ಈ ಸಮಯದಲ್ಲಿ, ಅರಿಯಾನಾ ಬಿಳಿ ಬಣ್ಣದ ಚಡ್ಡಿ ಮತ್ತು ಜಾಕೆಟ್ ಧರಿಸಿದ್ದರೆ, ಮಹೀಮಾ ಕಪ್ಪು ಡ್ರೆಸ್‌ನಲ್ಲಿ ಕಾಣಿಸಿಕೊಂಡರು. .
ತಾಯಿ ಮತ್ತು ಮಗಳ ಅನೇಕ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇತ್ತೀಚೆಗೆ, ಸಂದರ್ಶನವೊಂದರಲ್ಲಿ, ಮಹೀಮಾ ತಮ್ಮಜೀವನ, ಡಿವೋರ್ಸ್, ಗರ್ಭಪಾತ ಮತ್ತು ಮಗಳ ಪಾಲನೆ ಕುರಿತು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದರು.
ಮದುವೆ ಮುರಿದ ಹಿಂದೆ ಅನೇಕ ಸಣ್ಣ ಕಾರಣಗಳಿವೆ. ನಾನು ನನ್ನ ಗಂಡನೊಂದಿಗೆ ಅನೇಕ ವಿಷಯಗಳ ಬಗ್ಗೆ ವಾದ ಮಾಡುತ್ತಿದ್ದೆ. ಈ ವಿಷಯಗಳ ಬಗ್ಗೆ ನಾನು ಮನೆಯಲ್ಲಿ ಯಾರಿಗೂ ಹೇಳಲಿಲ್ಲ. ಇದರ ನಂತರ ನನಗೆ ಎರಡು ಗರ್ಭಪಾತವೂ ಆಯಿತು ಎಂದು ಹೇಳಿಕೊಂಡ ಮಹೀಮಾ.
ಮಹೀಮಾ 2006 ರಲ್ಲಿ ಉದ್ಯಮಿ ಬಾಬಿ ಮುಖರ್ಜಿ ಅವರನ್ನು ವಿವಾಹವಾದರು.ಆದರೆ, ಇಬ್ಬರು 2013ರಲ್ಲಿ ಬೇರ್ಪಟ್ಟರು.
ಬಹುಶಃ ನಾನು ಒಳಗೆ ಸಂತೋಷವಾಗಿರಲಿಲ್ಲ ಅಥವಾ ನಾನು ಸಂತೋಷದ ಜಾಗದಲ್ಲಿ ಇರಲಿಲ್ಲ ಈ ಕಾರಣದಿಂದಾಗಿ ಸಂಬಂಧ ಮುರಿಯಿತು. ನನ್ನ ಕಷ್ಟದ ಸಮಯದಲ್ಲಿ ತಾಯಿ ಮತ್ತು ಸಹೋದರಿ ನನ್ನನ್ನು ಬೆಂಬಲಿಸಿದರು.ನಾನು ಹೊರಗೆ ಹೋಗುತ್ತಿದ್ದಾಗ, ಮಗಳನ್ನು ತಾಯಿಮನೆಯಲ್ಲಿ ಬಿಡುತ್ತಿದ್ದೆ. ಅವರು ನೋಡಿಕೊಳ್ಳುತ್ತಿದ್ದರು ಎಂದುಮಹೀಮಾ ಹೇಳಿದ್ದಾರೆ.
1999 ರಲ್ಲಿ, ದಿಲ್ ಕ್ಯಾ ಕರೇ ಚಿತ್ರದ ಶೂಟಿಂಗ್ ಸಮಯದಲ್ಲಿ, ಮಹೀಮಾ ದೊಡ್ಡ ಅಪಘಾತಕ್ಕೊಳಗಾಗಿದ್ದರು.ಕಾರು ಅಪಘಾತಕ್ಕೆ ಗುರಿಯಾದ ನಟಿಯ ಮುಖಕ್ಕೆ ಸಾಕಷ್ಟು ಗಾಯಗಳಾಗಿದ್ದು, ಹಲವಾರು ದಿನಗಳವರೆಗೆ ಸಿನಿಮಾದಿಂದ ದೂರವಿದ್ದರು. ಮಹೀಮಾ ಮತ್ತೆ ಸಿನಿಮಾಕ್ಕೆ ಎಂಟ್ರಿ ಕೊಟ್ಟು ಯಶಸ್ವಿಯೂಆಗಿದ್ದರು.
