ಲೇಡಿ ಸೂಪರ್ ಸ್ಟಾರ್‌ಗೂ ಇದೆಯಂತೆ ದೆವ್ವದ ಭಯ, ಹಾಗಾಗಿ ರಾತ್ರಿ ಈ ರೀತಿ ಮಲಗ್ತಾರಂತೆ ನಯನತಾರ!

First Published | Aug 8, 2024, 5:31 PM IST

ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟಿ ನಯನತಾರ ತಮ್ಮ ನಟನೆಯಿಂದ ಹೀರೋಗಳಿಗೂ ಸೆಡ್ಡು ಹೊಡಿತಾರೆ. ಆದರೆ ಇವರಿಗೂ ಇದೆಯಂತೆ ದೆವ್ವದ ಭಯ. 
 

ಲೇಡಿ ಸೂಪರ್ ಸ್ಟಾರ್ ಎಂದಾಗ ನೆನಪಾಗೋದು ನಟಿ ನಯನತಾರ (Nayanthara). ತಮ್ಮ ಬಾಸಿ ಲುಕ್, ಸಿನಿಮಾದ ಆ್ಯಕ್ಷನ್ ಸೀನ್ ಮೂಲಕ ಹೀರೋಗಳಿಗೆ ಸೆಡ್ಡು ಹೊಡೆದು ನಿಲ್ಲುವಂತಹ ಬ್ಯೂಟಿ ನಯನಾತಾರದ್ದು. ಹಾಗಾಗಿಯೇ ಇವರನ್ನ ದಕ್ಷಿಣದ ಲೇಡಿ ಸೂಪರ್ ಸ್ಟಾರ್ (South Indian Lady Super Star). 

ಮಲಯಾಲಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ಬೆಡಗಿ ನಂತರ ತಮಿಳು, ತೆಲುಗು, ಹಿಂದಿ ಮತ್ತು ಒಂದು ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಯಶ್ ಅಭಿನಯದ ಹೊಸ ಚಿತ್ರ ಟಾಕ್ಸಿಕ್‌ನಲ್ಲೂ ನಯನತಾರ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. 
 

Tap to resize

ಸಿನಿಮಾಗಳಲ್ಲಿ ದೆವ್ವ, ಭೂತ, ರೌಡಿಗಳು ಏನೇ ಬಂದ್ರೂ ಎದುರಿಸುವ ಈ ಲೇಡಿ ಸೂಪರ್ ಸ್ಟಾರ್‌ಗೆ (lady superstar) ನಿಜ ಜೀವನದಲ್ಲಿ ದೆವ್ವಗಳ ಭಯ ಇದೆಯಂತೆ. ಹಾಗಂತ ನಟಿ ಒಂದು ಸಂದರ್ಶನವೊಂದರಲ್ಲಿ ತಿಳಿಸಿದ್ದು, ಆ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. 

ಸಂದರ್ಶನವೊಂದರಲ್ಲಿ ನಿರೂಪಕಿ, ದೆವ್ವ ಬಾರದಂತೆ ಚಪ್ಪಲ್ ಎಲ್ಲಾ ಇಟ್ಕೊಂಡು ಮಲಗ್ತಾರಂತೆ, ಹಾಗೇ ನಿಮಗೆ ಏನಾದ್ರೂ ದೆವ್ವದ ಬಗ್ಗೆ ನಂಬಿಕೆ ಇದೆಯಾ? ನಮಗೆ ಗೊತ್ತಿಲ್ಲದ ವಿಷ್ಯ ಏನಾದ್ರೂ ಇದೆಯಾ ಅಂತ ಕೇಳಿದ್ದಾರೆ, ಅದಕ್ಕೆ ನಯನತಾರಾ, ನಂಗೆ ತುಂಬಾ ಭಯ ಇಲ್ಲ, ಸ್ವಲ್ಪ ಭಯ ಇದೆ ಎನ್ನುತ್ತಾ ತಮ್ಮ ಗುಟ್ಟನ್ನು ಬಿಟ್ಟು ಕೊಟ್ಟಿದ್ದಾರೆ. 

ನಯನತಾರಾಗೆ ಬಾಲ್ಯದಲ್ಲಿ ಯಾರೋ ನೇರವಾಗಿ ಮಲಗಬಾರದು ಎಂದು ಹೇಳಿದ್ದ ನೆನಪಂತೆ, ಅದು ನಿಜಾನೋ ಸುಳ್ಳೋ ಗೊತ್ತಿಲ್ಲ, ನಂಗೆ ಭಯ ಕೂಡ ಇಲ್ಲ, ಆದ್ರೂ ನಾನು ಮೊದಲಿನಿಂದಲೂ ರಾತ್ರಿ ಮಲಗೋವಾಗ ನೇರವಾಗಿ ಮಲಗೋದಿಲ್ಲ, ನೇರವಾಗಿ ಮಲಗಿದ್ರೆ ದೆವ್ವಕ್ಕೆ (ghost) ನಮ್ಮ ಮೈ ಮೇಲೆ ಬರೋದು ಸುಲಭ ಆಗುತ್ತಂತೆ ಎಂದಿದ್ದಾರೆ. 
 

ಹಾಗಾಗಿ ಲೇಡಿ ಸೂಪರ್ ಸ್ಟಾರ್, ಒಂದು ಸೈಡ್ ಗೆ ತಿರುಗಿಯೇ ಯಾವಾಗ್ಲೂ ಮಲಗೋದಂತೆ, ಅದರಲ್ಲೂ ಕೈಯನ್ನು ಮುಖಕ್ಕೆ ಅಡ್ಡ ಹಿಡಿದು ಮಲಗ್ತಾರಂತೆ. ಅಷ್ಟೇ ಅಲ್ಲ ಇವರು ರಾತ್ರಿ ಮಲಗೋವಾಗ ಲೈಟ್ ಆಫ್ (light off) ಮಾಡಿ ಕೂಡ ಮಲಗೋದಿಲ್ವಂತೆ, ಅದಕ್ಕೂ ದೆವ್ವದ ಭಯ ಅಂತೆ. 
 

ಲೇಡಿ ಸೂಪರ್ ಸ್ಟಾರ್’ಗೂ ಭಯವಾಗುತ್ತೆ ಅನ್ನೋದನ್ನ ಕೇಳಿ ಅಭಿಮಾನಿಗಳೂ ಶಾಕ್ ಆಗಿದ್ದಾರೆ. ಜೊತೆಗೆ ಹೌದು ನಿಜವಾಗಿಯೂ ನೇರವಾಗಿ ಮಲಗಬಾರದು, ಅದ್ರಿಂದ ನೆಗೆಟೀವ್ ಎನರ್ಜಿ (negative energy) ಬೇಗನೆ ನಮ್ಮಲ್ಲಿ ಸೇರಿಕೊಳ್ಳುತ್ತೆ ಎಂದು ನಯನ್ ಕಥೆಗೆ ತಮ್ಮ ಕಥೆಯನ್ನೂ ಸೇರಿಸಿ ಸಲಹೆ ನೀಡ್ತಿದ್ದಾರೆ ಜನ. 
 

Latest Videos

click me!