12 ವರ್ಷ ಕಿರಿಯ Arjun Kapoor ಜೊತೆ ಡೇಟಿಂಗ್ ಬಗ್ಗೆ ಏನು ಹೇಳಿದ್ದಾರೆ ನೋಡಿ Malaika Arora

Published : Apr 22, 2022, 05:21 PM IST

ಮಲೈಕಾ ಅರೋರಾ (Malaika Arora) ಬಾಲಿವುಡ್ ಇಂಡಸ್ಟ್ರಿಯ ಬೋಲ್ಡ್ ಹೀರೋಯಿನ್‌ಗಳಲ್ಲಿ ಒಬ್ಬರು. ಅವರು ತನ್ನದೇ ಆದ ಸ್ಟೈಲ್‌ ಅನ್ನು ಹೊಂದಿದ್ದಾರೆ ಮತ್ತು ಅದನ್ನು ಅನುಸರಿಸಲು ಅವರು ಹಿಂಜರಿಯುವುದಿಲ್ಲ.  ಯಾರು ಏನು ಹೇಳುತ್ತಾರೆ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆಗುತ್ತಾರೆಯೇ ಎಂಬುದರ ಬಗ್ಗೆ ಅವರು ಕಾಳಜಿ ವಹಿಸುವುದಿಲ್ಲ. ಇದೇ ವೇಳೆ ಹಲೋ ಮ್ಯಾಗಜಿನ್ ಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನ, ವಿಚ್ಛೇದನ ಹಾಗೂ ತನಗಿಂತ 12 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮಲೈಕಾ ಅರೋರಾ ತನ್ನ ವೈಯಕ್ತಿಕ ಜೀವನದ ಬಗ್ಗೆ ಏನು ಹೇಳಿದ್ದಾರೆ ನೋಡಿ.  

PREV
18
 12 ವರ್ಷ ಕಿರಿಯ  Arjun Kapoor ಜೊತೆ ಡೇಟಿಂಗ್  ಬಗ್ಗೆ ಏನು ಹೇಳಿದ್ದಾರೆ ನೋಡಿ Malaika Arora

ವಿಚ್ಛೇದನದ ಡೇಟಿಂಗ್ ಮತ್ತು ಗೆಳೆಯ ಅರ್ಜುನ್ ಕಪೂರ್ ನಡುವಿನ ವಯಸ್ಸಿನ ಅಂತರದ ಬಗ್ಗೆ  ಹಲೋ ಮ್ಯಾಗಜಿನ್ ಗೆ ನೀಡಿದ ಸಂದರ್ಶನದಲ್ಲಿ  ಮಲೈಕಾ ಅರೋರಾ ಮಾತನಾಡಿದರು

28
Malaika

ಸಂದರ್ಶನದ ವೇಳೆ, ಮಲೈಕಾ ಅರೋರಾ, ನಮ್ಮ ದೇಶದಲ್ಲಿ ಪುರುಷನು ತನಗಿಂತ ಕಿರಿಯ ಮಹಿಳೆಯೊಂದಿಗೆ ಡೇಟಿಂಗ್ ಮಾಡಿದರೆ ಅದು ಸರಿ ಎಂದು ಪರಿಗಣಿಸಲಾಗುತ್ತದೆ, ಆದರೆ ಮಹಿಳೆ ಈ ಕೆಲಸ ಮಾಡಿದರೆ ಆಕೆಯನ್ನು ನಿಂದಿಸಲಾಗುತ್ತದೆ ಎಂದು ಹೇಳಿದ್ದಾರೆ. 

38

ತನಗಿಂತ 12 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಜೊತೆ ಮಲೈಕಾ ಸಂಬಂಧ ಹೊಂದಿರುವ  ಮಲೈಕಾ ಅವರಿಗೂ ಆಗಾಗ ಇಂತಹ ಅಪಹಾಸ್ಯಗಳು ಕೇಳಿ ಬರುತ್ತವೆ. ಅವರು ಬ್ರೇಕಪ್ ಮತ್ತು ವಿಚ್ಛೇದನದ ಬಗ್ಗೆಯೂ ಮಾತನಾಡಿದರು. 

