ವಿವಾಹಕ್ಕಾಗಿ ನಟನೆಯನ್ನೇ ಬೇಡವೆಂದು ಬಿಟ್ಟು ಪತಿಯೇ ಸರ್ವಸ್ವ ಎಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಮಂಜು ಹಲವು ಏಳು ಬೀಳುಗಳನ್ನು ಕಂಡಿದ್ದರು. 14 ವರ್ಷದ ದಾಂಪತ್ಯ ಜೀವನದ ಬಳಿಕ ಅವರು ಡಿವೋರ್ಸ್ ಪಡೆದುಕೊಂಡರು.
ತಮ್ಮ ಜೀವನದ ಜವಾಬ್ದಾರಿಯನ್ನು ತಾವೇ ಹೊತ್ತರು:ವಿಚ್ಛೇಧನೆ ಬದುಕಿನ ಕೊನೆಯಲ್ಲ, ನಮಗಾಗಿ ಬದುಕುವ ಎಂದು ಬದುಕಿ ತೋರಿಸಿದಾಕೆ ಈಕೆ. ಮಂಜು ವಾರಿಯರ್ ದಿಲೀಪ್ ಪತ್ನಿಯಾದಾಗ ಆಕೆ ಮಲಯಾಳಂನಲ್ಲಿ ಟಾಪ್ ನಟಿಯಾಗಿದ್ದವರು. ಡಿವೋರ್ಸ್ ನಂತರ ಹಲವು ಬ್ಲಾಕ್‌ಬಸ್ಟರ್‌ಗಳಲ್ಲಿ ನಟಿಸಿದರು. 14 ವರ್ಷದ ಸುಧೀರ್ಘ ಅಂತರದ ನಂತರ 2014ರಲ್ಲಿ ದಿಲೀಪ್ಗೆ ಸೆಡ್ಡು ಹೊಡೆವಂತೆ ಹೌ ಓಲ್ಡ್ ಆರ್ ಯೂ ಸಿನಿಮಾ ಮಾಡಿದರು. ಇದು ಇವರಂತಹ ಹೆಚ್ಚಿನ ಮಹಿಳೆಯರಿಗೆ ಸೂರ್ಥಿ ತುಂಬಿದ್ದು ಸುಳ್ಳಲ್ಲ.
ಮೌನವೇ ಆಯುಧ: ಪತಿಗಾಗಿ ಸಿನಿಮಾ ಬಿಟ್ಟು ಡಿವೋರ್ಸ್ ಬಳಿಕ ಮತ್ತೆ ಸೂಪರ್‌ಸ್ಟಾರ್ ಆಗಿ ಮೂಡಿ ಬಂದ ಇವರ ಜೀವನದಲ್ಲಿ ಹಲವು ಅನುಕರಣೀಯ ಅಂಶಗಳಿವೆ.ಮಂಜು ತಮ್ಮ ವೈವಾಹಿಕ ಜೀವನದ ಬಗ್ಗೆ, ಪತಿ ದಿಲೀಪ್ ಬಗ್ಗೆ ಬಹಿರಂಗ ಹೇಳಿಕೆ ನೀಡಲೇ ಇಲ್ಲ. ತಮ್ಮ ಭಾವನೆಗಳನ್ನೂ ವ್ಯಕ್ತಪಡಿಸಲಿಲ್ಲ. ಬದಲಾಗಿ ಮಾಧ್ಯಮದ ಜೊತೆ ಮಾತನಾಡಿದಾಗೆಲ್ಲ ಪಾಸಿಟಿವ್ ಆಗಿಯೇ ಇದ್ದರು.
ನಿಮ್ಮ ಎಕ್ಸ್ ಜೊತೆ ಮಾತನಾಡಲು, ಬೆರೆಯಲು ಹಿಂಜರಿಯಬೇಡಿ: ನಿಮ್ಮ ಸಂಗಾತಿ ಇನ್ನಬ್ಬರಿಗಾಗಿ ನಿಮ್ಮನ್ನು ತೊರೆದು ಹೋಗುವುದು ಅತ್ಯಂತ ಬೇಸರದ ವಿಷಯ. ಆದರೆ ವಾಸ್ತವ ಒಪ್ಪಿಕೊಳ್ಳಲೇ ಬೇಕು. ಹಲವು ಕಾರ್ಯಕ್ರಮದಲ್ಲಿ ಮಂಜು ದಿಲೀಪ್ ಭೇಟಿಯಾಗಿ, ಒಟ್ಟಿಗೆ ಕುಳಿತರೂ ಅಲ್ಲಿ ಮುಜುಗರದ ಸಂದರ್ಭ ಸೃಷ್ಟಿಯಾಗಲೇ ಇಲ್ಲ.
ನಿಮ್ಮ ಹಿಂದಿನ ದಿನವನ್ನೇ ನೆನೆಯುತ್ತಾ ಕೂರಬೇಡಿ: ದಿಲೀಪ್ ಜೊತೆ ಡಿವೋರ್ಸ್ ಆದ ಮೇಲೆ ಮಂಜು ಖಿನ್ನತೆಗೊಳಗಾಗಲಿಲ್ಲ, ಅಳುತ್ತಾ ಕೂರಲಿಲ್ಲ. ಸೀದಾಸಾದವಾಗಿ ಸಿನಿಮಾಗೆ ರೀಎಂಟ್ರಿ ಕೊಟ್ಟು ಮಿಂಚಿದ್ರು. ಹಾಗೇ ನೃತ್ಯಗಾರ್ತಿಯಾಗಿರುವ ಇವರು ನೃತ್ಯ ಪ್ರದರ್ಶನಗಳನ್ನು ಕೊಡೋದ್ರಲ್ಲೂ ಬ್ಯುಸಿಯಾದ್ರು
ಪ್ರಭುದ್ಧತೆಯಿಂದ ವರ್ತಿಸಿ: ಜನ ಚುಚ್ಚಿ ಮಾತನಾಡಿದಾಗಲು ಮಂಜು ಧೈರ್ಯಗುಂದಲಿಲ್ಲ. ಮಗಳು ಮೀನಾಕ್ಷಿಗೆ ಮಂಜು ಕೆಟ್ಟ ತಾಯಿ ಎಂದು ದಿಲೀಪ್ ಅಭಿಮಾನಿಗಳು ದ್ವೇಷಿಸಿದಾಗಲೂ ಆಕೆ ಎಲ್ಲವನ್ನೂ ಅಮನಾಗಿ ಸ್ವೀಕರಿಸುತ್ತಾ ಹೋದರು.