ಅಪ್ಪನಿಗೂ ಗೊತ್ತಿಲ್ಲದೇ, ಚಾಕಲೇಟ್ ಕೊಡಿಸಿ ಸಿನಿಮಾದಲ್ಲಿ ಆಕ್ಟಿಂಗ್ ಮಾಡಿಸಿದ್ದರು; ಸತ್ಯ ಬಿಚ್ಚಿಟ್ಟ ಬೇಬಿ ಇಂದಿರಾ!

First Published | Apr 13, 2024, 8:00 PM IST

ಬೆಂಗಳೂರು (ಏ.13): ಕನ್ನಡ ಚಿತ್ರರಂಗದ 1980ರ ದಶಕದಲ್ಲಿ ಸ್ಟಾರ್ ಬಾಲನಟಿಯಾಗಿ ಮೆರೆದ ಬೇಬಿ ಇಂದಿರಾ ಅವರು ಸಿನಿಮಾಗೆ ಬಂದ ಹಾದಿಯನ್ನು ಬಿಚ್ಚಿಟ್ಟಿದ್ದಾರೆ. ಕನ್ನಡದ ಸಿಂಹದ ಮರಿ ಸೈನ್ಯ, ಚಿನ್ನಾ ನಿನ್ನ ಮುದ್ದಾಡುವೆ, ಪುಟಾಣಿ ಏಜೆಂಟ್‌ 123, ಮಕ್ಕಳ ಭಾಗ್ಯ, ರಾಮ ಲಕ್ಷ್ಮಣ ಸಿನಿಮಾದಲ್ಲಿ ಕಾಣಿಸಿಕೊಂಡು ಮರೆಯಾಗಿದ್ದ ನಟಿ 35 ವರ್ಷದ ಬಳಿಕ ಮತ್ತೆ ನಟನಾ ಕ್ಷೇತ್ರಕ್ಕೆ ಬರುವುದಾಗಿ ಸುಳಿವು ಕೊಟ್ಟಿದ್ದಾರೆ.

ಕನ್ನಡದ ಸಿನಿಮಾಗಳಾದ ಸಿಂಹದ ಮರಿ ಸೈನ್ಯ, ಚಿನ್ನಾ ನಿನ್ನ ಮುದ್ದಾಡುವೆ, ಪ್ರಚಂಡ ಪುಟಾಣಿಗಳು, ಪುಟಾಣಿ ಏಜೆಂಟ್‌ 123, ಮಕ್ಕಳ ಭಾಗ್ಯ, ರಾಮ ಲಕ್ಷ್ಮಣ, ಆಶಾ ಸೇರಿ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂನ 100ಕ್ಕೂ ಅಧಿಕ ಸಿನಿಮಾಗಳಲ್ಲೂ ಮಿಂಚಿದ್ದರು. 1980ರಲ್ಲಿ ಸಿನಿಮಾ ಕ್ಷೇತ್ರಕ್ಕೆ ಚೈಲ್ಡ್ ಆರ್ಟಿಸ್ಟ್‌ ಅವರು ಇಲ್ಲದ ಕಾಲದಲ್ಲಿ ನನಗೆ ಸಿನಿಮಾ ಕ್ಷೇತ್ರಕ್ಕೆ ಕಳಿಸಬೇಕು ಎಂದು ನಮ್ಮಪ್ಪನಿಗೆ ಕೇಳಿದ್ದರು.
 

ನಮ್ಮಪ್ಪ ಇದಕ್ಕೆ ಒಪ್ಪಿಕೊಳ್ಳದೇ ನನ್ನ ಮಗಳಿಗೆ ಸಿನಿಮಾ ಕ್ಷೇತ್ರವೇ ಬೇಡವೆಂದು ನಿರ್ಧರಿಸಿ, ನಾನು ನನ್ನ ಮಗಳನ್ನು ಡಾಕ್ಟರ್ ಆಗಿ ಮಾಡುತ್ತೇನೆ. ಆಕೆಗೆ, ನಟನೆಯ ಕ್ಷೇತ್ರವೇ ಬೇಡ ಎಂದು ಹೇಳಿದರು. ಜೊತೆಗೆ, ಭರತ ನಾಟ್ಯ ಡ್ಯಾನ್ಸ್‌ ಕಲಿಯುವುದಕ್ಕೂ ಬಿಡಲಿಲ್ಲ.
 

Tap to resize

ಒಂದು ದಿನ ಅಪ್ಪ ಕೆಲಸಕ್ಕೆ ಹೋಗಿ ಮನೆಗೆ ಬಂದರೆ ನಾನು ಇರಲಿಲ್ಲ. ಆಗ ತಾಯಿಯನ್ನು ಕೇಳಿದಾಗ ಮನೆಯಲ್ಲಿ ಮಗು ಇಲ್ಲ, ನೀವು ಹೇಳಿದ್ದೀರೆಂದು ನಿಮ್ಮ ಫ್ರೆಂಡ್‌ ಬಂದು ಮಗಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಅಮ್ಮ ಹೇಳಿದರು. ಆಗ ನನ್ನಪ್ಪ ಅಮ್ಮನಿಗೆ ಹೊಡೆದರು.
 

ಆಗ ಅಪ್ಪನಿಗೆ ತುಂಬಾ ಟೆನ್ಷನ್ ಆಗಿತ್ತು. 3 ವರ್ಷದ ಮಗಳನ್ನು ಯಾರಾದರೂ ಕರೆದುಕೊಂಡು ಹೋದರೋ ಎಂಬು ಭಯ ಬಿದ್ದು ಎಲ್ಲೆಡೆ ಹುಡುಕಲು ಮುಂದಾದರು. ಆಗ ನನ್ನಪ್ಪ ಚೆನ್ನೈನ ಎಲ್ಲ ಸಿನಿಮಾ ಸ್ಟೂಡಿಯೋಗಳಲ್ಲಿ ಹುಡುಕಿದ್ದರು.
 

