ಮಲಯಾಳಂನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ 64 ವರ್ಷದ ನಟ ಮೋಹನ್ ಲಾಲ್, ಕನ್ನಡದಲ್ಲಿ ಮೈತ್ರಿ ಮತ್ತು ಲವ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ಇವರು ಹಿಂದಿ, ತೆಲುಗು, ತಮಿಳು ಸಿನಿಮಾದಲ್ಲೂ ಗುರುತಿಸಿಕೊಂಡಿದ್ದಾರೆ. ಈಗ ಮಲಯಾಳಂ ಚಲನಚಿತ್ರೋದ್ಯಮದಲ್ಲಿ(Malayalam Film Industry) ಮತ್ತು ಭಾರತದಲ್ಲಿಯೂ ಅತ್ಯಂತ ಯಶಸ್ವಿ ಮತ್ತು ಹೈ ಪೇಯ್ಡ್ ನಟರಲ್ಲಿ ಒಬ್ಬರು. ಜೊತೆಗೆ ಈ ವಯಸ್ಸಿನಲ್ಲೂ ಬಹು ಬೇಡಿಕೆಯ ನಟ.