ಕಿಂಗ್ ಖಾನ್ ಮಗನಿಗೆ ಮದುವೆ ಪ್ರಪೋಸಲ್: ಹೀಗಿತ್ತು ಶಾರೂಖ್ ರಿಯಾಕ್ಷನ್

First Published | Aug 29, 2020, 6:06 PM IST

ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಪುತ್ರ ಅಬ್ರಾಂಗೆ ಮದುವೆ ಪ್ರಪೋಸಲ್ ಬಂದಿದೆ. ನಟ ಶಾರೂಖ್ ಇದಕ್ಕೆ ಏನಂದ್ರು..? ಇಲ್ಲಿ ನೋಡಿ

ಮಕ್ಕಳನ್ನು ಬೆಳೆಸೋ ವಿಚಾರದಲ್ಲಿ ಶಾರೂಖ್ ಖಾನ್ ಮತ್ತು ಗೌರಿ ಖಾನ್ ಓಪನ್ ಸ್ವಭಾವದವರು.
ಟ್ವಿಟರ್‌ನಲ್ಲಿ ನಡೆದ ಕ್ವಶ್ಚನ್ ಆನ್ಸರ್ ಸೆಷನ್‌ನಲ್ಲಿ ಅಭಿಮಾನಿಯೊಬ್ಬರು ಕಿಂಗ್ ಖಾನ್ ಮಗನಿಗೆ ಮದುವೆ ಪ್ರಪೋಸಲ್ ತಂದಿದ್ದಾರೆ.
Tap to resize

ನನ್ನ ಸೊಸೆ ವೇದಿಕಾಗೆ ಅಬ್ರಾಂ ಅಂದ್ರೆ ತುಂಬಾ ಇಷ್ಟ. ಅವಳು ನಿಮ್ಮಗನನ್ನು ಮದುವೆಯಾಗ್ಬೋದಾ..? ಕಳೆದ ತಿಂಗಳಷ್ಟೇ ಒಂದು ವರ್ಷ ಆಗಿದೆ. ನೀವು ಆಶಿರ್ವದಿಸಿ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಶಾರೂಖ್ ಗಾಡ್‌ ಬ್ಲೆಸ್ ಹರ್, ಅವಳು ಮುದ್ದಾಗಿದ್ದಾಳೆ ಎಂದಿದ್ದಾರೆ.
ತನ್ನ ಚಿಕ್ಕ ಮಗನ ಬಗ್ಗೆ ಶಾರೂಖ್ ಸಂದರ್ಶನಗಳ್ಲಲ್ಲಿ ಹೇಳುತ್ತಲೇ ಇರುತ್ತಾರೆ. ಹಾಗೆಯೇ ತಮ್ಮ ಚಿಕ್ಕ ಮಗ ದೊಡ್ಡವರಿಗಿಂತ ಯಾವ ರೀತಿ ಡಿಫರೆಂಟ್ ಅನ್ನೋದನ್ನೂ ಹೇಳುತ್ತಾರೆ.
ಅಬ್ರಾಂಗೆ ನನ್ನ ಸುತ್ತಮುತ್ತಲಿರುವುದು ಖುಷಿಯಾಗುತ್ತದೆ. ಸುಹಾನ ಆರ್ಯನ್ ತರ ಅಲ್ಲ, ಇವನಿಗೆ ಜನರೊಂದಿಗೆ ಬೆರೆಯುವುದು ಇಷ್ಟ ಎಂದಿದ್ದಾರೆ.
ಶರೂಖ್‌ ಖಾನ್ ಮತ್ತು ಗೌರಿ 1991 ಅಕ್ಟೋಬರ್ 25ರಂದು ವಿವಾಹಿತರಾಗಿದ್ದರು. 6 ತಿಂಗಳ ರಿಲೇಷನ್‌ಶಿಪ್ ನಂತರ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು.
ಇವರಿಗೆ ಮೂವರು ಮಕ್ಕಳಿದ್ದು ಸುಹಾನ, ಅಬ್ರಾಂ, ಆರ್ಯನ್ ಖಾನ್.

Latest Videos

click me!