ನಾನು ಚಿಕ್ಕ ಬಟ್ಟೆ ತೊಡೋಲ್ಲವೆಂದ ನಟಿಯ ಬೋಲ್ಡ್ ಅವತಾರವಿದು!

First Published | Sep 22, 2022, 6:03 PM IST

1998 ರ 'ಕುಚ್ ಕುಚ್ ಹೋತಾ ಹೈ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಸನಾ ಸಯೀದ್ (Sana Saeed) ಅವರು ಸೆಪ್ಟೆಂಬರ್ 22, ಗುರುವಾರ ತಮ್ಮ 34 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ರಾಣಿ ಮುಖರ್ಜಿ ಮತ್ತು ಶಾರುಖ್ ಖಾನ್ ಅವರ ಪುತ್ರಿ ಅಂಜಲಿ ಪಾತ್ರವನ್ನು ಸನಾ ನಿರ್ವಹಿಸಿದ್ದಾರೆ. ಆ ಸಮಯದಲ್ಲಿ ಅವರು ಕೇವಲ 10 ವರ್ಷ ವಯಸ್ಸಿನವರಾಗಿದ್ದ ಸನಾ ಈಗ ಬೋಲ್ಡ್ ಮತ್ತು ಗಾರ್ಜಿಯಸ್ ನಟಿ. ಆದರೆ ಆಕೆಯ ವೃತ್ತಿಜೀವನ (Career) ನಿರೀಕ್ಷಿಸಿದಂತೆ ಮೇಲೇಳಲಿಲ್ಲ. ಸನಾ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ, ಅವರಿಗೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ.

ಸನಾ ಸಯೀದ್ ಬಾಲ ಕಲಾವಿದೆಯಾಗಿ 'ಕುಚ್ ಕುಚ್ ಹೋತಾ ಹೈ' ಚಿತ್ರದ ಮೂಲಕ ತಮ್ಮ ನಟನಾ ವೃತ್ತಿ ಪ್ರಾರಂಭಿಸಿದರು. ಚಿತ್ರದಲ್ಲಿ ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

'ಕುಚ್ ಕುಚ್ ಹೋತಾ ಹೈ'ನಂತರ ಸನಾ 'ಹರ್ ದಿಲ್ ಜೋ ಪ್ಯಾರ್ ಕರೇಗಾ' ಮತ್ತು 'ಬಾದಲ್' ನಂತಹ ದೊಡ್ಡ ಚಿತ್ರಗಳಲ್ಲಿಯೂ ಕಾಣಿಸಿಕೊಂಡರು. ಆದರೆ, ಬಳಿಕ ಟಿವಿಯತ್ತ ಮುಖ ಮಾಡಿದರು.

Tap to resize

2001 ರಿಂದ 2012 ರವರೆಗೆ, ಅವರು ನಿರಂತರವಾಗಿ ಅನೇಕ ಟಿವಿ ಕಾರ್ಯಕ್ರಮಗಳನ್ನು ಮಾಡಿದರು. ಇವುಗಳಲ್ಲಿ 'ಕುಂಕುಮ್', 'ಕಹಿನ್ ತೊ ಹೋಗಾ', 'ಸಾತ್ ಫೇರೆ', 'ಕವ್ಯಾಂಜಲಿ', 'ಬಿದಾಯಿ', 'ಲೋ ಹೋ ಗಯಿ ಪೂಜಾ ಈಸ್ ಘರ್ ಕಿ' ಮತ್ತು 'ಸಸುರಲ್ ಗೆಂದಾ ಫೂಲ್' ಮುಂತಾದ ಕಾರ್ಯಕ್ರಮಗಳು ಸೇರಿವೆ.

2012 ರಲ್ಲಿ, ಸನಾ ಮತ್ತೊಮ್ಮೆ ಬಾಲಿವುಡ್ ಪುನರಾಗಮನವನ್ನು ಮಾಡಿದರು  'ಸ್ಟೂಡೆಂಟ್ ಆಫ್ ದಿ ಇಯರ್ 2'  ಸಿನಿಮಾದ ಮೂಲಕ   ಮತ್ತೊಮ್ಮೆ ಅವರನ್ನು ಕರಣ್ ಜೋಹರ್ ಬೆಂಬಲಿಸಿದರು. ಚಿತ್ರದಲ್ಲಿ ಸನಾ ತುಂಬಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 

