ಇಬ್ಬರ ಪ್ರೀತಿ, ವೈವಾಹಿಕ ಜೀವನ ಚೆನ್ನಾಗಿಯೇ ಇತ್ತು. ಆದರೆ ಯಾವಾಗ ಅಮಿತಾಬ್ ಜೊತೆ ರೇಖಾ ಹೆಸರು ಕೇಳಿ ಬಂತು, ಇಬ್ಬರ ವೈವಾಹಿಕ ಜೀವನದಲ್ಲಿ ಏರಿಳಿತಗಳು ಶುರುವಾದವು. ಆದರೆ ಎಲ್ಲವನ್ನೂ ಮೆಟ್ಟಿ ನಿಂತು, ಜೀವನದಲ್ಲಿ ಬಂದ ಎಲ್ಲಾ ಸಮಸ್ಯೆಗಳನ್ನು ಜೊತೆಯಾಗಿ ಎದುರಿಸಿದ ಈ ಜೋಡಿ ಕಳೆದ 50 ವರ್ಷಗಳಿಂದ ಸುಂದರವಾದ ಸಂಸಾರ ನಡೆಸಿಕೊಂಡು ಬರುವ ಮೂಲಕ, ಯಶಸ್ವಿ ದಾಂಪತ್ಯ ಜೀವನಕ್ಕೆ(successfull married life) ಪ್ರೇರಣೆಯಾಗಿದ್ದಾರೆ.