ಮಲಯಾಳಂ ಸ್ಟಾರ್‌ ಪೃಥ್ವಿರಾಜ್ ಸುಕುಮಾರನ್ ಬಿಬಿಸಿ ಪತ್ರಕರ್ತೆ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ?

First Published | Jun 12, 2021, 2:18 PM IST

ಪೃಥ್ವಿರಾಜ್ ಸುಕುಮಾರನ್ ಮಲೆಯಾಳಿ ಸಿನಿಮಾ ಕ್ಷೇತ್ರದ ಫೇಮಸ್‌ ಹೆಸರು. ಪೃಥ್ವಿರಾಜ್ ನಟ, ನಿರ್ದೇಶಕ, ನಿರ್ಮಾಪಕ, ಹಿನ್ನಲೆ ಗಾಯಕ ಹಾಗೂ ಸಿನಿಮಾ ವಿತರಕರಾಗಿ ಹೀಗೆ ಪ್ರತಿಯೊಂದೂ ಫೀಲ್ಡಿನಲ್ಲೂ ಸಖತ್‌ ಹೆಸರು ಮಾಡಿದ್ದಾರೆ. ಸುಪ್ರಿಯಾ ಮೆನನ್ ಅವರನ್ನು ವಿವಾಹವಾಗಿ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಬಿಬಿಸಿಯಲ್ಲಿ ಜರ್ನಲಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದ ಸುಪ್ರಿಯಾ ಅವರ ಪ್ರೀತಿಯಲ್ಲಿ  ಪೃಥ್ವಿರಾಜ್ ಸುಕುಮಾರನ್ ಬಿದ್ದಿದ್ದು ಹೇಗೆ ಗೊತ್ತಾ? ಈ ಜೋಡಿಯ ಇಂಟರೆಸ್ಟಿಂಗ್‌ ಲವ್‌ಸ್ಟೋರಿಯ ವಿವರ ಇಲ್ಲಿದೆ.

ಮಲಯಾಳಂ ನಟ ಪೃಥ್ವಿರಾಜ್ ಅವರು ಏಪ್ರಿಲ್ 25, 2011 ರಂದು ಕೇರಳದ ಪಾಲಕ್ಕಾಡ್‌ನಲ್ಲಿ ಸುಪ್ರಿಯಾ ಮೆನನ್ ಅವರನ್ನು ವಿವಾಹವಾದರು.
2014 ರಲ್ಲಿ, ಅಲಂಕೃತಾಎಂಬ ಹೆಣ್ಣು ಮಗುವಿದೆ ಈ ದಂಪತಿಗೆ.
Tap to resize