ಚನ್ನೈನ ಶಾರದಾ ಸ್ಟುಡಿಯೋನಲ್ಲಿ ಮಲೆಯಾಳಂನ ನವವಧು ಸಿನಿಮಾದಲ್ಲಿ ನಟಿಸುತ್ತಿದ್ದೆನು. ಎಎಲ್‌ಎಸ್‌ ಪ್ರೊಡಕ್ಷನ್‌ನ ಸಿನಿಮಾದಲ್ಲಿ 2 ಸೀನ್ ಮುಗಿಸಿದ್ದೆನು. ಆಗ ಸ್ಥಳಕ್ಕೆ ಬಂದ ನನ್ನ ತಂದೆಗೆ ಜೀವ ಮರಳಿ ಬಂದಂತಾಗಿತ್ತು. ನಂತರ, ತಂದೆಯನ್ನು ಮನವೊಲಿಸಿ ಸಿನಿಮಾದಲ್ಲಿ ನಟನೆ ಮಾಡಿಸಿದರು.
 

ನನಗೆ ಯಾರು, ಯಾಕೆ ಕರೆದುಕೊಂಡು ಹೋದರು ಎಂಬುದೇ ಗೊತ್ತಿಲ್ಲ. ನನಗೆ ಯಾರೋ ಒಬ್ಬರು ಚಾಕೋಲೇಟ್ ಕೊಟ್ಟರು ಎಂದು ಅಲ್ಲಿಗೆ ಹೋಗಿಬಿಟ್ಟಿದ್ದೆ. ನನಗಾಗ ಕೇವಲ 2.5 ವರ್ಷದಿಂದ 3 ವರ್ಷಗಳು ಇರಬಹುದು.
 

ನಾನು ನಿಜ ಹೇಳಬೇಕೆಂದರೆ ನಾವು ಮನುಷ್ಯರು ಎಂದು ಅರ್ಥವಾಗುವುದಕ್ಕೆ ಕನಿಷ್ಠ 5-6 ವರ್ಷಗಳು ಬೇಕು. ಆದರೆ, ನಾನೊಬ್ಬಳು ಮನುಷ್ಯಳು ಎಂದು ತಿಳಿದುಕೊಳ್ಳುವ ಮೊದಲೇ 30-40 ಸಿನಿಮಾಗಳಲ್ಲಿ ನಟನೆ ಮಾಡಿದ್ದೆನು ಎಂದು ಬೇಬಿ ಇಂದಿರಾ ತಮ್ಮ ಹಳೆಯ ನೆನಪನ್ನು ಹೇಳಿದರು.
 

ಅದೇ ರೀತಿ 1980ರ ದಶಕದಲ್ಲಿ ಬಾಲ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ, ಜನರ ಅಚ್ಚುಮೆಚ್ಚಿನ ಬಾಲನಟಿ ಎನಿಸಿಕೊಂಡಿದ್ದ ಬೇಬಿ ಇಂದಿರಾ 35 ವರ್ಷಗಳ ಬಳಿಕ ಮತ್ತೆ ನಟ, ನಿರ್ದೇಶಕ ರಘುರಾಮ್‌ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಸಂದರ್ಶನದ ಮೂಲಕ ಜನರ ಎದುರು ಕಾಣಿಸಿಕೊಂಡಿದ್ದಾರೆ. ಜೊತೆಗೆ, ನಟನಾ ಕ್ಷೇತ್ರಕ್ಕೆ ಮರಳಿ ಬರುವುದಾಗಿ ಸುಳಿವನ್ನೂ ನೀಡಿದ್ದಾರೆ.
 

ಆಗ ನಾನು ಬಾಲನಟಿಯಾಗಿ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಎಲ್ಲ ಭಾಷೆಗಳನ್ನು ಮಾತನಾಡಬೇಕಿತ್ತು. ಇದಕ್ಕಾಗಿ ಟ್ಯೂಷನ್ ಕೂಡ ಹೋಗುತ್ತಿದ್ದೆನು. ನಾನು ಬಾಲನಟಿಯಾಗಿದ್ದಾಗ ವರ್ಷಕ್ಕೆ 25 ಸಿನಿಮಾಗಳಲ್ಲಿ ನಟನೆ ಮಾಡಿದ್ದೇನೆ ಎಂದು ಬೇಬಿ ಇಂದಿರಾ ತಿಳಿಸಿದ್ದಾರೆ.
 

ಬೇಬಿ ಇಂದಿರಾ ಅವರು ತಮಿಳು ನಟ ಶ್ರೀಧರ್‌ ಅವರನ್ನು ಮದುವೆಯಾಗಿದ್ದರು. ಆದರೆ, ದುರದೃಷ್ಟವಷಾತ್‌ ಶ್ರೀಧರ್‌ ಅವರು ಹೃದಯಾಘಾತದಿಂದ ನಿಧನರಾದರು. ಇವರಿಗೆ ಪ್ರಶಾಂತ್‌ ಹಾಗೂ ರಕ್ಷಿತ್‌ ಎಂಬ ಇಬ್ಬರು ಮಕ್ಕಳಿದ್ದು, ಚೆನ್ನೈನ ಕೊಟ್ಟಿವಾಕಮ್‌ ಕರ್ಪಗಂಬಲ್‌ ನಗರದಲ್ಲಿ ವಾಸವಾಗಿದ್ದಾರೆ.

ಸಂದರ್ಶನದ ಯ್ಯೂಟ್ಯೂಬ್ ಲಿಂಕ್: https://www.youtube.com/watch?v=x52Xw-c4Sh4

Latest Videos

click me!