ತಿರುವನಂತಪುರ(ಆ. 09) ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಮಲಯಾಳಂ ನಟಿ ಶರಣ್ಯ ಸಸಿ ನಿಧನರಾಗಿದ್ದಾರೆ.ತಮ್ಮ 35 ನೇ ವರ್ಷದಲ್ಲಿಯೇ ಚಿತ್ರರಂಗ ಅಗಲಿದ್ದಾರೆ. ಕಳೆದ ಹತ್ತು ವರ್ಷದಿಂದ ಆರೋಗ್ಯ ಸಮಸ್ಯೆ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದರು. ತಮ್ಮ 35 ನೇ ವರ್ಷದಲ್ಲಿಯೇ ಚಿತ್ರರಂಗ ಅಗಲಿದ್ದಾರೆ. ಕೊರೋನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಹನ್ನೊಂದು ಸರ್ಜರಿಗಳನ್ನು ಮಾಡಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಸೋಡಿಯಂ ಲೆವಲ್ ಏರುಪೇರಾಗಿದ್ದು ಮತ್ತೆ ದಾಖಲಾಗಿದ್ದರು. ತ್ರಿವೆಂದ್ರಮ್ ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ. 2012ರಲ್ಲಿ ನಟಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಇದೇ ಕಾರಣಕ್ಕೆ ವಿವಿಧ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮಲಯಾಳಂ ಟಿವಿ ಜಗತ್ತಿನಲ್ಲಿ ಶರಣ್ಯ ಅವರದ್ದು ದೊಡ್ಡ ಹೆಸರು. ಚೊಟ್ಟಾ ಮುಂಬೈ ಎಂಬ ಸಿನಿಮಾ ಮೂಲಕ ಮತ್ತಷ್ಟು ಹತ್ತಿರವಾಗಿದ್ದರು. Kerala Malayalam 35-year-old actress Saranya Sasi passes away after battling cancer for 10 years ಮಲಯಾಳಂ ನಟಿ ಶರಣ್ಯ ಇನ್ನಿಲ್ಲ.. ಕೊರೋನಾ ಗೆದ್ದಿದ್ದರು