ಚೈಯಾ ಚೈಯಾ ಹಾಡಿನಲ್ಲಿ Shahrukhಗೆ ಇರಲಿಲ್ಲ ಅವಕಾಶ; ಮತ್ತೆ ಮಾಡಿದ್ದೇನು?

Published : Jun 02, 2022, 05:43 PM IST

ದಕ್ಷಿಣದ ಖ್ಯಾತ ನಿರ್ದೇಶಕ ಮಣಿರತ್ನಂ  (Mani Ratnam) ಗುರುವಾರ 66ನೇ ವರ್ಷಕ್ಕೆ ಕಾಲಿಟ್ಟರು. ಗುರು, ರೋಜಾ, ಮುಂತಾದ ಹಿಟ್‌ ಚಿತ್ರಗಳನ್ನು ನಿರ್ಮಿಸಿದ ಮಣಿ ಅವರು ಅತ್ಯಂತ ಟ್ಯಾಲೆಂಟೆಡ್‌ ನಿರ್ದೇಶಕರಲ್ಲಿ ಒಬ್ಬರು. ಅವರು ಹಿಂದಿ ಮತ್ತು ತಮಿಳು ಚಿತ್ರರಂಗದಲ್ಲಿ 6 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಣಿಯವರ ಸೂಪರ್‌ಹಿಟ್ ಚಿತ್ರಗಳಲ್ಲಿ ಶಾರುಖ್ ಖಾನ್ 'ದಿಲ್ ಸೆ' ಕೂಡ ಸೇರಿದೆ. ಪ್ರೀತಿ ಜಿಂಟಾ (Preity Zinta) ಮತ್ತು ಮನಿಶಾ ಕೊಯಿರಾಲಾ (Manisha Koirala) ಪ್ರಮುಖ ಪಾತ್ರದಲ್ಲಿರುವ ಇದರಲ್ಲಿ ಮಲೈಕಾ ಅರೋರಾ (Malaika Arora) ಐಟಂ ಹಾಡನ್ನು ಮಾಡಿದ್ದಾರೆ. ಈ ಸಿನಿಮಾದ ಫೇಮಸ್‌  ಚೈಯ್ಯಾ ಚೈಯಾ ಹಾಡಿಗೆ ಸಂಬಂಧಿಸಿದ ಇಂಟರೆಸ್ಟಿಂಗ್‌ ವಿಷಯವೊಂದು ಇಲ್ಲಿದೆ.

PREV
15
 ಚೈಯಾ ಚೈಯಾ ಹಾಡಿನಲ್ಲಿ Shahrukhಗೆ ಇರಲಿಲ್ಲ ಅವಕಾಶ; ಮತ್ತೆ ಮಾಡಿದ್ದೇನು?

ಈ ಚಿತ್ರದ ಒಂದು ಹಾಡು ಚೈಯ್ಯಾ ಚೈಯಾ ಆ ಕಾಲದ ಸೂಪರ್ ಹಿಟ್ ಹಾಡು. ಇದು ದಿಲ್ ಸೆ (Dil Se) ಸಿನಿಮಾದ ಕ್ಲಾಸಿಕ್‌   ಹಾಡುಗಳಲ್ಲಿ ಒಂದು. ಒಂದು ಸಂದರ್ಶನವೊಂದರಲ್ಲಿ, ಗೀತರಚನಾಕಾರ ಗುಲ್ಜಾರ್ ಅವರು ಶಾರುಖ್ ಅವರು ಚೈಯಾ ಚೈಯಾ ಹಾಡಿನ ಭಾಗವಾಗಲು ಏನೆಲ್ಲಾ ಸರ್ಕಸ್ ಮಾಡಿದ್ದರೆಂಬುದನ್ನು ಹೇಳಿದ್ದರು.