ನಾನು ಶೂಟಿಂಗ್‌ಗೆ ಹೋಗುತ್ತಿದ್ದೆ, ಈ ಸಮಯದಲ್ಲಿ ಹಾಲಿನ ಟ್ರಕ್ ಕಾರಿಗೆ ಡಿಕ್ಕಿ ಹೊಡೆದು,ಇಡೀ ಕಾರು ಪುಡಿಯಾಯಿತು. ದೇಹದ ಯಾವುದೇ ಮೂಳೆಗಳು ಮುರಿಯಲಿಲ್ಲ. ಆದರೆ ಇಡೀ ಮುಖಕ್ಕೆ ಹಾನಿಯಾಯಿತು ನಾನು ಸಾಯುತ್ತಿದ್ದೇನೆ ಎಂದು ನಾನು ಭಾವಿಸಿದೆ ಮತ್ತು ಆ ಸಮಯದಲ್ಲಿ ಸಹಾಯ ಮಾಡಲು ಯಾರೂ ಆಸ್ಪತ್ರೆಗೆ ಬರಲಿಲ್ಲ ಎಂದು ಮಹೀಮಾ ಹೇಳಿದ್ದರು.
ನಾನು ಆಸ್ಪತ್ರೆ ತಲುಪಿದ ಬಹಳ ಸಮಯದ ನಂತರ, ನನ್ನ ತಾಯಿ ಮತ್ತು ನಂತರ ಅಜಯ್ ದೇವಗನ್ ಬಂದರು. ನಾನು ಕನ್ನಡಿಯಲ್ಲಿ ನನ್ನ ಮುಖವನ್ನು ನೋಡಿದಾಗ ಭಯವಾಯಿತು. ಏಕೆಂದರೆ ತುಂಬಾ ಭಯಾನಕವಾಗಿತ್ತು.ಮುಖದ ಅಪರೇಷನ್ ಮಾಡಿ 67 ಗಾಜಿನ ತುಂಡುಗಳನ್ನು ಹೊರತೆಗೆದರು - ಮಹೀಮಾ ಚೌಧರಿ.
ಮಹಿಮಾ ಚೌಧರಿ ಸಹೋದರಿ ಆಕಾಂಕ್ಷಾಗೆ ರಯಾನ್ ಎಂಬ ಮಗನಿದ್ದು,ಸಹೋದರಿಯರಿಬ್ಬರೂ ತಮ್ಮ ಮಕ್ಕಳನ್ನು ಒಟ್ಟಿಗೆ ನೋಡಿಕೊಳ್ಳುತ್ತಿದ್ದಾರೆ. ರಿಯಾನ್ ಮತ್ತು ಅರಿಯಾನಾ ನಡುವೆ ಉತ್ತಮ ಬಾಂಡಿಗ್ ಇದೆ.
ಶಾರುಖ್ ಖಾನ್ ಜೊತೆ ಪರದೇಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ರಾತ್ರೋರಾತ್ರಿ ಸ್ಟಾರ್ ಆದರು.
ಅವರು ದಿಲ್ ಕ್ಯಾ ಕಾರೆ, ಧಡ್ಕನ್, ಕುರುಕ್ಷೇತ್ರ ಮತ್ತು ಬಾಗ್‌ಬನ್ ನಂತಹ ಅನೇಕ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದರು.
ಅವರು ಕೊನೆಯ ಬಾರಿಗೆ 201ರ ಬಂಗಾಳಿ ಚಲನಚಿತ್ರ ಡಾರ್ಕ್ ಚಾಕೊಲೇಟ್ ಸಿನಿಮಾದಲ್ಲಿ ಕಾಣಿಸಿಕೊಂಡರು.