ಮಹೇಶ್ ಬಾಬು ತಮ್ಮ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ರಾಜಕುಮಾರು, ಯುವರಾಜು, ಮುರಾರಿ ಸಿನಿಮಾಗಳಲ್ಲಿ ಒಂದು ರೀತಿ ಕಾಣಿಸಿಕೊಂಡ್ರೆ, ಒಕ್ಕಡು, ಅರ್ಜುನ್ ಸಿನಿಮಾಗಳಲ್ಲಿ ಇನ್ನೊಂದು ರೀತಿ ಕಾಣಿಸಿಕೊಳ್ಳುತ್ತಾರೆ. ಪೋಕಿರಿ ಸಿನಿಮಾ ನಂತರ ಮಹೇಶ್ ಬಾಬು ಅವರ ಸಿನಿ ಜೀವನವೇ ಬದಲಾಯಿತು. ಟಾಲಿವುಡ್ ನಲ್ಲಿ ಸ್ಟಾರ್ ಹೀರೋ ಆಗಿ, ಸೂಪರ್ ಸ್ಟಾರ್ ಆಗಿ ಮಹೇಶ್ ಬಾಬು ಅವರನ್ನು ಪೋಕಿರಿ ಸಿನಿಮಾ ಮೇಲಕ್ಕೆತ್ತಿತು. ಮಹೇಶ್ ಬಾಬು ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ, ಫ್ಲಾಪ್ ಸಿನಿಮಾಗಳೂ ಇವೆ. ಕೆಲವು ಸಿನಿಮಾಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಅವುಗಳಲ್ಲಿ ಒಂದನ್ನು ರಾಮ್ ಚರಣ್ ಸೂಪರ್ ಹಿಟ್ ಮಾಡಿದ್ರು.