜ್‌ಕುಮಾರ್‌ ಅವರ 124ನೇ ಚಿತ್ರಕ್ಕೆ ಬಾಲಿವುಡ್‌ನ ಮೆಹ್ರೀನ್‌ ಪಿರ್‌ಜಾದ ನಾಯಕಿ ಆಗುತ್ತಿದ್ದಾರೆ.
ಟಾಲಿವುಡ್‌ ನಿರ್ದೇಶಕ ರಾಮ್‌ ದುಲಿಪುಡಿ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು
Tap to resize

ಇತ್ತೀಚೆಗೆ ತೆಲುಗಿನ ರವಿತೇಜಾ ನಟನೆಯ ‘ರಾಜಾ ದಿ ಗ್ರೇಟ್‌’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈಗ ಕನ್ನಡಕ್ಕೆ ಬರುತ್ತಿದ್ದಾರೆ.
ಈ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶನದ ಜತೆಗೆ ತಾಂತ್ರಿಕ ತಂಡದಲ್ಲಿ ಬಹುತೇಕರು ಟಾಲಿವುಡ್‌ ಮಂದಿಯೇ ಇದ್ದಾರೆ.
ಈಗ ನಾಯಕಿ ಕೂಡ ಬಹುಭಾಷೆಗೆ ಪರಿಚಯ ಇರುವವರನ್ನೇ ಕರೆತರುತ್ತಿದ್ದಾರೆ.
ಎರಡು ರೀತಿಯ ಶೇಡ್‌ ಇರುವ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಪೈಕಿ ಆರ್ಮಿ ಕತೆಯನ್ನು ಹೇಳುವ ಪಾತ್ರವೂ ಒಂದು. ಚಿತ್ರದ ಕತೆ ಹಾಗೂ ಪಾತ್ರಧಾರಿಗಳ ಆಯ್ಕೆ ನೋಡುತ್ತಿದ್ದರೆ ರಾಮ ದುಲಿಪುಡಿ ಶಿವಣ್ಣರನ್ನು ಟಾಲಿವುಡ್‌ಗೂ ಕರೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಈ ಚಿತ್ರವನ್ನು ಕನ್ನಡದ ಜತೆಗೆ ತೆಲುಗಿನಲ್ಲೂ ರೂಪಿಸುವ ಪ್ಲಾನ್‌ ಚಿತ್ರತಂಡದ್ದು.
ತಮಿಳು ಹಿಂದಿ, ತೆಲುಗು ಸೇರಿ ಹಲವು ಭಾಷೆಯ ಸಿನಿಮಾದಲ್ಲಿ ನಟಿಸಿದ್ದಾರೆ ಈಕೆ
ಸುಮಾರು 15ಕ್ಕೂ ಹೆಚ್ಚು ಸಿನಿಮಾ ಮಾಡಿರೋ ನಟಿ ಈಗ ಸ್ಯಾಂಡಲ್‌ವುಡ್‌ನಲ್ಲಿ ನಟಿಸುತ್ತಿದ್ದಾರೆ.

Latest Videos

click me!