ಒಂದು ಸಂದರ್ಶನದಲ್ಲಿ ಕೃಷ್ಣಂರಾಜು ತಮ್ಮ ಆಸ್ತಿ, ಕುಟುಂಬದ ಬಗ್ಗೆ ಹೇಳಿದ್ದಾರೆ. ನಾನು ದುಡ್ಡಿನ ವಿಷಯದಲ್ಲಿ ಮಾತ್ರ ಅಲ್ಲ, ಮನಸ್ಸಿನ ವಿಷಯದಲ್ಲೂ ಶ್ರೀಮಂತ ಅಂತ ಹೇಳಿದ್ದಾರೆ. ನಾವು ಶ್ರೀಮಂತರಾಗಿದ್ರೂ ಮನೆಯಲ್ಲಿ ದುಡ್ಡು ಇಟ್ಟಿರಲಿಲ್ಲ. ಬಂದ ದುಡ್ಡನ್ನ ಬಂದ ಹಾಗೆ ಖರ್ಚು ಮಾಡ್ತಿದ್ವಿ. ನಮ್ಮ ಫ್ಯಾಮಿಲಿ ಮೊದಲಿಂದನೂ ಹೀಗೇ ಬದುಕಿದ್ದು. ಅವಶ್ಯಕತೆ ಇದ್ದಾಗ ಎಲ್ಲಿಂದಾದ್ರೂ ದುಡ್ಡು ತಂದು ಖರ್ಚು ಮಾಡ್ತಿದ್ವಿ ಅಂತ ಕೃಷ್ಣಂರಾಜು ಹೇಳಿದ್ದಾರೆ.