 

25

ಮಣಿರತ್ನಂ ನಿರ್ದೇಶನದ 'ದಿಲ್ ಸೇ' ಚಿತ್ರದಲ್ಲಿ ಶಾರುಖ್ ಖಾನ್ ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ಕೆಲಸ ಮಾಡುವ ರೇಡಿಯೊ ಪ್ರಸಾರಕ ಅಮರಕಾಂತ್ ವರ್ಮಾ ಪಾತ್ರವನ್ನು ನಿರ್ವಹಿಸಿದ್ದಾರೆ. ಶಾರುಖ್ ಖಾನ್ ಅಕಾ ಅಮರಕಾಂತ್ ವರ್ಮಾ ಅವರು ಈಶಾನ್ಯ ಭಾರತದಲ್ಲಿ ನಿಯೋಜನೆಯ ಮೇಲೆ ಬಂದಾಗ ಮೇಘನಾ (ಮನೀಶಾ ಕೊಯಿರಾಲಾ) ಳನ್ನು ಪ್ರೀತಿಸುತ್ತಾರೆ. ಆದರೆ ಅಮರ್ ಈಗಾಗಲೇ ಪ್ರೀತಿ (ಪ್ರೀತಿ ಜಿಂಟಾ) ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುತ್ತಾರೆ.

  

35

ದಿಲ್ ಸೇ ಚಿತ್ರದ ಎಲ್ಲಾ ಹಾಡುಗಳಲ್ಲಿ, ಚೈಯ್ಯಾ ಚೈಯಾ ಅದರ ಅತ್ಯಂತ ಅದ್ಭುತವಾದ ಹಾಡುಗಳಲ್ಲಿ ಒಂದಾಗಿದೆ, ಅದ್ಭುತ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಎಆರ್ ರೆಹಮಾನ್ (AR Rehman) ಸಂಗೀತ ಸಂಯೋಜಿಸಿದ ಮತ್ತು ಗುಲ್ಜಾರ್ ಸಂಯೋಜಿಸಿದ ಚೈಯ್ಯ ಚೈಯಾ ಶಾರುಖ್ ಮತ್ತು ಮಲೈಕಾ ಅರೋರಾ ಚಲಿಸುತ್ತಿರುವ ರೈಲಿನ ಮೇಲೆ ನೃತ್ಯ ಮಾಡಿದ್ದಾರೆ. ಈ ಹಾಡಿಗಾಗಿ ನೃತ್ಯ ಸಂಯೋಜಕಿ ಫರಾ ಖಾನ್ ಈ ಹಾಡಿಗಾಗಿ ಆ ವರ್ಷದ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು.
 

45

ಗುಲ್ಜಾರ್ ಅವರು ಚೈಯ್ಯ ಚೈಯಾ ಬುಲ್ಲೆಹ್ ಷಾ ಅವರ ಥೈಯಾ ಥೈಯಾ ನಂತಹ ಸೂಫಿ ಗೀತೆಯಿಂದ ಪ್ರೇರಿತರಾಗಿದ್ದರು. ಶಾರುಖ್ ಹಾಡಿನ ಸಾಹಿತ್ಯವನ್ನು ಕೇಳಿದಾಗ, ಅದನ್ನು ಹಿನ್ನಲೆಯಲ್ಲಿ ಫಕೀರರ ಗುಂಪಿನಿಂದ  ಹಾಡಿಸುವುದು ಇಷ್ಟವಿರಲಿಲ್ಲ ಎಂದು ಅವರು ಹೇಳಿದರು. 

55

ಆದರೆ ಈ ಹಾಡಿಗಾಗಿ ಮಣಿರತ್ನಂ (Maniratnam) ಅವರು ಮೊದಲೇ ಯೋಜಿಸಿದ್ದರು. ಅದೇ ಸಮಯದಲ್ಲಿ ನಟ ಶಾರುಖ್ ಖಾನ್ ಸ್ವತಃ ಚೈಯಾ ಚೈಯಾದಲ್ಲಿ ನೃತ್ಯ (Dance) ಮಾಡಲು ಬಯಸಿದ್ದರು. ಆದ್ದರಿಂದ ಶಾರುಖ್‌ ಈ ಹಾಡು ಆಳವಾದ ಅರ್ಥದ ಕವಿತೆ ಮತ್ತು ಇದರಲ್ಲಿ ನಟ ಪಾರ್ಫಾಮ್‌ ಮಾಡುವುದು ಅವಶ್ಯಕ ಎಂದು ಹೇಳುವ ಮೂಲಕ ಅವರು ಮಣಿರತ್ನಂ ಅವರನ್ನು ಒಪ್ಪಿಸಿದ್ದರು. 

Read more Photos on
click me!

Recommended Stories