ಟಾಯ್ಲೆಟ್ ಕ್ಲೀನಿಂಗ್, ಟ್ಯಾಕ್ಸಿ ಚಾಲಕ, ಮೆಕ್ಯಾನಿಕ್.. ಸೂಪರ್ ಸ್ಟಾರ್‌ನಿಂದ ದಿವಾಳಿತನದವರೆಗೆ.. ಯಾರೀ ನಟ?

First Published | Apr 19, 2024, 2:47 PM IST

ಈ ನಟ ರಜನಿಕಾಂತ್, ಐಶ್ವರ್ಯ ರೈ ಮುಂತಾದ ದಿಗ್ಗಜರ ಜೊತೆ ಅಭಿನಯಿಸಿ ಸೂಪರ್ ಸ್ಟಾರ್ ಪಟ್ಟವನ್ನೂ ಗಳಿಸಿದ್ರು. ಸುರಸುಂದರ ನಟ ತಮಿಳು, ಹಿಂದಿಯ ಹಲವಾರು ಚಿತ್ರದಲ್ಲಿ ಅಭಿನಯಿಸಿ ಕನ್ನಡಕ್ಕೂ ಬಂದಿದ್ರು. ಆದ್ರೆ ಅದೃಷ್ಟ ಅವರ ಕೈ ಹಿಡೀಲಿಲ್ಲ..

ಬದುಕು ಯಾರಿಗೆ ಹೇಗೆ ಯಾವಾಗ ಬದಲಾಗುತ್ತೆ ಹೇಳೋಕಾಗೋಲ್ಲ. ಸಾವಿರಾರು ಜನ, ದೊಡ್ಡ ಸ್ಟಾರ್‌ಗಳ ಚಿತ್ರದಲ್ಲಿ ಸಣ್ಣ ಪಾತ್ರ ಸಿಕ್ಕರೂ ಸಾಕು ಲೈಫ್ ಸೆಟಲ್ ಆಗುತ್ತದೆ ಅಂದುಕೊಂಡು ಒಂದೇ ಒಂದು ಅವಕಾಶಕ್ಕಾಗಿ ಹಾತೊರೆಯುತ್ತಾರೆ.

ಆದರೆ, ಈ ನಟನಿಗೆ ಸಾಕಷ್ಟು ಅವಕಾಶಗಳು ಸಿಕ್ಕಿದ್ದವು. ರಜನಿಕಾಂತ್, ಐಶ್ವರ್ಯ ರೈ ಮುಂತಾದವರ ಚಿತ್ರಗಳಲ್ಲೆಲ್ಲ ಉತ್ತಮ ಪಾತ್ರಗಳನ್ನೇ ಪಡೆದಿದ್ದರು. ನೋಡಲೂ ಚೆಲುವ. ಆದರೆ, ಚಿತ್ರರಂಗದಲ್ಲಿ ಅದೃಷ್ಟ ಇರಲಿಲ್ಲ. ಬದಲಿಗೆ ಈ ರಂಗ ಅವರನ್ನು 4 ಬಾರಿ ದಿವಾಳಿತನ ಎದುರಿಸುವಂತೆ ಮಾಡಿತು.

Tap to resize

ನಾವು ಹೇಳುತ್ತಿರುವುದು ಸುಂದರ ನಟ ಅಬ್ಬಾಸ್ ಅಲಿ ಬಗ್ಗೆ. ಕನ್ನಡದ 'ಶಾಂತಿ ಶಾಂತಿ ಶಾಂತಿ' ನೆನಪಿದೆಯಲ್ಲ.. ಅದರಲ್ಲಿ ಮಾಧವನ್ ಮತ್ತು ಅಬ್ಬಾಸ್ ಹೀರೋಗಳಾಗಿ ನಟಿಸಿದ್ದರು ಎಂದರೆ ಈತ ನೆನಪಾಗಲೇಬೇಕು. 

ಎಲ್ಲರೂ ಸಿನಿಮಾ ಇಂಡಸ್ಟ್ರಿಗೆ ಬರುವುದು ಸ್ಟಾರ್ ಆಗಲು, ಆದರೆ ಬಂದ ಸ್ಟಾರ್ ಪಟ್ಟವನ್ನು ನಿಭಾಯಿಸುವ ಶಕ್ತಿ ಎಲ್ಲರಿಗೂ ಇರುವುದಿಲ್ಲ. ಈ ಅಬ್ಬಾಸ್ ಅವರನ್ನೇ ನೋಡಿ ‘ಮುಸ್ತಫಾ ಮುಸ್ತಫಾ’ ಹಾಡಿನಲ್ಲಿ ಕಾಣಿಸಿಕೊಂಡರು. 

