'ಲಾಕ್ ಮಾಡಿ ಗುಪ್ತಾಂಗ ತೋರಿಸಿದ್ದಾರೆ'  ಕಂಗನಾ ಬೋಲ್ಡ್ ಆರೋಪ ಯಾರ ಮೇಲೆ!

First Published | Sep 20, 2020, 11:23 PM IST

ಮುಂಬೈ (ಸೆ. 20)   ನಟಿ ಪಾಯಲ್ ಘೋಷ್​ ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರೆಸಿದ ನಂತರ ಅಖಾಡಕ್ಕೆ ಕಂಗನಾ ರಣಾವತ್ ಸಹ ಧುಮುಕಿದ್ದಾರೆ. ಪಾಯಲ್ ಗೆ ಆದ ಅನುಭವ ನನಗೂ ಆಗಿದೆ ಎಂದು ದನಿ ಸೇರಿಸಿದ್ದಾರೆ.

ನಿಮ್ಮನ್ನು ವ್ಯಾನ್, ಕೋಣೆ ಅಥವಾ ಪಾರ್ಟಿಯಲ್ಲಿ ಲಾಕ್ ಮಾಡಿಕೊಂಡು, ಅಥವಾ ನೃತ್ಯ ಮಾಡುತ್ತ ಥಟ್ಟನೇ ತಮ್ಮ ಗುಪ್ತಾಂಗ ಪ್ರದರ್ಶನ್ ಮಾಡಿ ನಾಲಿಗೆಯನ್ನು ನಿಮಗೆ ಗೊತ್ತಿಲ್ಲದಂತೆ ನಿಮ್ಮ ಬಾಯಲ್ಲಿ ನುಗ್ಗಿಸುತ್ತಾರೆ ಎಂದು ಕಂಗನಾ ಟ್ವಿಟ್ ಮಾಡಿದ್ದಾರೆ.
ಏನೋ ಕೆಲಸ ಇರುವಂತೆ ಅಪಾಯಿಂಟ್​​ಮೆಂಟ್ ತೆಗೆದುಕೊಂಡು ಮನೆಗೆ ಬರುತ್ತಾರೆ..ಆದರೆ ನಂತರ ನಮ್ಮನ್ನು ಬಲವಂತ ಮಾಡುತ್ತಾರೆ. ಇಂಥ ಕೆಟ್ಟಕೆಟ್ಟ ಅನುಭವಗಳು ನನಗೂ ಆಗಿವೆ ಎಂದು ಘೋಷ್‌ ಹೇಳಿಕೆಗೆ ಬೆಂಬಲ ನೀಡಿದ್ದಾರೆ.
Tap to resize

ಕಂಗನಾ ಯಾರ ಹೆಸರನ್ನು ಉಲ್ಲೇಖ ಮಾಡಿಲ್ಲ. ದೊಡ್ಡ ದೊಡ್ಡ ನಿರ್ದೇಶಕರು ಮತ್ತು ನಾಯಕರು ಇಂಥ ಕೆಲಸ ಮಾಡುತ್ತಾರೆ ಎಂದಿದ್ದಾರೆ.
ಹೆಸರಿಗೆ ಒಂದು ಮದುವೆಯಾಗಿ ತಮ್ಮ ಕಾಮ ತೀರಿಸಿಕೊಳ್ಳಲು ಮುಗ್ಧ ಯುವತಿಯರ ಮೇಲೆ ದೌರ್ಜನ್ಯ ಎಸಗುತ್ತಾರೆ ಎಂದು ಕಂಗನಾ ಕಿಡಿ ಕಾರಿದ್ದಾರೆ.
2018ರಲ್ಲಿ ಶುರುವಾಗಿದ್ದ ಮೀ ಟೂ ಅಭಿಯಾನ ಯಾವುದೇ ತಾರ್ಕಿಕ ಅಂತ್ಯ ಕಾಣಲೇ ಇಲ್ಲ. ಯಾವ ಸಂತ್ರಸ್ತರಿಗೂ ನ್ಯಾಯ ಸಿಗಲಿಲ್ಲ. ಈಗ ಪಾಯಲ್​ಗೂ ಕೂಡ ಅದೇ ಅನುಭವ ಆಗುತ್ತದೆ ಇದೊಂದು ರೂಢಿಯಾಗಿ ಹೋಗಿದೆ ಎಂದಿದ್ದಾರೆ.
ಅನುರಾಗ್​ ಕಶ್ಯಪ್​ ಹಲವು ಮಹಿಳೆಯರ ಜತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಮದುವೆಯಾದ ಮೇಲೆಯೂ ಹಳೆಯ ಚಾಳಿ ಬಿಡಲಿಲ್ಲ ಎಂದು ಸರಣಿ ಟ್ವೀಟ್ ಗಳ ಮೂಲಕ ಆರೋಪದ ಮೇಲೆ ಆರೋಪ ಮಾಡಿದ್ದಾರೆ.

Latest Videos

click me!