ಚಿತ್ರದ ದೃಶ್ಯವೊಂದರಲ್ಲಿ ಬಿಕಿನಿ ಧರಿಸಿದ್ದಕ್ಕಾಗಿ ಆಕೆಯ ಮನೆಯಲ್ಲಿ ಸಾಕಷ್ಟು ವಿವಾದಗಳು ನಡೆದಿವೆ. ಆದರೆ, ‘ಸ್ಟೂಡೆಂಟ್ ಆಫ್ ದಿ ಇಯರ್’ ಹಿಟ್ ಆಗಿತ್ತು. ಚಿತ್ರದ ಮೂವರೂ ನಾಯಕ ನಟರಾದ ಆಲಿಯಾ ಭಟ್, ವರುಣ್ ಧವನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅದೃಷ್ಟ ಮಿಂಚಿದರೂ ಸನಾ ಅವರಿಗೆ ಏನು ಪ್ರಯೋಜನವಾಗಿಲ್ಲ.

ಇದರ ನಂತರ, ಅವರು ಇನ್ನೂ ಒಂದೆರಡು ಚಿತ್ರಗಳಲ್ಲಿ ಕಾಣಿಸಿಕೊಂಡರು. 2012ರಲ್ಲಿ, ಸನಾ ಮತ್ತೊಮ್ಮೆ ಟಿವಿಯನ್ನು ಆಶ್ರಯಿಸಿದರು. ಅವರು ರಿಯಾಲಿಟಿ ಶೋ 'ಬಿಗ್ ಬಾಸ್ 6' ಗೆ ಸೇರಿಕೊಂಡರು ಮತ್ತು ಕಾರ್ಯಕ್ರಮದ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು.

ಇದಾದ ನಂತರ, 7 ವರ್ಷಗಳ ಕಾಲ ಸನಾ ಟಿವಿಯಲ್ಲಿ 'ಝಲಕ್ ದಿಖ್ಲಾ ಜಾ', 'ಸ್ಪ್ಲಿಟ್ಸ್ವಿಲ್ಲಾ', 'ನಾಚ್ ಬಲಿಯೇ', 'ಖತ್ರೋನ್ ಕೆ ಖಿಲಾಡಿ' ಮುಂತಾದ ಹಲವು ಕಾರ್ಯಕ್ರಮಗಳನ್ನು ಮಾಡಿದರು. ಸನಾ ಕೊನೆಯದಾಗಿ 2022 ರಲ್ಲಿ 'ದಿ ಖತ್ರಾ ಖತ್ರಾ ಶೋ' ನಲ್ಲಿ ಕಾಣಿಸಿಕೊಂಡರು.

ಕೆಲವು ಸಮಯದಿಂದ ನಟನೆ ಯಿಂದ ದೂರ ಇರುವ ಸನಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಾಟ್ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಚರ್ಚೆಯಲ್ಲಿದ್ದಾರೆ. ಕೆಲವೊಮ್ಮೆ ಅವರು ಬಿಕಿನಿ ಫೋಟೋಗಳನ್ನು ಮತ್ತು ಕೆಲವೊಮ್ಮೆ ಹಾಟ್ ಫೋಟೋಶೂಟ್ ಅನ್ನು ಹಂಚಿಕೊಳ್ಳುತ್ತಾರೆ. ಈ ದಿನಗಳಲ್ಲಿ ಸನಾ ಕ್ಯಾಲಿಫೋರ್ನಿಯಾದಲ್ಲಿದ್ದಾರೆ. 
 

 ಸನಾ ಸಯೀದ್ ಕೆಲವು ವರ್ಷಗಳ ಹಿಂದೆ ನೀಡಿದ ಸಂದರ್ಶನದಲ್ಲಿ ತನ್ನ ಕುಟುಂಬದ ಸದಸ್ಯರು ತನ್ನ ಚಿಕ್ಕ ಬಟ್ಟೆಗಳನ್ನು ಧರಿಸಲು ಇಷ್ಟಪಡುವುದಿಲ್ಲ ಎಂದು ಬಹಿರಂಗಪಡಿಸಿದ್ದರು. ಆದರೆ  ಸನಾ ಅವರ ಇನ್‌ಸ್ಟಾಗ್ರಾಮ್  ನೋಡಿದರೆ, ಅವರು ಸನ್ನಿ ಲಿಯೋನ್‌ಗೇ  ಸ್ಪರ್ಧೆ ನೀಡುತ್ತಿದ್ದಾರೆ.

Latest Videos

click me!