ಅಂತಿಮವಾಗಿ ರಾಜ್ ತಮ್ಮ ತಂದೆಗೆ ಲತಾಳನ್ನು ಮದುವೆಯಾಗುವುದಿಲ್ಲ ಎಂದು ಭರವಸೆ ನೀಡಿದರು. ತನ್ನ ಪ್ರೀತಿಯ ಲತಾ ಅವರನ್ನು ಮದುವೆಯಾಗಲು ಸಾಧ್ಯವಾಗದಿದ್ದರೆ ಜೀವನಪರ್ಯಂತ ಅವಿವಾಹಿತನಾಗಿಯೇ ಇರುವುದಾಗಿ ಶಪಥ ಮಾಡಿದರು. ಅದರಂತೆ ನಡೆದುಕೊಂಡರೂ ಕೂಡ. ಆದರೂ, ಇಬ್ಬರೂ ಪ್ರೇಮಿಗಳಾಗಿ ಮುಂದುವರೆದರು. ರಾಜ್ ಬಿಸಿಸಿಐ ಅಧ್ಯಕ್ಷರಾದಾಗ, ಭಾರತ ತವರಿನಲ್ಲಿ ಆಡುವ ಪ್ರತಿಯೊಂದು ಪಂದ್ಯಕ್ಕೂ ಲತಾ ಅವರಿಗೆ ಟಿಕೆಟ್ ಸಿಗುವಂತೆ ನೋಡಿಕೊಂಡರು. ಲತಾ ಮತ್ತು ರಾಜ್ ಒಬ್ಬರನ್ನೊಬ್ಬರು ಮದುವೆಯಾಗದಿದ್ದರೂ, ಅವರು ಬೇರೆಯವರನ್ನು ಮದುವೆಯಾಗಲಿಲ್ಲ. ಇಬ್ಬರೂ ಜೀವಮಾನವಿಡೀ ಒಬ್ಬರಿಗೊಬ್ಬರು ಸಮರ್ಪಿಸಿಕೊಂಡರು.