ಅಮೀರ್ ಖಾನ್ ಟ್ರೋಲ್: ಮಲೈಕಾ ಡಿವೋರ್ಸ್ ಸಂದರ್ಭ ನೆನಪಿಸಿಕೊಂಡ ಅರ್ಬಾಝ್

First Published | Jul 21, 2021, 6:46 PM IST
  • ಅಮೀರ್ ಖಾನ್‌ ವಿಚ್ಛೇದನೆ ನಂತರ ಹಿಗ್ಗಾಮುಗ್ಗ ಟ್ರೋಲ್
  • ಅಮೀರ್‌ನನ್ನು ನೋಡಿ ತನ್ನ ಡಿವೋರ್ಸ್‌ ದಿನ ನೆನಪಿಸಿಕೊಂಡ ನಟ
ಮಲೈಕಾ ಅರೋರಾದಿಂದ ಬೇರ್ಪಟ್ಟ ನಂತರ ಅವರು ಅನುಭವಿಸಿದ ಟ್ರೋಲಿಂಗ್ ಬಗ್ಗೆ ಅರ್ಬಾಜ್ ಖಾನ್ ಮಾತನಾಡಿದ್ದಾರೆ.
ಬಾಲಿವುಡ್‌ನ ಮಾಜಿ ಕಪಲ್ಸ್1998 ರಲ್ಲಿ ವಿವಾಹಿತರಾಗಿ2017 ರವರೆಗೆ ಜೊತೆಯಾಗಿದ್ದರು. ಇವರಿಗೆ ಅರ್ಹಾನ್ ಎಂಬ ಮಗನಿದ್ದಾನೆ.
Tap to resize

ಸಂದರ್ಶನವೊಂದರಲ್ಲಿಅರ್ಬಾಜ್ ಖಾನ್ ಅವರು ನೆಗೆಟಿವಿಟಿಯಿಂದ ನಿಜವಾಗಿಯೂ ಪ್ರಭಾವಿತರಾಗಿಲ್ಲ ಎಂದು ಹೇಳಿದ್ದಾರೆ.ಆದರೆ ಈ ರೀತಿ ಮಾಡುವುದು ಅನ್ಯಾಯ ಎಂದಿದ್ದಾರೆ ನಟ.
ನೀವು ಟ್ರೋಲ್‌ಗೆ ಏನನ್ನಾದರೂ ಹೇಳುವುದರಿಂದ ವಿಷಯಗಳು ಬದಲಾಗುತ್ತೆಎಂದು ನಂಬುತ್ತೀರಾ ? ನನ್ನ ವೈಯಕ್ತಿಕ ಜೀವನದಲ್ಲಿ, ನಾನು ಈಗಾಗಲೇ ಆ ಸಮಸ್ಯೆ ಎದುರಿಸಿದ್ದೇನೆ ಎಂದಿದ್ದಾರೆ ನಟ.
ಆ ಸನ್ನಿವೇಶದ ಮೂಲಕ ಸಾಗಿಹೋಗಿದ್ದೇನೆ. ಅನುಭವಿಸಬೇಕಾದದ್ದನ್ನು ನಾನು ಅನುಭವಿಸಿದೆ. ನಾನು ಒಂದು ನಿರ್ದಿಷ್ಟ ಸನ್ನಿವೇಶವನ್ನು ಒಪ್ಪಿಕೊಂಡಿದ್ದೇನೆ. ಅದರಿಂದ ಮುಂದುವರಿದಿದ್ದೇನೆ ಎಂದಿದ್ದಾರೆ.
ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರವಿಚ್ಛೇದನೆ ಉಲ್ಲೇಖಿಸಿ ಅವರು ಹೀಗೆ ತಮ್ಮ ದಿನಗಳನ್ನು ಮೆಲುಕು ಹಾಕಿದ್ದಾರೆ.
ಬಹುಶಃ ಅಭಿಮಾನಿಗಳು ನಿರ್ದಿಷ್ಟ ದಂಪತಿಗಳನ್ನು ಬಯಸಿದರೆ, ಅವರು ಒಟ್ಟಿಗೆ ನೋಡಲು ಬಯಸುತ್ತಾರೆ. ಇತ್ತೀಚೆಗೆ ಅಮೀರ್ ವಿಚಾರದಲ್ಲಿ ಈ ಘಟನೆ ನಡೆದಿದೆ. ಅದರರ್ಥನಾವು ಕೆಟ್ಟ ಜನಎಂರ್ಥವಲ್ಲ ಎಂದಿದ್ದಾರೆ.
ಅವರು ಒಟ್ಟಿಗೆ ಸೇರಲು ಕಾರಣವೇನೆಂದು ಅರಿತುಕೊಂಡಿದ್ದಾರೆ. ದಾಂಪತ್ಯಪ್ರಯಾಣವು ಅದ್ಭುತ, ಸುಂದರವಾಗಿರಬೇಕು. ನೀವು ವಿಭಿನ್ನ ವ್ಯಕ್ತಿಗಳಾಗಿ ಬೆಳೆಯುತ್ತೀರಿ. ನೀವು ಅವರನ್ನು ಬೆಳೆಯಲು ಮತ್ತು ಸಂತೋಷವಾಗಿರಲು ಬಿಡಬೇಕು ಎಂದಿದ್ದಾರೆ.
ನನ್ನ ವೈಯಕ್ತಿಕ ಜೀವನದ ಬಗ್ಗೆ, ವಿಶೇಷವಾಗಿ ನನ್ನ ಸಂಬಂಧದ ಕುರಿತಾದ ಕಾಮೆಂಟ್‌ಗಳಿಂದ ನಾನು ಎಂದಿಗೂ ಪ್ರಭಾವಿತನಾಗಲಿಲ್ಲ. ಅವರೆಲ್ಲರೂ ಅನಗತ್ಯ ಎಂದು ನಾನು ಭಾವಿಸುತ್ತೇನೆ ಆ ಸಮಯದಲ್ಲಿ, ಅವುಗಳನ್ನುನಿರ್ಲಕ್ಷಿಸಿ ಮುಂದುವರಿಯಬೇಕಾಗಿತ್ತು ಎಂದಿದ್ದಾರೆ ನಟ.
ಅರ್ಬಾಝ್ ಮತ್ತು ಮಲೈಕ ಇಬ್ಬರೂ ತಮ್ಮ ವೈಯಕ್ತಿಯ ಜೀವನದಲ್ಲಿ ಮುಂದೆ ಸಾಗಿದ್ದಾರೆ

Latest Videos

click me!