ಹೆಚ್ಚು ಸಂಭಾವನೆ ಪಡೆಯುವ ದೇವರಕೊಂಡ! ಲೈಗರ್‌ಗೆ ನಟನ ಫೀಸ್‌ ಎಷ್ಟು?

First Published | Aug 25, 2022, 6:33 PM IST

ತೆಲಗು ನಟ ವಿಜಯ್ ದೇವರಕೊಂಡ (Vijay Deverakonda) ಉದ್ಯಮದ ಅದ್ಭುತ ಮತ್ತು ಉದಯೋನ್ಮುಖ ತಾರೆ. ವಿಜಯ್ ದೇವರಕೊಂಡ ಈ ದಿನಗಳಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ. ಹೊಸ ಸಿನಿಮಾ ಲೈಗರ್‌  (Liger) ಅವರ ಮೊದಲ ಪ್ಯಾನ್-ಇಂಡಿಯಾ ಸಿನಿಮಾ. ಈ ಸಿನಿಮಾದ ಮೂಲಕ ನಟ ದಕ್ಷಿಣದ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಯಾಗಿದ್ದಾರೆ. ಅಷ್ಟಕ್ಕೂ ವಿಜಯ್‌ ಫೀಸ್‌ ಎಷ್ಟು?

ವಿಜಯ್ ದೇವರಕೊಂಡ ಪ್ಯಾನ್-ಇಂಡಿಯಾ ಚಿತ್ರ ಲೈಗರ್‌ಗಾಗಿ ಈ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಲೈಗರ್‌ಗಾಗಿ ಅವರು ಪಡೆದ ಸಂಭಾವನೆಯ ಮೂಲಕ , ನಟ ತೆಲುಗು ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಕ್ತಿಯಾಗಿದ್ದಾರೆ.

ವಿಜಯ್ ದೇವರಕೊಂಡ ಈಗ ಟಾಪ್‌ ನಟರ ಪಟ್ಟಿಲ್ಲಿ ಸ್ಥಾನ ಪಡೆದಿದ್ದಾರೆ ಮತ್ತು ಸ್ವಯಂ ನಿರ್ಮಿತ ಪ್ರಸಿದ್ಧರಾಗಿದ್ದಾರೆ. ಈ ಮಟ್ಟವನ್ನು ತಲುಪುವ ಮೊದಲು ಅವರನ್ನು ಹಲವು ಚಿತ್ರಗಳಿಗೆ ರಿಜೆಕ್ಟ್ ಮಾಡಲಾಗಿತ್ತು. 

Tap to resize

ಅರ್ಜುನ್ ರೆಡ್ಡಿ ಚಿತ್ರದ ಮೂಲಕ ದಕ್ಷಿಣದಲ್ಲಿ ಯಶಸ್ಸನ್ನು ಸೃಷ್ಟಿಸಿದ ವಿಜಯ್, ತಮ್ಮ ಪ್ಯಾನ್-ಇಂಡಿಯಾ ಲೈಗರ್‌ ಸಿನಿಮಾಕ್ಕಾಗಿ ನಾಲ್ಕು ಪಟ್ಟು ತಮ್ಮ ಬೆಲೆ ಹೆಚ್ಚಿಸಿದ್ದಾರೆ.

ಅವರ ಇತ್ತೀಚಿನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ನೀಡಿವೆ. ಅವರ ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ ಮತ್ತು   ಯಾವುದೇ ಹಣ ಗಳಿಸಲಿಲ್ಲ. ಆದರೂ ಅವರ ಸಂಭಾವನೆಯ ಅಂಕಿ ಅಂಶಗಳು ಏರುತ್ತಿವೆ.  

ನಟ ಲಿಗರ್ ಸಂಭಾವನೆಯೊಂದಿಗೆ ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಯಾಗಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶನದ ಮತ್ತು ಮಾಜಿ ದಕ್ಷಿಣ ನಟಿ ಚಾರ್ಮಿ ಕೌರ್ ನಿರ್ಮಿಸಿದ ಚಿತ್ರಕ್ಕಾಗಿ ಸ್ಟಾರ್ 20 ರಿಂದ 25 ಕೋಟಿ ರೂ ಸಂಭಾವನೆ ಪಡೆದಿದ್ದಾರೆ.

ಇತ್ತೀಚಿನ ಚಲನಚಿತ್ರಗಳಾದ ರಾಹುಲ್ ಸಂಕ್ರಿಯಾನ್ ಅವರ ಟ್ಯಾಕ್ಸಿವಾಲಾ, ಕ್ರಾಂತಿ ಮಾಧವ್ ಅವರ ವರ್ಲ್ಡ್‌ ಫೇಮಸ್‌ ಲವರ್‌ ಮತ್ತು ಭರತ್ ಕಮ್ಮನ ಡಿಯರ್‌ ಕಾಮ್ರೇಡ್‌ ಉತ್ತಮ ಗಳಿಕೆ ಮಾಡಿಲ್ಲ. ಈಗ ಲೈಗರ್‌ ಯಶಸ್ಸು ವಿಜಯ್ ಅವರ ವೃತ್ತಿ ಜೀವನದಲ್ಲಿ ಅತ್ಯಂತ ಮಹತ್ವದ  ಪ್ರಭಾವ ಬೀರಲಿದೆ.

ಲೈಗರ್ ಸಿನಿಮಾಕ್ಕೂ ಮೊದಲು, ನಟನ ಪ್ರತಿ ಚಿತ್ರಕ್ಕೆ 6-7 ಕೋಟಿ ಸಂಭಾವನೆ ಇರುತ್ತಿತ್ತು. ಆದರೆ ಈಗ  ಲೈಗರ್‌ ನಟನ ಅತ್ಯಂತ ದುಬಾರಿ ಚಿತ್ರ. ಇಂದು ಬಿಡುಗಡೆಯಾದ ಈ ಚಿತ್ರವು  ಜನರನ್ನು ಮೆಚ್ಚುವಲ್ಲಿ ವಿಫಲವಾಗಿರಬಹುದು. ಆದರೆ, ಇದು ವಿಜಯ್ ಅವರ ವೃತ್ತಿಜೀವನದ ಮೇಲೆ ಹೇಗೆ ಪರಿಣಾಮ ಬೀರುವ ನಿರೀಕ್ಷೆ ಇದೆ.

ವಿಜಯ್ ದೇವರಕೊಂಡ, ಅನನ್ಯಾ ಅವರ ಚಿತ್ರ ಈಗ ತಮಿಳು ರಾಕರ್ಸ್‌ನಲ್ಲಿ ಲೀಕ್‌ ಆಗಿದೆ. ಆದರೆ, ಸಿನಿಮಾ ಇಂದು  ರಿಲೀಸ್ ಆಗಿದ್ದು, ಸಕ್ಸಸ್ ಅಥವಾ ಡಿಸಾಸ್ಟರ್ ಎಂದು ನಿರ್ಧಾರವಾಗಲು ವಾರಾಂತ್ಯ ಬೇಕು. ವಿಜಯ್ ಚಿತ್ರಕ್ಕಾಗಿ ತಮ್ಮ ಬೆವರು ಮತ್ತು ರಕ್ತ ಸುರಿಸಿದ್ದಾರೆ  ಚಿತ್ರದಲ್ಲಿ ರಮ್ಯಾ ಕೃಷ್ಣನ್ ಮತ್ತು ಅನನ್ಯಾ ಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ

Latest Videos

click me!