ಸಲ್ಮಾನ್ ಖಾನ್ ಇರೋ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಒಳಗೊಂದು ಸುತ್ತು.

Published : Apr 15, 2024, 12:28 PM IST

ಸಲ್ಮಾನ್ ಖಾನ್ ನಿವಾಸ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಬಳಿ ಗುಂಡಿನ ಸದ್ದು ಕೇಳಿದಾಗಿನಿಂದ ಮನೆಯ ಹೆಸರು ಕೇಳಿ ಬರುತ್ತಲೇ ಇದೆ. ಬಾಲಿವುಡ್‌ ಸೂಪರ್‌ಸ್ಟಾರ್‌ನ ಈ ನಿವಾಸದ ಒಳಗೆ ಹೇಗಿದೆ ನೋಡಿ ಬರೋಣ..

PREV
111
ಸಲ್ಮಾನ್ ಖಾನ್ ಇರೋ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಒಳಗೊಂದು ಸುತ್ತು.
Salman khan house

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಚಲನಚಿತ್ರಗಳು ಮತ್ತು ಜಾಹೀರಾತುಗಳಿಂದ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಾರೆ ಮತ್ತು ಐಷಾರಾಮಿ ಜೀವನವನ್ನು ಸಹ ನಡೆಸುತ್ತಾರೆ. 

211

ಸಲ್ಮಾನ್ ಖಾನ್ ಮತ್ತು ಅವರ ಕುಟುಂಬ ಮುಂಬೈನ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಹಲವಾರು ಮನೆಗಳಿದ್ದಾವಾದರೂ ಇದರಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ.

311

ಗ್ಯಾಲಕ್ಸಿ ಅಪಾರ್ಟ್‌ಮೆಂಟ್ 8 ಅಂತಸ್ತಿನ ಕಟ್ಟಡವಾಗಿದ್ದು, ಇದು ಖಾನ್ ಕುಟುಂಬದಿಂದಾಗಿಯೇ ಪ್ರಸಿದ್ಧವಾಗಿದೆ. ಇದರ ಮೊದಲೆರಡು ಮಹಡಿಗಳಲ್ಲಿ ಸಲ್ಮಾನ್ ಕುಟುಂಬ ವಾಸವಿದೆ.

411

ಮೊದಲ ಮಹಡಿಯಲ್ಲಿ ಸಲ್ಮಾನ್ ತಂದೆ ತಾಯಿ ವಾಸವಾಗಿದ್ದರೆ, ನೆಲ ಮಹಡಿಯ  L ಆಕಾರದ ಫ್ಲಾಟ್‌ನಲ್ಲಿ ಸಲ್ಮಾನ್ ಖಾನ್ ವಾಸಿಸುತ್ತಿದ್ದಾರೆ. ಇಲ್ಲಿ ಅವರೊಂದಿಗೆ ಮೋಗ್ಲಿ ಮತ್ತು ಸೇಂಟ್ ನಾಯಿಗಳಿರುತ್ತವೆ.

511

ಸಲ್ಮಾನ್ ಖಾನ್ ಅವರ 8 ಮಹಡಿಗಳ ಈ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಸುಮಾರು 100 ಕೋಟಿ ರೂ. ಮೌಲ್ಯದ್ದಾಗಿದೆ ಎಂದು Housing.com ವರದಿ ಮಾಡಿದೆ.

611

ಸಲ್ಮಾನ್ ಖಾನ್ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್ ಇತ್ಯಾದಿ ವ್ಯವಸ್ಥೆ ಇದೆ. ಆದರೆ, ಅಚ್ಚರಿಯ ವಿಷಯವೆಂದರೆ ಸಲ್ಲು ಇರುವ ಗ್ರೌಂಡ್ ಫ್ಲೋರ್ ಕೇವಲ 1 ಬಿಎಚ್‌ಕೆಯದಾಗಿದೆ.

711

ಊಟ-ವಾಸ ಸ್ಥಳವು ಎಲ್-ಆಕಾರದಲ್ಲಿ ತೆರೆದ ಅಡುಗೆಮನೆಯನ್ನು ಹೊಂದಿದೆ. ಇದನ್ನು ನಾಲ್ಕು ಅಡಿ ಗಾಜಿನ ಗೋಡೆಯೊಂದಿಗೆ ಬೇರ್ಪಟ್ಟಿದೆ. ಇದರ ಹೊರತಾಗಿ ನಟನ ಮಲಗುವ ಕೋಣೆ 170-190 ಚದರ ಅಡಿ ಇದ್ದು ಸ್ನಾನಗೃಹ ಹೊಂದಿದೆ.

811

ಒಂದೇ ಬೆಡ್‌ರೂಂನ ಮನೆಯಾದರೂ ನಟ ಈ ಮನೆಯ ಬಗ್ಗೆ ಹೆಚ್ಚು ಭಾವನಾತ್ಮಕ ಸೆಳೆತ ಹೊಂದಿದ್ದಾರೆ. ಅವರಿಲ್ಲ ತಮ್ಮ ಸೋದರರ ಜೊತೆ ಬಾಲ್ಯ ಕಳೆದಿದ್ದಾರೆ. 

911

ಈ ಮನೆಯು ಹಳೆಯದಾದರೂ, ಖಾನ್ ಕುಟುಂಬ ವಾಸವಿರೋದರಿಂದ ಇದರ ಬೆಲೆ ಗಗನಕ್ಕೇರಿದೆ. ಮನೆಯು ಶಾರೂಖ್ ಖಾನ್ ಮನ್ನತ್‌ಗೆ ಹತ್ತಿರದಲ್ಲಿದೆ. 

1011

ಈ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಹೊರತಾಗಿ ನಟ, ಕಾರ್ಟರ್ ರಸ್ತೆಯಲ್ಲೊಂದು ಅಪಾರ್ಟ್‌ಮೆಂಟ್, ವರ್ಲಿಯಲ್ಲಿ ಸ್ಟರ್ಲಿಂಗ್ ಸೀ ಫೇಸ್‌ನಲ್ಲೊಂದು ಮನೆ, ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿರುವ ಭವ್ಯವಾದ ಟ್ರಿಪ್ಲೆಕ್ಸ್ ಫ್ಲಾಟ್ ಮತ್ತು ದುಬೈನ ಬುರ್ಜ್ ಪೆಸಿಫಿಕ್ ಟವರ್‌ನಲ್ಲಿರುವ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. 

1111

ಈ ಎಲ್ಲದರ ಹೊರತಾಗಿ, ತಣ್ಣಗೆ ಪರಿಸರದ ಮಧ್ಯೆ ಏಕಾಂಗಿಯಾಗಿ ಸಮಯ ಕಳೆಯಲು ನಟ ಭವ್ಯವಾದ 'ಅರ್ಪಿತಾ ಫಾರ್ಮ್‌ಹೌಸ್' ಹೊಂದಿದ್ದಾರೆ. 

Read more Photos on
click me!

Recommended Stories