ಪೃಥ್ವಿರಾಜ್ ಸುಕುಮಾರನ್ ಅವರು ಸುಪ್ರಿಯಾ ಮೆನನ್ ಅವರನ್ನು ಪ್ರೀತಿಸಿ ನಂತರ ಕೇರಳದ ಪಾಲಕ್ಕಾಡ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು.
ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಪೃಥ್ವಿರಾಜ್ ಅವರು ತಮ್ಮ ಹೆಂಡತಿಯ ಬಗ್ಗೆ ಮತ್ತು ಅವರು ಮುಂಬೈನಲ್ಲಿ ಹೇಗೆ ಭೇಟಿಯಾದರು ಎಂಬುದರ ಬಗ್ಗೆ ಹಂಚಿಕೊಂಡಿದ್ದಾರೆ.
'ಸುಪ್ರಿಯಾ ಮಲಯಾಳಿ ಆಗಿದ್ದರೂ, ಅವರು ತಮ್ಮ ಜೀವನದ ಬಹು ಭಾಗವನ್ನು ಮುಂಬೈಯಲ್ಲಿ ಕಳೆದಿದ್ದಾರೆ. ಅವರು ಮುಂಬೈ ಹುಡುಗಿ. ವಾಸ್ತವವಾಗಿ, ನಾನು ನಿಜವಾದ ಮುಂಬೈಯನ್ನು ಸುಪ್ರಿಯಾ ಕಣ್ಣುಗಳ ಮೂಲಕ ನೋಡಿದೆ. ಖಂಡಿತವಾಗಿಯೂ, ನಾನು ಅವರನ್ನು ತಿಳಿದುಕೊಳ್ಳುವ ಮೊದಲೇ ಮುಂಬೈಯನ್ನು ತಿಳಿದಿದ್ದೆ. ಆದರೆ ಅದು ನಾನು ನೋಡಿರದ ಮುಂಬೈಯನ್ನು ನನಗೆ ತೋರಿಸಿದ್ದು ಸುಪ್ರಿಯಾ' ಎನ್ನುತ್ತಾರೆ ಪೃಥ್ವಿರಾಜ್‌.
ಪೃಥ್ವಿರಾಜ್‌ ಮುಂಬೈಗೆ ಭೇಟಿ ನೀಡಿದಾಗ, ಗ್ರೆಗೊರಿ ಡೇವಿಡ್ ರಾಬರ್ಟ್ಸ್ ಅವರ ಕಾದಂಬರಿ ಶಾಂತಾರಾಮ್‌ನಲ್ಲಿ ಉಲ್ಲೇಖಿಸಲಾದ ಸ್ಥಳಗಳನ್ನು ನೋಡಲು ಬಯಸಿದ್ದರಂತೆ.
'ಶಾಂತಾರಾಮ್ ಕಾದಂಬರಿಯಲ್ಲಿ ಹಾಜಿ ಅಲಿ ಮತ್ತು ಲಿಯೋಪೋಲ್ಡ್ ಕೆಫೆಯಂತಹ ಎಲ್ಲಾ ಸ್ಥಳಗಳನ್ನು ನೋಡಲು ನಾನು ಬಯಸುತ್ತೇನೆ. ಸುಪ್ರಿಯಾ ಫ್ರೆಂಡ್‌ ಆಗಿದ್ದಳು. ಈ ಎಲ್ಲಾ ಸ್ಥಳಗಳಿಗೆ ಕರೆದೊಯ್ಯಲು ನಾನು ಅವಳನ್ನು ಕೇಳಿದೆ. ಹೀಗೆ, ನಾನು ಮುಂಬೈನಲ್ಲಿದ್ದಮುಂದಿನ ಕೆಲವು ವಾರಗಳವರೆಗೆ ಸುಪ್ರಿಯಾ ನನ್ನ ಜೀವನವನ್ನು ಕೈಗೆ ತೆಗೆದುಕೊಂಡಳು'
ನಾವು ಪ್ರೀತಿಯಲ್ಲಿ ಸಿಲುಕಿ ಮದುವೆಯಾಗಲು ನಿರ್ಧರಿಸಿದ್ದು ಆ ಸಮಯದಲ್ಲೇ.ಆದ್ದರಿಂದ, ಆ ನಗರದೊಂದಿಗೆ ನಾನು ಉತ್ತಮ ರೊಮ್ಯಾಂಟಿಕ್‌ ಕನೆಕ್ಷನ್‌ ಹೊಂದಿದ್ದೇನೆ. ನನಗೆ ಮುಂಬಾನಲ್ಲಿರಲು ಇಷ್ಟ.ಅದು ನನ್ನ ಜೀವನಕ್ಕೆ ಪ್ರೀತಿ ನೀಡಿದೆ,' ಎನ್ನುತ್ತಾರ ಮಲಯಾಳಂ ನಟ.
ಕೇರಳದಲ್ಲಿ ನನ್ನೊಂದಿಗೆ ವಾಸಿಸಲು ಸುಪ್ರಿಯಾ ತನ್ನ ಕೆಲಸ ಮತ್ತು ನಗರವನ್ನು ತ್ಯಜಿಸಿದಳು. ನಾನು ನನ್ನ ಹೆಂಡತಿಗೆ ತುಂಬಾ ಋಣಿಯಾಗಿದ್ದೇನೆ. ಅವಳ ಬೆಂಬಲವಿಲ್ಲದೆ ನಾನು ಇಂದು ಏನಾಗಿದ್ದೇನೋ ಅದು ಸಾಧ್ಯವಿರುತ್ತಿರಲಿಲ್ಲ '
ಸುಪ್ರಿಯಾ ಲಂಡನ್‌ನ ಹೆಸರಾಂತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು 2007ರಲ್ಲಿ ಬಿಬಿಸಿಗೆ ಸೇರಿ,ಗ್ರಾಮೀಣ ಭಾರತದಲ್ಲಿ ವಿಶೇಷ ವರದಿಗಾರರಾಗಿ ಕೆಲಸ ಮಾಡಿದ್ದಾರೆ.

Latest Videos

click me!