48

ನಾನು ಪ್ರತಿದಿನ ನನ್ನ ಮೇಲೆ ಕೆಲಸ ಮಾಡುತ್ತೇನೆ ಮತ್ತು ನನ್ನನ್ನು ಬಲಪಡಿಸುತ್ತೇನೆ. ನನ್ನನ್ನು  ನಾನು ಸಂತೋಷಪಡಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಅಷ್ಟೇ ಅಲ್ಲ, ಈ ಎಲ್ಲದರಲ್ಲೂ ನಾನು ನನ್ನ ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತೇನೆ ಮಲೈಕಾ .

58
Malaika Arora

ನಾನು ನನ್ನ ತಾಯಿಯ ಬೋಧನೆಗಳನ್ನು ಅನುಸರಿಸುವುದರಿಂದ ಇದನ್ನೆಲ್ಲ ಎದುರಿಸಲು ಸಾಧ್ಯವಾಯಿತು. ಅವರು ನನಗೆ ಶಕ್ತಿ ಮತ್ತು ತಾಳ್ಮೆಯನ್ನು ಹೊಂದಲು ಕಲಿಸಿದರು. ಅದಕ್ಕಾಗಿಯೇ ನಾನು ನನ್ನ ಸ್ವಂತ ನಿಯಮಗಳ ಮೇಲೆ ಜೀವನವನ್ನು ಆನಂದಿಸುತ್ತೇನೆ ಎಂದು ಮಲೈಕಾ ಅರೋರಾ ತಮ್ಮ ಟೀಕೆ ಅಥವಾ ಟ್ರೋಲ್‌ಗಳ ಬಗ್ಗೆ ಹೇಳಿದರು

68

ಸುಮಾರು 5 ವರ್ಷಗಳ ಡೇಟಿಂಗ್ ನಂತರ ಮಲೈಕಾ ಅರೋರಾ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ಮದುವೆಗೆ  ಮಲೈಕಾ ಅವರೇ ಪ್ರಪೋಸ್‌ ಮಾಡಿದ್ದರು. ಮದುವೆಯ ನಂತರ ಇಬ್ಬರಿಗೂ ಮಗ ಅರ್ಹಾನ್ ಜನಿಸಿದನು. ಆದರೆ ನಂತರ ಇಬ್ಬರ ನಡುವಿನ ಸಂಬಂಧ ಹದಗೆಡಲು ಪ್ರಾರಂಭಿಸಿತು.

78

ಮದುವೆಯಾದ 19 ವರ್ಷಗಳ ನಂತರ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಬೇರೆಯಾಗಲು ನಿರ್ಧರಿಸಿದರು. ಆದಾಗ್ಯೂ, ವಿಚ್ಛೇದನದ ನಂತರವೂ ಅವರ ಸಂಬಂಧವು ಸಾಮಾನ್ಯವಾಗಿದೆ. ಇಂದಿಗೂ ಇಬ್ಬರೂ ತಮ್ಮ ಮಗನ ಆರೈಕೆಯನ್ನು ಜೊತೆಯಾಗಿ ಮಾಡುತ್ತಿದ್ದಾರೆ.

88
Malaika Arora

ಅರ್ಬಾಜ್ ಖಾನ್‌ನಿಂದ ವಿಚ್ಛೇದನ ಪಡೆದ ನಂತರ, ಮಲೈಕಾ ಅವರ ಹೆಸರು ಅರ್ಜುನ್ ಕಪೂರ್‌ನೊಂದಿಗೆ  ಕೇಳಿಬರಲು ಪ್ರಾರಂಭಿಸಿತು. ಆದರೆ, ಇಬ್ಬರೂ ತಮ್ಮ ಸಂಬಂಧದ ವಿಷಯವನ್ನು ವರ್ಷಗಳ ಕಾಲ ಮುಚ್ಚಿಟ್ಟಿದ್ದರು. ನಂತರ  ಈಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಮತ್ತು  ಇಬ್ಬರೂ ಒಟ್ಟಿಗೆ ಹಾಲಿಡೇಗೆ ಸಹ ಹೋಗುತ್ತಾರೆ.

Read more Photos on
click me!

Recommended Stories