ಅವರು ಬೇರೆ ಯಾರೂ ಅಲ್ಲ, ಜೂ.ಎನ್‌ಟಿಆರ್ ಜೊತೆ ನಟಿಸಿದ ಆತನ ಗೆಳೆಯ, ಮೆಗಾ ಹೀರೋ... ಗ್ಲೋಬಲ್ ಸ್ಟಾರ್ ರಾಮ್ ಚರಣ್. ಹೌದು, ರಾಮ್ ಚರಣ್ ಮೊದಲಿನಿಂದಲೂ ಲಕ್ಷ್ಮೀ ಪ್ರಣತಿಗೆ ಇಷ್ಟದ ಹೀರೋ ಅಂತೆ. ಮದುವೆಗೂ ಮುನ್ನ ರಾಮ್ ಚರಣ್ ಸಿನಿಮಾಗಳನ್ನು ಒಂದನ್ನೂ ಬಿಡದೆ ನೋಡುತ್ತಿದ್ದರಂತೆ ತಾರಕ್ ಪತ್ನಿ. ಅಷ್ಟೇ ಅಲ್ಲ, ರಾಮ್ ಚರಣ್ ನಟಿಸಿದ 'ಮಗಧೀರ' ಸಿನಿಮಾ ಅವರ ಅಚ್ಚುಮೆಚ್ಚಿನ ಸಿನಿಮಾವಂತೆ. ಆ ಸಿನಿಮಾವನ್ನು ಎಷ್ಟು ಬಾರಿ ನೋಡಿದ್ದಾರೋ ಲೆಕ್ಕವಿಲ್ಲವಂತೆ.