ಆದಿಪುರುಷ್‌ ಚಿತ್ರದ ಗಾರ್ಜಿಯಸ್‌ ಶೂರ್ಪನಖಿ ನಟಿ ತೇಜಸ್ವಿನಿ ಪಂಡಿತ್!

First Published | Jun 18, 2023, 4:30 PM IST

'ಆದಿಪುರುಷ' ಚಿತ್ರ ಸಖತ್‌ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ರಾಮ ಮತ್ತು ಸೀತೆ ಪಾತ್ರಧಾರಿಗಳಲ್ಲದೆ  ಶೂರ್ಪನಖಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ತೇಜಸ್ವಿನಿ ಪಂಡಿತ್ (Tejaswini Pandit)  ಸಹ ಎಲ್ಲರ ಗಮನ ಸೆಳೆದಿದ್ದಾರೆ. ತೇಜಸ್ವಿನಿ ಅವರ ಗ್ಲಾಮರ್ಸ್‌ ಫೋಟೋಗಳು ಇಲ್ಲಿವೆ.

ಹಲವು  ವಿವಾದಗಗಳ ನಂತರ ಆದಿಪುರುಷ್​ ಸಿನಿಮಾ ಕೊನೆಗೂ ಬಿಡುಗಡೆಗೊಂಡಿದೆ.  ಓಂ ರಾವತ್​  ನಿರ್ದೇಶನದ, ರಾಮಾಯಣವನ್ನು ಆಧರಿಸಿದ ‘ಆದಿಪುರುಷ್​’ ಚಿತ್ರ 3ಡಿಯಲ್ಲಿ ಮೂಡಿಬಂದಿದೆ.
 

ಚಿತ್ರದಲ್ಲಿ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್, ಸನ್ನಿ ಸಿಂಗ್, ದೇವದತ್ ನಾಗ್ ಮುಂತಾದ ಪ್ರಬಲ ತಾರಾಗಣವಿದೆ.   ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಪ್ರದರ್ಶನ ಆಗುತ್ತಿದೆ.

Tap to resize

ಈ ಸಿನಿಮಾದಲ್ಲಿ    ಶೂರ್ಪನಖಿ ಪಾತ್ರದಲ್ಲಿ ಕಾಣಿಸಿಕೊಂಡಿರುವ  ಸುಂದರ ನಟಿ ತೇಜಸ್ವಿನಿ ಪಂಡಿತ್ ಸಹ ಎಲ್ಲರಿಂದ ಮೆಚ್ಚುಗೆ ಗಳಿಇಸಿದ್ದಾರೆ. ತೇಜಸ್ವಿನಿ ಪಂಡಿತ್ ಮರಾಠಿ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರು.  

ತೇಜಸ್ವಿನಿ 2004 ರಲ್ಲಿ ಮರಾಠಿ ಶೋ 'ಕೇದಾರ್ ಶಿಂಧೆ ಕಿ ಆಗಾ ಬಾಯಿ ಅರೆಚಾ' ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅವರು ಅನೇಕ ಮರಾಠಿ ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ  ಕೆಲಸ ಮಾಡಿದ್ದಾರೆ. 

ಅಷ್ಟೇ ಅಲ್ಲ, ಹಲವು ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟಿರುವ ಇವರು   2022 ರಲ್ಲಿ,   'ರಾನ್ ಬಜಾರ್' ವೆಬ್ ಸರಣಿಯಲ್ಲಿ ಆಯೇಶಾ ಸಿಂಗ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರು. ನಟಿ ತನ್ನ ಅದ್ಭುತ ನಟನೆಗಾಗಿ ಅನೇಕ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. 

ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ಅವರು ತಮ್ಮ ಬಾಲ್ಯದ ಸ್ನೇಹಿತ ಭೂಷಣ್ ಬೋಪ್ಚೆ ಅವರನ್ನು 16 ಡಿಸೆಂಬರ್ 2012 ರಂದು ವಿವಾಹವಾಗಿ ಪ್ರಸಿದ್ಧ ಕೈಗಾರಿಕೋದ್ಯಮಿ ರಾಮೇಶ್ವರ್ ರೂಪಚಂದ್ ಬೋಪ್ಚೆ  ಅವರ ಸೊಸೆಯಾದರು. ಆದರೆ ನಂತರ ಅವರು ತಮ್ಮ ಪತಿಯಿಂದ ಬೇರ್ಪಟ್ಟರು

37 ವರ್ಷ ವಯಸ್ಸಿನ ತೇಜಸ್ವಿನಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಗ್ಲಾಮರಸ್. ಸೋಷಿಯಲ್ ಮೀಡಿಯಾದಲ್ಲೂ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಅವರು ಪ್ರತಿದಿನ ತಮ್ಮ  ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.  

Latest Videos

click me!