ದಿಗ್ಗಜ ನಿರ್ದೇಶಕ ರಾಘವೇಂದ್ರ ರಾವ್, ಎನ್.ಟಿ.ಆರ್, ಎ.ಎನ್.ಆರ್, ಕೃಷ್ಣ, ಶೋಭನ್ ಬಾಬು, ಚಿರಂಜೀವಿ, ವೆಂಕಟೇಶ್, ನಾಗಾರ್ಜುನ, ಬಾಲಕೃಷ್ಣ ಹೀಗೆ ಸ್ಟಾರ್ ನಟರ ಜೊತೆ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ.
ದಿಗ್ಗಜ ನಿರ್ದೇಶಕ ರಾಘವೇಂದ್ರ ರಾವ್, ಎನ್.ಟಿ.ಆರ್, ಎ.ಎನ್.ಆರ್, ಕೃಷ್ಣ, ಶೋಭನ್ ಬಾಬು, ಚಿರಂಜೀವಿ, ವೆಂಕಟೇಶ್, ನಾಗಾರ್ಜುನ, ಬಾಲಕೃಷ್ಣ ಹೀಗೆ ಸ್ಟಾರ್ ನಟರ ಜೊತೆ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅಲ್ಲು ಅರ್ಜುನ್, ಮಹೇಶ್ ಬಾಬು ಅವರನ್ನು ಲಾಂಚ್ ಮಾಡಿದ್ದೂ ಇವರೇ.
25
ರಾಘವೇಂದ್ರ ರಾವ್ ಅವರದ್ದು ಒಂದು ವಿಶಿಷ್ಟ ನಿರ್ದೇಶನ ಶೈಲಿ. ನಿರ್ದೇಶಕರಾಗಿ ಗೆದ್ದ ಇವರು, ಡ್ಯಾನ್ಸ್ ಕೊರಿಯೋಗ್ರಫರ್ ಆಗಿಯೂ ಮಿಂಚಿದ್ದಾರೆ. ಡ್ಯಾನ್ಸ್‌ಗೆ ನಂದಿ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. 1996ರ 'ಪೆಳ್ಳಿ ಸಂದಡಿ' ಚಿತ್ರಕ್ಕೆ ಪ್ರಶಸ್ತಿ ಬಂದಿದೆ.
35
ಶ್ರೀಕಾಂತ್, ರವಳಿ, ದೀಪ್ತಿ ಭಟ್ನಾಗರ್ ನಟಿಸಿದ್ದ 'ಪೆಳ್ಳಿ ಸಂದಡಿ' ಚಿತ್ರಕ್ಕೆ ರಾಘವೇಂದ್ರ ರಾವ್ ನಿರ್ದೇಶನ ಮಾಡಿದ್ದಲ್ಲದೆ, ಹಾಡುಗಳಿಗೆ ನೃತ್ಯ ನಿರ್ದೇಶನವನ್ನೂ ಮಾಡಿದ್ದರು. ಹಾಡುಗಳನ್ನು ಸುಂದರವಾಗಿ ಚಿತ್ರೀಕರಿಸುವುದರಲ್ಲಿ ರಾಘವೇಂದ್ರ ರಾವ್ ನಿಸ್ಸೀಮರು. 'ಪೆಳ್ಳಿ ಸಂದಡಿ' ಚಿತ್ರದ ಹಾಡುಗಳಿಗೆ ಕೀರವಾಣಿ ಸಂಗೀತ ನೀಡಿದ್ದರು.
'ಪೆಳ್ಳಿ ಸಂದಡಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಾಲಕೃಷ್ಣ, ವೆಂಕಟೇಶ್ ಚಿತ್ರಗಳ ಜೊತೆ ಸ್ಪರ್ಧಿಸಿ ಗೆದ್ದಿತ್ತು. 'ವಂಶನಿಕೊಕ್ಕಡು', 'ಧರ್ಮ ಚಕ್ರ' ಚಿತ್ರಗಳಿಗಿಂತ ಹೆಚ್ಚು ಗಳಿಕೆ ಕಂಡಿತ್ತು.
55
ಆ ವರ್ಷ ನಾಗಾರ್ಜುನ ಅಭಿನಯದ 'ನಿನ್ನೇ ಪೆಳ್ಳಾಡತ' ಚಿತ್ರ ಹೆಚ್ಚು ಗಳಿಕೆ ಕಂಡಿತ್ತು. ಎರಡನೇ ಸ್ಥಾನ 'ಪೆಳ್ಳಿ ಸಂದಡಿ' ಚಿತ್ರಕ್ಕೆ. ಕೇವಲ ಎರಡು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ 15 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು.