ಅಮೀಶಾ ಪಟೇಲ್ ಅವರ ವೈರಲ್ ವೀಡಿಯೊ ಬಗ್ಗೆ ಹೇಳುವುದಾದರೆ ಇಮ್ರಾನ್ ಅಬ್ಬಾಸ್ ಮತ್ತು ಅಮೀಶಾ ಪಟೇಲ್ ಇಬ್ಬರೂ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 'ನನ್ನ ನೆಚ್ಚಿನ ವಿಶಿಷ್ಟವಾದ ಬಾಲಿವುಡ್ ಟ್ಯೂನ್‌ಗಳಲ್ಲಿ ತನ್ನ ಸ್ನೇಹಿತೆ ಅಮೀಶಾ ಪಟೇಲ್ ಅವರೊಂದಿಗೆ ಚಿತ್ರೀಕರಿಸಿರುವುದು ತುಂಬಾ ಇಷ್ಟವಾಯಿತು. ಅಲ್ಕಾ ಯಾಗ್ನಿಕ್ ಮತ್ತು ಉದಿತ್ ನಾರಾಯಣ್ ಹಾಡಿದ್ದಾರೆ' ಎಂದು ಇಮ್ರಾನ್ ಅವರು ಶೀರ್ಷಿಕೆಯಲ್ಲಿ ಬರೆದು ಕೊಂಡಿದ್ದಾರೆ.
'ಕಳೆದ ವಾರ ನನ್ನ ಸ್ನೇಹಿತ ಇಮ್ರಾನ್ ಅಬ್ಬಾಸ್ ಅವರೊಂದಿಗೆ ಬಹ್ರೇನ್‌ನಲ್ಲಿ ಮೋಜು ಮಾಡಿದ್ದು, ಸಂತೋಷವಾಯಿತು. ಬಾಬಿ ಡಿಯೋಲ್ ಅವರೊಂದಿಗಿನ ನನ್ನ 'ಕ್ರಾಂತಿ' ಚಿತ್ರದ ಈ ಹಾಡು ಇಮ್ರಾನ್ ಮತ್ತು ನನ್ನ ನೆಚ್ಚಿನ ಹಾಡುಗಳಲ್ಲಿ ಒಂದು,' ಎಂದು ಅಮೀಶಾ ಬರೆದಿದ್ದಾರೆ. ಈ ಸಾಮಾಜಿಕ ಮಾಧ್ಯಮ ಪೋಸ್ಟ್ ಆದ ನಂತರ, ಅಮೀಶಾ ಮತ್ತು ಇಮ್ರಾನ್ ಅಬ್ಬಾಸ್ ಹೆಸರುಗಳು ಸೇರ್ಪಡೆಯಾಗುತ್ತಿವೆ.
'ವಿವಾಹ್' ಮತ್ತು 'ಮೈ ಹೂ ನಾ' ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅಮೃತಾ ರಾವ್ ಅವರು ಪಾಕಿಸ್ತಾನಿ ಬ್ಯಾಂಡ್ 'ಜಲ್' ಸದಸ್ಯ ಫರ್ಹಾನ್ ಸಯೀದ್ ಅವರೊಂದಿಗೆ ಸಂಪರ್ಕ ಹೊಂದಿದ್ದರು. 2008ರಲ್ಲಿ ಆರಂಭವಾದ ಈ ಸಂಬಂಧ ಯಾವಾಗ ಬ್ರೇಕಪ್ (Breakkup) ಆಯಿತು ಎಂಬುದು ಯಾರಿಗೂ ಗೊತ್ತಿಲ್ಲ.
ಜನಪ್ರಿಯ ನಟಿ ರೀನಾ ರಾಯ್ ಪಾಕಿಸ್ತಾನಿ ಕ್ರಿಕೆಟಿಗ ಮೊಹ್ಸಿನ್ ಖಾನ್ ಅವರನ್ನು ಪ್ರೀತಿಸುತ್ತಿದ್ದರು ಮತ್ತು ಅವರಿಬ್ಬರೂ 1983 ರಲ್ಲಿ ವಿವಾಹವಾದರು. ಮದುವೆಯ ನಂತರ ರೀನಾ ಚಿತ್ರರಂಗವನ್ನು ತೊರೆದರು. ಇಬ್ಬರಿಗೂ ಒಂದು ಹೆಣ್ಣು ಮಗುವಿದೆ. ಆದರೆ, ಈಗ ಅವರು ಬೇರೆಯಾಗಿದ್ದಾರೆ.
ನಟಿ ಸುಶ್ಮಿತಾ ಸೇನ್ ಪಾಕಿಸ್ತಾನಿ ಕ್ರಿಕೆಟಿಗ ವಾಸಿಂ ಅಕ್ರಮ್ ಅವರನ್ನು ಪ್ರೀತಿಸುತ್ತಿದ್ದರು. ವಾಸಿಂನ ಮೊದಲ ಪತ್ನಿಯ ಮರಣದ ನಂತರ ಇವರಿಬ್ಬರ ನಡುವೆ ಸಂಬಂಧವೊಂದು ಟಿಸಿಲೊಡೆದಿತ್ತು. ಆದರೆ, ಇದನ್ನು ಸುಶ್ಮಿತಾ ಅಥವಾ ವಾಸಿಂ ಖಚಿತಪಡಿಸಿಲ್ಲ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೆಸರು ಒಬ್ಬರಲ್ಲ 4-4 ಬಾಲಿವುಡ್ ನಟಿಯರ ಜೊತೆ ತಳುಕು ಹಾಕಿಕೊಂಡಿದೆ ರೇಖಾ ಮತ್ತು ಇಮ್ರಾನ್ ಖಾನ್ ಅವರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದ ಸಮಯವಿತ್ತು. ಅನೇಕ ವರದಿಗಳಲ್ಲಿ, ಅವರು ಮದುವೆಯಾಗಬಹುದು ಎಂದು ಹೇಳಲಾಗಿದೆ. ಆದರೆ, ಇದು ಸಾಧ್ಯವಾಗಲಿಲ್ಲ.
ರೇಖಾ ನಂತರ, ಇಮ್ರಾನ್ ಖಾನ್ ಅವರ ಹೆಸರು ಇತರ ಮೂವರು ಬಾಲಿವುಡ್ ನಟಿಯರೊಂದಿಗೆ ಸೇರಿಕೊಂಡಿದೆ. ಈ ನಟಿಯರು ಮುನ್ಮುನ್ ಸೇನ್, ಜೀನತ್ ಅಮಾನ್ ಮತ್ತು ಶಬಾನಾ ಅಜ್ಮಿ. ಈ ಸಂಬಂಧಗಳು ಎಂದಿಗೂ ದೃಢಪಟ್ಟಿಲ್ಲ ಎಂಬುದು ಬೇರೆ ವಿಷಯ. ಇಮ್ರಾನ್ ಖಾನ್ ತನ್ನ 27ನೇ ಹುಟ್ಟುಹಬ್ಬವನ್ನು ಜೀನತ್ ಅಮಾನ್ ಅವರ ಜೊತೆ ಆಚರಿಸಿಕೊಂಡರು ಎಂದು ಬಗ್ಗೆ ಹೇಳಲಾಗುತ್ತದೆ.
ಮಲೈಕಾ ಅರೋರಾ ಅವರ ಸಹೋದರಿ ನಟಿ ಅಮೃತಾ ಅರೋರಾ ಅವರು ಪಾಕಿಸ್ತಾನ ಮೂಲದ ಇಂಗ್ಲಿಷ್ ಕ್ರಿಕೆಟಿಗ ಉಸ್ಮಾನ್ ಅಫ್ಜಲ್ ಅವರೊಂದಿಗೆ ಸುಮಾರು ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ. ದೂರದ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಅವರು ಬ್ರೇಕಪ್ ಮಾಡಿಕೊಂಡರು ಎನ್ನಲಾಗಿದೆ.
ನಟಿ ತಮನ್ನಾ ಭಾಟಿಯಾ ಅವರ ಹೆಸರು ಪಾಕಿಸ್ತಾನದ ಆಲ್‌ರೌಂಡರ್ ಕ್ರಿಕೆಟಿಗ ಅಬ್ದುಲ್ ರಜಾಕ್ ಜೊತೆ ಸೇರಿಕೊಂಡಿದೆ. ಇಬ್ಬರೂ ಮೊಬೈಲ್ ಜಾಹೀರಾತಿಗಾಗಿ ಒಟ್ಟಿಗೆ ಕೆಲಸ ಮಾಡಿದಾಗ, ಇವರ ಸಂಬಂಧದ ವಿಷಯ ಬೆಳಕಿಗೆ ಬಂದಿತ್ತು. ನಂತರ ಇಬ್ಬರೂ ದುಬೈನಲ್ಲಿ ಆಭರಣ ಮಳಿಗೆಯನ್ನು ಸಹ ಉದ್ಘಾಟಿಸಿದರು. ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಆದರೆ, ನಂತರ ಅವರಿಬ್ಬರ ಸಂಬಂಧದ ಸುದ್ದಿ ಕೇವಲ ವದಂತಿ ಎಂದು ಹೇಳಲಾಗಿದೆ.