ಟಾಲಿವುಡ್‌ಗೆ ಮತ್ತೊಬ್ಬ ಮಲಯಾಳಿ ನಟಿ; ಮೀನಾಕ್ಷಿ ದಿನೇಶ್ ಅದ್ಧೂರಿ ಎಂಟ್ರಿಗೆ ಫ್ಯಾನ್ಸ್ ಫಿದಾ!

Published : Apr 25, 2025, 09:51 PM ISTUpdated : Apr 25, 2025, 10:15 PM IST

ಮತ್ತೊಬ್ಬ ಮಲಯಾಳಿ ಬ್ಯೂಟಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮುದ್ದಾದ ಮತ್ತು ಸಿಂಪಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಈಕೆಯ ಹೆಸರು ಮೀನಾಕ್ಷಿ ದಿನೇಶ್. ಆದರೆ, ಟಾಲಿವುಡ್‌ಗೆ ನಟಿ ಎಂಟ್ರಿಕೊಟ್ಟ ದಿನವೇ ಅಭಿಮಾನಿಗಳು ಫಿದಾ ಆಗುವ ಕೆಲಸ ಮಾಡಿದ್ದಾರೆ.

PREV
17
ಟಾಲಿವುಡ್‌ಗೆ ಮತ್ತೊಬ್ಬ ಮಲಯಾಳಿ ನಟಿ; ಮೀನಾಕ್ಷಿ ದಿನೇಶ್ ಅದ್ಧೂರಿ ಎಂಟ್ರಿಗೆ ಫ್ಯಾನ್ಸ್ ಫಿದಾ!

ಮಲಯಾಳಂ ಚಿತ್ರರಂಗದಿಂದ ಟಾಲಿವುಡ್‌ಗೆ ನಟಿಯರು ಬರುತ್ತಲೇ ಇದ್ದಾರೆ. ನಿತ್ಯ ಮೆನನ್, ಸಾಯಿ ಪಲ್ಲವಿ, ಸಂಯುಕ್ತ ಮೆನನ್, ಅನುಪಮಾ ಪರಮೇಶ್ವರನ್ ಮುಂತಾದ ನಟಿಯರು ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ.

27

ಇದೀಗ ಮತ್ತೊಬ್ಬ ಮಲಯಾಳಿ ಬ್ಯೂಟಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಿನಿಮಾ ಓಪನಿಂಗ್ ದಿನದಂದೇ ತೆಲುಗು ಯುವಕರ ಹೃದಯ ಗೆದ್ದಿದ್ದಾರೆ. ಮುದ್ದಾದ ಮತ್ತು ಸರಳ ಲುಕ್ಸ್‌ನೊಂದಿಗೆ ಕಾಣಿಸಿಕೊಳ್ಳುತ್ತಿರುವ ಈಕೆಯ ಹೆಸರು ಮೀನಾಕ್ಷಿ ದಿನೇಶ್.

37

ನಟ ಗೋಪಿಚಂದ್ ಅವರ ಹೊಸ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಗೋಪಿಚಂದ್ ಹಲವು ವರ್ಷಗಳಿಂದ ಒಂದು ಹಿಟ್ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ನಟಿಯಿಂದ ಆ ಅದೃಷ್ಟ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

47

ಗೋಪಿಚಂದ್‌ಗೆ ಕೊನೆಯದಾಗಿ ಭೀಮಾ, ವಿಶ್ವಂ ಸಿನಿಮಾ ಮಾಡಿದ್ದು, ಇವು ಮಕಾಡೆ ಮಲಗಿದ್ದು, ಹೂಡಿಕೆ ಮಾಡಿದ್ದ ಹಣವೂ ವಾಪಸ್ ಬಂದಿಲ್ಲ. ಇದೀಗ ವಿಶ್ವಂ ನಂತರ ಗೋಪಿಚಂದ್ ಎರಡು ಚಿತ್ರಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಒಂದು ಘಾಜಿ ನಿರ್ದೇಶಕ ಸಂಕಲ್ಪ್ ರೆಡ್ಡಿಯವರೊಂದಿಗೆ ಮಾಡುತ್ತಿದ್ದು, ಇದರ ಬಗ್ಗೆ ಘೋಷಣೆಯೂ ಆಗಿದೆ.

57

ಮತ್ತೊಂದು ಚಿತ್ರ ಇತ್ತೀಚೆಗೆ ಲಾಂಚ್ ಆಗಿದೆ. ಕುಮಾರ್ ಸಾಯಿ ಎಂಬ ಚೊಚ್ಚಲ ನಿರ್ದೇಶಕರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಬಿ.ವಿ.ಎಸ್.ಎನ್. ಪ್ರಸಾದ್ ಈ ಚಿತ್ರದ ನಿರ್ಮಾಪಕರು. ನಾಯಕಿ ಮೀನಾಕ್ಷಿ ದಿನೇಶ್ ಅವರ ಆಯ್ಕೆಯೂ ಅಂತಿಮಗೊಂಡಿದೆ. ಈ ಚಿತ್ರದ ಪೂಜಾ ಕಾರ್ಯಕ್ರಮದಲ್ಲಿ ಮೀನಾಕ್ಷಿ ದಿನೇಶ್ ಭಾಗವಹಿಸಿದ್ದರು. ತೆಲುಗಿನಲ್ಲಿ ಇದು ಅವರ ಮೊದಲ ಚಿತ್ರ. ಇದರಿಂದ ಈ ನಟಿ ಯಾರು ಎಂದು ತಿಳಿದುಕೊಳ್ಳಲು ನೆಟ್ಟಿಗರು ಆಸಕ್ತಿ ತೋರಿಸುತ್ತಿದ್ದಾರೆ.

67

ಮುದ್ದಾಗಿ, ಸುಂದರವಾಗಿ ಕಾಣುವ ಮೀನಾಕ್ಷಿ ದಿನೇಶ್ ಅವರ ಫೋಟೋಗಳು ಯುವಕರನ್ನು ಆಕರ್ಷಿಸುತ್ತಿವೆ. ಸಿನಿಮಾ ಬಿಡುಗಡೆಯಾಗುವ ಮೊದಲೇ ಮೀನಾಕ್ಷಿ ಎಲ್ಲರ ಹೃದಯ ಗೆದ್ದಿದ್ದಾರೆ. ಮಲಯಾಳಂನಲ್ಲಿ ಅವರು ಪೊರಂಜು ಮರಿಯಂ ಜೋಸ್ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ.

77

ಮೀನಾಕ್ಷಿ ಸೀರೆ ಉಟ್ಟರೂ, ಮಾಡ್ರನ್ ಡ್ರೆಸ್ ಧರಿಸಿದರೂ ಸುಂದರವಾಗಿ ಕಾಣುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಮೀನಾಕ್ಷಿಯಿಂದ ಗೋಪಿಚಂದ್‌ಗೆ ಅದೃಷ್ಟ ಒಲಿಯುತ್ತದೆಯೇ ಎಂದು ಕಾದು ನೋಡಬೇಕು. ಈ ಚಿತ್ರದಲ್ಲಿ ಗೋಪಿಚಂದ್ ತಮ್ಮ ಸೋಲುಗಳಿಗೆ ಬ್ರೇಕ್ ಹಾಕಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

Read more Photos on
click me!

Recommended Stories