'ಚುಯಿಮುಯಿ ಸಿ ಲಗ್ತಿ ಹೋ ತುಮ್' ಆಲ್ಬಂನಲ್ಲಿ ಕೆಲಸ ಮಾಡಿ ರಾತ್ರೋರಾತ್ರಿ ಯುವಕರಲ್ಲಿ ಬಹಳ ಜನಪ್ರಿಯವಾದರು. ಹುಡುಗಿಯರಂತೂ ಆತನ ಅಂದಕ್ಕೆ ಬಿದ್ದೇ ಹೋದರು.

ತಂದೆಯ ಆಸೆಯಂತೆ ಇಂಜಿನಿಯರಿಂಗ್ ಓದುತ್ತಿದ್ದ ಅವರು 1994ರಲ್ಲಿ ಬೆಂಗಳೂರಿನಲ್ಲಿ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದರು. 'ಕಾದಲ್ ದೇಶಂ' (1996) ತಮಿಳು ಚಿತ್ರದಿಂದ ಚಿತ್ರರಂಗದಲ್ಲಿ ಹೆಸರು ಮಾಡಿದರು. ಮಾಧ್ಯಮಗಳು ಅವರನ್ನು ಸೂಪರ್ ಸ್ಟಾರ್ ಎಂದವು.

ಇದರ ನಂತರ ಅವರು ಅನೇಕ ಚಲನಚಿತ್ರ ಆಫರ್‌ಗಳನ್ನು ಪಡೆದರು ಮತ್ತು ಐಶ್ವರ್ಯಾ ರೈ ಬಚ್ಚನ್, ರಜನಿಕಾಂತ್ ಮತ್ತು ಮಮ್ಮುಟ್ಟಿ ಅವರಂತಹ ದೊಡ್ಡ ನಟನಟಿಯರೊಂದಿಗೆ ಕೆಲಸ ಮಾಡಿದರು. 

ಆದಾಗ್ಯೂ, ಸ್ವಲ್ಪ ಸಮಯದ ನಂತರ ಅವರ ವೃತ್ತಿಜೀವನದ ಕೆಟ್ಟ ಹಂತವೂ ಪ್ರಾರಂಭವಾಯಿತು. ಅವರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು ಮತ್ತು ಅವರು ದಿವಾಳಿಯಾದರು. ಒಂದೆರಡು ಬಾರಿಯಲ್ಲಿ 4 ಬಾರಿ ದಿವಾಳಿಯಾದರು.

ಕಡೆಕಡೆಗೆ ಮನೆ ಬಾಡಿಗೆ ಕಟ್ಟಲು ಹೋಗಲಿ, ಒಂದು ಸಿಗರೇಟ್ ತೆಗೆದುಕೊಳ್ಳಲೂ ಹಣವಿಲ್ಲದ ಮಟ್ಟಕ್ಕೆ ಹೋದರಂತೆ ಅಬ್ಬಾಸ್. ನಂತರ ನಿರ್ಮಾಪಕ ಆರ್‌ಬಿ ಚೌದರಿ ಅವರಲ್ಲಿ ವಿನಂತಿಸಿಕೊಂಡು ಪೂವೇಲಿ ಚಿತ್ರದಲ್ಲಿ ಅಭಿನಯಿಸಿದರು. ಆದರೆ, ಕೆಲಸವನ್ನು ಎಂಜಾಯ್ ಮಾಡಲು ಸಾಧ್ಯವಾಗಲಿಲ್ಲವೆಂದು ಕೆಲಸ ತೊರೆದರು.

ಅಬ್ಬಾಸ್ ಅಲಿ 2015 ರ ನಂತರ ಚಲನಚಿತ್ರಗಳಲ್ಲಿ ನಟಿಸುವುದನ್ನು ಬಿಟ್ಟು ನ್ಯೂಜಿಲೆಂಡ್‌ಗೆ ತೆರಳಿದರು. ಅಲ್ಲಿ ಜೀವನೋಪಾಯಕ್ಕಾಗಿ ತಮ್ಮ ಹೆಸರನ್ನು ಮರೆ ಮಾಚಿ ಬೈಕ್ ಮೆಕ್ಯಾನಿಕ್ ಆಗಿ, ಡ್ರೈವರ್ ಆಗಿ ಕಡೆಗೆ ಟಾಯ್ಲೆಟ್ಟನ್ನು ಸ್ವಚ್ಚಗೊಳಿಸುವ ಕೆಲಸಗಳನ್ನು ಕೂಡಾ ಮಾಡಿದರಂತೆ. 

ಇನ್ನೂ ಹಲವಾರು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿದ ಅಬ್ಬಾಸ್ ಈಗ ಕ್ವಾಲಿಟಿ ಅನಲಿಸ್ಟ್ ಆಗಿ ನ್ಯೂಜಿಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. 

Latest Videos

click me!