ಚಿತ್ರೀಕರಣದ ಮೊದಲ ದಿನದಂದು ಮುರಳಿ ಮೋಹನ್ ಸಾವಿತ್ರಿ ಅವರನ್ನು ಅಷ್ಟೊಂದು ಅಂದಾಜು ಮಾಡಿರಲಿಲ್ಲ. ಶೂಟಿಂಗ್‌ನಲ್ಲಿ ಮೊದಲು ಮುರಳಿ ಮೋಹನ್ ಅವರೇ ಸಂಭಾಷಣೆ ಹೇಳಬೇಕು. ಅದಾದ ನಂತರ, ಸಾವಿತ್ರಿ ಮೆಟ್ಟಿಲುಗಳನ್ನು ಇಳಿದು ಬಂದು ಸಂಭಾಷಣೆ ಹೇಳಬೇಕಾಗುತ್ತದೆ. ಮೊದಲು ಪೂರ್ವಾಭ್ಯಾಸ ನಡೆಯಿತು. ಅಭ್ಯಾಸದ ಸಮಯದಲ್ಲಿ, ಸಾವಿತ್ರಿ ಬೇಗನೆ ಸಂಭಾಷಣೆ ಹೇಳಿ ಹೊರಟು ಹೋದರು. ಮುರಳಿ ಮೋಹನ್ ಆ ದೃಶ್ಯದಲ್ಲೂ ಸಂಭಾಷಣೆಗಳನ್ನು ಬೇಗ ಹೇಳ್ತಾರೆ ಅಂತ ಅಂದುಕೊಂಡಿದ್ದರು. ನಿರ್ದೇಶಕರು ' ಆಕ್ಷನ್' ಹೇಳಿದ ತಕ್ಷಣ, ಮುರಳಿ ಮೋಹನ್ ಸಂಭಾಷಣೆ ಹೇಳಿದರು. ಅದಾದ ನಂತರ ಸಾವಿತ್ರಿ ಸಂಭಾಷಣೆ ಹೇಳಬೇಕು. ಆದರೆ ಸಾವಿತ್ರಿ ಏನನ್ನೂ ಹೇಳುವುದಿಲ್ಲ, ನೋಡುತ್ತಲೇ ಇದ್ದರು.