ಮಹಾಕುಂಭದಲ್ಲಿ ಸನ್ಯಾಸ ದೀಕ್ಷೆ ಪಡೆದ ನಂತರ ಮಮತಾ ಕುಲಕರ್ಣಿ ಹೆಸರನ್ನು ಶ್ರೀ ಯಮಾಯಿ ಮಮತಾ ನಂದಗಿರಿ ಎಂದು ಬದಲಾಯಿಸಲಾಗಿದೆ. ಇದಾದ ಬಳಿಕ ಅವರನ್ನು ಕಿನ್ನರ ಅಖಾರದ ಮಹಾಮಂಡಲೇಶ್ವರರನ್ನಾಗಿ ಮಾಡಲಾಗಿದೆ. ಆದರೆ ಮಮತಾ ಅವರನ್ನು ಕಿನ್ನರ ಅಖಾರದ ಮಹಾಮಂಡಲೇಶ್ವರಿಯನ್ನಾಗಿ ಮಾಡಿದಾಗ ಅನೇಕರು ವಿರೋಧ ವ್ಯಕ್ತಪಡಿಸಿದರು.
ಭಾರೀ ಗದ್ದಲದ ನಂತರ ಇದೀಗ ಮಮತಾ ಅವರನ್ನು ಈ ಹುದ್ದೆಯಿಂದ ತೆಗೆದುಹಾಕಲಾಗಿದೆ. ಇನ್ನೊಂದೆಡೆ ಮಮತಾ ಅವರು ಕಿನ್ನರ ಅಖಾಡದ ಮಹಾಮಂಡಲೇಶ್ವರ ಹುದ್ದೆಯನ್ನು 10 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿತ್ತು. ಆದರೆ, ಈ ಆರೋಪ ತಳ್ಳಿ ಹಾಕಿರುವ ಮಮತಾ ನನ್ನ ಖಾತೆಯಲ್ಲಿ 1 ಕೋಟಿ ರೂಪಾಯಿ ಕೂಡ ಇಲ್ಲ, ಹೀಗಿರುವಾಗ 10 ಕೋಟಿ ಹೇಗೆ ಕೊಡಲಿಕ್ಕೆ ಸಾಧ್ಯ ಎಂದು ಕಾರ್ಯಕ್ರಮದ ವೇಳೆ ಸ್ಪಷ್ಟಪಡಿಸಿದ್ದಾರೆ.