ಸಲ್ಮಾನ್ ಖಾನ್‌ಗೆ ಶೂಟಿಂಗ್ ವೇಳೆ ತನ್ನಿಂದ ದೂರ ಇರುವಂತೆ ಹೇಳಿದ್ದ ಈ ನಟಿ ಯಾರಂದ್ರೆ..

Published : Apr 14, 2024, 05:39 PM IST

ಬಾಲಿವುಡ್‌ನ ಈ ನಟಿಯು ಸಲ್ಮಾನ್ ಖಾನ್‌ಗೆ ತನ್ನಿಂದ ದೂರ ಇರುವಂತೆ ಹೇಳಿದ್ರು. ಈಕೆ ಯಾರು, ಏಕೆ ಹಾಗೆ ಹೇಳಿದ್ರು?

PREV
19
ಸಲ್ಮಾನ್ ಖಾನ್‌ಗೆ ಶೂಟಿಂಗ್ ವೇಳೆ ತನ್ನಿಂದ ದೂರ ಇರುವಂತೆ ಹೇಳಿದ್ದ ಈ ನಟಿ ಯಾರಂದ್ರೆ..

ಸಲ್ಮಾನ್ ಖಾನ್ ಜೊತೆ ಕತ್ರೀನಾ ಕೈಫ್, ಐಶ್ವರ್ಯಾ ರೈ ಸೇರಿದಂತೆ ಹಲವಾರು ಟಾಪ್ ನಟಿಯರ ಸಂಬಂಧಗಳು ಕೇಳಿ ಬಂದಿವೆ. ಅವುಗಳಲ್ಲೆಲ್ಲ ಗೆಳತಿಯರಿಗೆ ದೈಹಿಕ ಹಲ್ಲೆ ನಡೆಸಿ ಸಲ್ಲೂ ಬ್ಯಾಡ್ ಬಾಯ್ ಇಮೇಜ್ ಪಡೆದಿದ್ದರು. ಆದರೂ ಬಾಲಿವುಡ್‌‌ನ ಈ ಖ್ಯಾತ ನಟನಿಗೆ ದೂರವಿರೋಕೆ ಹೇಳೋ ಧೈರ್ಯ ಯಾರಾದರೂ ಮಾಡಬಹುದೇ?

29

ಒಬ್ಬ ನಟಿ ಆ ಧೈರ್ಯ ತೋರಿದ್ದರು. ಅವರೇ ಸಲ್ಮಾನ್ ಖಾನ್‌ನ ಜನಪ್ರಿಯ ಚಿತ್ರ 'ಮೈನೆ ಪ್ಯಾರ್ ಕಿಯಾ'ದ ನಾಯಕಿ ಭಾಗ್ಯಶ್ರೀ. ಹೌದು, ಹಿಂದಿನ ಒಂದು ಸಂದರ್ಶನದಲ್ಲಿ ನಟಿಯೇ ಈ ವಿಷಯ ಬಹಿರಂಗಪಡಿಸಿದ್ದರು.

39

ಮೈನೆ ಪ್ಯಾರ್ ಕಿಯಾ ಇಂದಿಗೂ ಭಾರತೀಯ ದೂರದರ್ಶನದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಚಲನಚಿತ್ರಗಳಲ್ಲಿ ಒಂದಾಗಿದೆ. ಇದು ಭಾಗ್ಯಶ್ರೀ ಅವರ ಮೊದಲ ಚಿತ್ರ ಮತ್ತು ಅವರು ಆ ವರ್ಷದ ಅತ್ಯುತ್ತಮ ಚೊಚ್ಚಲ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು.

49

ಚಿತ್ರದ ಶೂಟಿಂಗ್ ಸಮಯದಲ್ಲಿ ನಟಿಯು ಸಂಬಂಧದ ವದಂತಿಗಳಿಗೆ ತುಂಬಾ ಹೆದರುತ್ತಿದ್ದರಂತೆ. ಅಫೇರ್ ವದಂತಿಗಳನ್ನು ತಪ್ಪಿಸಲು ಸಲ್ಮಾನ್ ಖಾನ್ ಅವರಿಗೆ ದೂರವಿರಲು ಹೇಳಿದ್ದರಂತೆ ನಟಿ.
 

59

ರಾಜ ಮನೆತನದಿಂದ ಬಂದ ಭಾಗ್ಯಶ್ರೀ ಆ ಸಮಯದಲ್ಲಿ ಮನೆಯವರ ವಿರೋಧದ ಹೊರತಾಗಿ ಹಿಮಾಲಯ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ಈ ವಿಷಯ ಸಲ್ಮಾನ್‌ಗೆ ತಿಳಿದಿತ್ತು.
 

69

ಹಾಗಾಗಿ, ನಟಿಯನ್ನು ಚುಡಾಯಿಸಲು ಸಲ್ಲು, ಆಕೆ ಹೋದಲ್ಲೆಲ್ಲ ಹೋಗಿ ಚಿತ್ರದ ದಿಲ್ ದಿವಾನಾ ಹಾಡು ಹೇಳುತ್ತಿದ್ದರಂತೆ. ಹೋದಲ್ಲಿ ಬಂದಲ್ಲಿ ಕಿವಿಯಲ್ಲಿ ಈ ಹಾಡು ಗುನುಗಿದ್ದಾರೆ ನಟ.

79

ಕಡೆಗೆ ಅರ್ಧ ದಿನ ಸತಾಯಿಸಿದ ಮೇಲೆ ತನಗೆ ನಟಿ ಹಿಮಾಲಯ ಅವರ ಜೊತೆ ಪ್ರೀತಿಯಲ್ಲಿರೋದು ಗೊತ್ತು ಎಂದರು. ಆದರೆ, ಸಲ್ಮಾನ್ ನಡೆ ಅಪಾರ್ಥಕ್ಕೆ ಕಾರಣವಾಗಬಹುದು ಎಂಬ ಭಯ ನಟಿಗೆ ಹುಟ್ಟಿದ್ದರಿಂದ ದೂರವಿರುವಂತೆ ಹೇಳಿದ್ದರು.

89

ಆ ನಂತರದಲ್ಲಿ ಹಿಮಾಲಯ ಅವರನ್ನು ಶೂಟಿಂಗ್ ಸೆಟ್‌ಗೆ ಕರೆತರಲು ನಟನೇ ಸೂಚಿಸಿದ್ದರಂತೆ. ಅದರಂತೆ ನಟಿ ತನ್ನ ಗೆಳೆಯನನ್ನು ಸಲ್ಮಾನ್‌ಗೆ ಪರಿಚಯಿಸಿದ್ದರು. 

99

ತನ್ನ ಹೆಂಡತಿ ತೆರೆಯ ಮೇಲೆ ಇನ್ನೊಬ್ಬ ಪುರುಷನೊಂದಿಗೆ ರೊಮ್ಯಾನ್ಸ್ ಮಾಡುವುದನ್ನು ಪತಿ ಹಿಮಾಲಯ ಇಷ್ಟ ಪಡುವುದಿಲ್ಲ ಎಂದು ಕೂಡಾ ಭಾಗ್ಯಶ್ರೀ ತಿಳಿಸಿದ್ದಾರೆ. 

Read more Photos on
click me!

Recommended Stories