Krishna Death; ದುಃಖದಲ್ಲಿರುವ ಮಹೇಶ್ ಬಾಬುನ ತಬ್ಬಿ ಧೈರ್ಯ ತುಂಬಿದ ರಾಮ್, ಅಲ್ಲು, ಚಿರು ಮತ್ತು Jr.NTR

First Published Nov 15, 2022, 3:47 PM IST

ತಂದೆಯ ಪಾರ್ಥಿವ ಶರೀರದ ಮುಂದೆ ಕುಳಿತು ಮಹೇಶ್ ಬಾಬು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅಪ್ಪನ್ನು ನೋಡಿ ಕಣ್ಣೀರಾಕುತ್ತಿದ್ದ ಮಹೇಶ್ ಬಾಬು ಅವರಿಗೆ ಟಾಲಿವುಡ್ ಸ್ಟಾರ್ ಧೈರ್ಯ ತುಂಬಿದ್ದಾರೆ. ಕೃಷ್ಣ ಅವರ ಅಂತಿಮ ದರ್ಶನ ಪಡೆದ ಟಾಲಿವುಡ್ ಗಣ್ಯರು ಮಹೇಶ್ ಬಾಬು ಅವರನ್ನು ತಬ್ಬಿಕೊಂಡು ಸಾಂತ್ವನ ಹೇಳಿದರು. 

ಮಹೇಶ್ ಬಾಬು ಒಂದೂವರೆ ತಿಂಗಳಲ್ಲಿ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡರು. ಸೆಪ್ಟಂಬರ್ ನಲ್ಲಿ ಮಹೇಶ್ ತನ್ನ ತಾಯಿ ಇಂದಿಯಾ ಅವರನ್ನು ಕಳೆದುಕೊಂಡರು. ಅಮ್ಮನ ಅಗಲಿಕೆಯ ನೋವು ಇನ್ನೂ ಹಸಿಯಾಗಿರುವುಗಾಲೇ ತಂದೆ ಕೂಡ ದೂರ ಆಗಿದ್ದಾರೆ. 

ಮಹೇಶ್ ಬಾಬು ತಂದೆ ಕೃಷ್ಣ ಅವರು ಇಂದು (ನವೆಂಬರ್ 15) ಬೆಳಗ್ಗೆ ನಿಧನ ಹೊಂದಿದರು. ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೃಷ್ಣ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು. 

ತಂದೆಯ ಪಾರ್ಥಿವ ಶರೀರದ ಮುಂದೆ ಕುಳಿತು ಮಹೇಶ್ ಬಾಬು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅಪ್ಪನ್ನು ನೋಡಿ ಕಣ್ಣೀರಾಕುತ್ತಿದ್ದ ಮಹೇಶ್ ಬಾಬು ಅವರಿಗೆ ಟಾಲಿವುಡ್ ಸ್ಟಾರ್ ಧೈರ್ಯ ತುಂಬಿದ್ದಾರೆ. ಕೃಷ್ಣ ಅವರ ಅಂತಿಮ ದರ್ಶನ ಪಡೆದ ಟಾಲಿವುಡ್ ಗಣ್ಯರು ಮಹೇಶ್ ಬಾಬು ಅವರನ್ನು ತಬ್ಬಿಕೊಂಡು ಸಾಂತ್ವನ ಹೇಳಿದರು. 

ಟಾಲಿವುಡ್ ಸ್ಟಾರ್‌ಗಳಾದ ಚಿರಂಜೀವಿ, ಅಲ್ಲು ಅರ್ಜುನ್, ರಾಮ್ ಚರಣ್, ಪವನ್ ಕಲ್ಯಾಣ್, ಜೂ ಎನ್ ಟಿ ಆರ್, ವಿಜಯ್ ದೇವರಕೊಂಡ ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ಕೃಷ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. 

ನಟ ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್ ಮತ್ತು ಇತರ ಟಾಲಿವುಡ್ ನಟರು ಮಹೇಶ್ ಬಾಬು ಜೊತೆ ಕೆಲವು ಸಮಯ ಮಾತನಾಡಿ ಸಾಂತ್ವನ ಹೇಳಿದರು. ಅಪ್ಪನ್ನು ನೆನೆದು ಕಣ್ಣೀರಾಕುತ್ತಿರುವ ಮಹೇಶ್ ಬಾಬು ವಿಡಿಯೋ ಅಭಿಮಾನಿಗಳ ಮನಕಲಕಿದೆ. 

mahesh babu

ಮಹೇಶ್ ಬಾಬು ಅವರಿಗೆ ಅಭಿಮಾನಿಗಳು ಧೈರ್ಯವಾಗಿ ಇರುವಂತೆ ಸಂದೇಶ ಕಳುಹಿಸುತ್ತಿದ್ದಾರೆ. ಮತ್ತಷ್ಟು ಶಕ್ತಿ ಸಿಗಲಿ ಎಂದು ಹಾರೈಸುತ್ತಿದ್ದಾರೆ. ಮಹೇಶ್ ಬಾಬು ಕಣ್ಣೀರಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕೃಷ್ಣ ಅವರು 1960ರಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕೃಷ್ಣ ಅವರು ಟಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದ್ದರು. ಸಿನಿಮಾರಂಗದ ಜೊತೆಗೆ ಕೃಷ್ಣ ಅವರು ರಾಜಕೀಯದಲ್ಲೂ ಸಕ್ರೀಯರಾಗಿದ್ದರು. 

ಕೃಷ್ಣ ನಿಧನದ ಬಳಿಕ ಮಹೇಶ್ ಬಾಬು ಕುಟುಂಬ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಮಹೇಶ್ ಬಾಬು, ನಮ್ರತಾ ಶಿರೋಡ್ಕರ್, ಸಿತಾರಾ ಮತ್ತು ಇಡೀ ಘಟ್ಟಮನೇನಿ ಕುಟುಂಬದ ಸದ್ಯರು ಮೊದಲ ಹೇಳಕೆ ನೀಡಿದೆ. ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ಹಾಗೂ ಅವರ ಮಕ್ಕಳಾದ ಗೌತಮ್ ಮತ್ತು ಸಿತಾರಾ ಮತ್ತು ಮಹೇಶ್ ಬಾಬು ಸಹೋದರಿಯರಾದ ಮಂಜುಳಾ, ಪದ್ಮಾವತಿ ಮತ್ತು ಪ್ರಿಯದರ್ಶಿನಿ ಘಟ್ಟಮನೇನಿ ಕೂಡ ಹೇಳಿಕೆ ನೀಡಿದ್ದಾರೆ.

'ನಮ್ಮ ಪ್ರೀತಿಯ ಕೃಷ್ಣ ಅವರ ಅಗಲಿಕೆಯ ಬಗ್ಗೆ ನಾವು ನಿಮಗೆ ಅತ್ಯಂತ ದುಃಖದಿಂದ ತಿಳಿಸುತ್ತೇವೆ. ಅವರು ಸಿನಿಮಾ ಹೊರತಾಗಿಯೂ ಹಲವು ವಿಧಗಳಲ್ಲಿ ಸೂಪರ್ ಸ್ಟಾರ್ ಆಗಿದ್ದರು. ಪ್ರೀತಿ, ವಿನಮ್ರತೆ ಮತ್ತು ಸಹಾನುಭೂತಿಯಿಂದ ಮಾರ್ಗದರ್ಶನ ನೀಡಿದ್ದಾರೆ' ಎಂದು ಹೇಳಿದ್ದಾರೆ.

'ಅವರು ತಮ್ಮ ಕೆಲಸದ ಮೂಲಕ ಇನ್ನೂ ಜೀವಂತವಾಗಿದ್ದಾರೆ. ಅವರು ನಮ್ಮನ್ನು ಅತೀ ಹೆಚ್ಚು ಪ್ರೀತಿಸುತ್ತಿದ್ದರು ಮತ್ತು ಪ್ರತಿ ದಿನವೂ ನಾವು ಅವನನ್ನು ಮಿಸ್ ಮಾಡಿಕೊಳ್ಳುತ್ತೆವೆ. ಆದರೆ ಅವರು ಹೇಳಿದಂತೆ, ವಿದಾಯಗಳು ಶಾಶ್ವತವಲ್ಲ. ನಾವು ಮತ್ತೆ ಭೇಟಿಯಾಗುವವರೆಗೆ' ಎಂದು  ಘಟ್ಟಮನೇನಿ  ಎಂದು ದೀರ್ಘವಾದ ನೋಟ್ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಸಂತಾರ ಸೂಚಿಸಿದ್ದಾರೆ.  'ಕೃಷ್ಣ ಅವರು ತಮ್ಮ ಅದ್ಭುತ ನಟನಾ ಕೌಶಲ್ಯ ಮತ್ತು ಸ್ನೇಹಪರ ವ್ಯಕ್ತಿತ್ವದಿಂದ ಜನರ ಹೃದಯವನ್ನು ಗೆದ್ದ ಲೆಜೆಂಡರಿ ಸೂಪರ್‌ಸ್ಟಾರ್. ಅವರ ನಿಧನ ಭಾರತೀಯ ಸಿನಿಮಾರಂಗಕ್ಕೆ ದೊಡ್ಡ ನಷ್ಟ. ದುಃಖ ಭರಿಸುವ ಶಕ್ತಿ ನೀಡಲಿ ಮಹೇಶ್ ಬಾಬು ಕುಟುಂಬಕ್ಕೆ. ಆತ್ಮಕ್ಕೆ ಶಾಂತಿ' ಎಂದು ಹೇಳಿದ್ದಾರೆ. 

click me!