Lip Lock ಏನಿದ್ರೂ ಇವರ ಜೊತೆಗೆ ಮಾತ್ರ: ಕಿಸ್ ಬೆಡಗಿ Sreeleela ಕಾಮೆಂಟ್ಸ್ ವೈರಲ್!

Published : Oct 26, 2023, 01:00 AM IST

'ಕಿಸ್‌' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರೀಲೀಲಾ ನಟನೆಯ ತೆಲುಗು ಸಿನಿಮಾ 'ಭಗವಂತ್ ಕೇಸರಿ' ಬಿಡುಗಡೆ ಆಗಿದೆ. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಈ ವೇಳೆಯಲ್ಲಿ ನಡೆದ ಸಂದರ್ಶನದಲ್ಲಿ ಶ್ರೀಲೀಲಾ ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ.   

PREV
16
Lip Lock ಏನಿದ್ರೂ ಇವರ ಜೊತೆಗೆ ಮಾತ್ರ: ಕಿಸ್ ಬೆಡಗಿ Sreeleela ಕಾಮೆಂಟ್ಸ್ ವೈರಲ್!

ಚಿತ್ರರಂಗ ಪ್ರವೇಶಿಸಿದ ಐದು ವರ್ಷಗಳಲ್ಲಿ ಎರಡು ಪ್ರಮುಖ ಚಿತ್ರರಂಗಗಳಲ್ಲಿ ಸ್ಟಾರ್‌ ನಟಿಯಾಗಿರುವುದು ಶ್ರೀಲೀಲಾ ಅವರ ಸಾಧನೆ ಎಂದು ಹೇಳಬಹುದು. ಇದೀಗ ತೆರೆಯ ಮೇಲೆ ಯಾವುದೇ ಕಾರಣಕ್ಕೂ ತಾವು ಲಿಪ್ ಲಾಕ್ ಮಾಡಿಕೊಳ್ಳುವುದಿಲ್ಲವೆಂದಿದ್ದಾರೆ. 

26

ಲಿಪ್ ಲಾಕ್ ಮಾಡುವುದೇ ಆದರೆ, ಅವರು ನನ್ನ ಭಾವಿ ಪತಿ ಆಗಿರಬೇಕು ಎಂದೂ ನಟಿ ಶ್ರೀಲೀಲಾ ಹೇಳಿಕೆ ನೀಡಿದ್ದಾರೆ. ಈ ವಿಷಯ ತೆಲುಗು ಚಿತ್ರೋದ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಈ ಮಾತು ಕೇಳಿ ಖುಷಿಯಾಗಿದ್ದಾರೆ.

36

ಭಗವಂತ್ ಕೇಸರಿ ಸಿನಿಮಾ ಮಾಡಿರುವ ಬೆನ್ನಲ್ಲೇ ಶ್ರೀಲೀಲಾ ಕುರಿತಾಗಿ ಮತ್ತೊಂದು ಸುದ್ದಿಯೂ ಹರಿದಾಡುತ್ತಿದೆ. ಈಗ ತಾನೇ ಟಾಲಿವುಡ್ ಅಂಗಳದಲ್ಲಿ ನೆಲೆ ಊರುತ್ತಿರುವ ಹುಡುಗಿಯನ್ನು ಮದುವೆ ಮಾಡಿಸಲು ಹೊರಟಿದ್ದಾರೆ ಕೆಲವರು. ಇದೇನಿದು?

46

'ಭಗವಂತ ಕೇಸರಿ' ಸಿನಿಮಾದಲ್ಲಿ ಟಾಲಿವುಡ್ ಟಾಪ್ ಸ್ಟಾರ್ ಬಾಲಕೃಷ್ಣನ ಮಗಳಾಗಿ ಶ್ರೀಲೀಲಾ ನಟಿಸಿದ್ದಾರೆ. ಇದೇ ಬಾಲಯ್ಯನ ಮಗ ಮೋಕ್ಷಗಣನ ಜೊತೆ ಶ್ರೀಲೀಲಾ ಹೆಸರು ಓಡಾಡುತ್ತಿದೆ. ಬರೀ ಅಷ್ಟೆ ಅಲ್ಲ. ಆ ಹುಡುಗನ ಜೊತೆ ಮದುವೆ ಆಗಲಿದ್ದಾರಂತೆ ಕನ್ನಡದ ನಟಿ ಶ್ರೀಲೀಲಾ.

56

ಮೋಕ್ಷಗಣನ ಜೊತೆ ಶ್ರೀಲೀಲಾ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದು ಸುಳ್ಳಲ್ಲ. ಜೊತೆಗೆ ಓಡಾಡಿದ್ದೂ ಸುಳ್ಳಲ್ಲ. ಅಷ್ಟಕ್ಕೇ ಇವರಿಬ್ಬರ ನಡುವೆ ಸಂಬಂಧ ಇದೆ ಎಂದು ಅಲ್ಲಿಯ ಕೆಲವು ಮೀಡಿಯಾ ವರದಿ ಮಾಡಿವೆ. 

66

ಇದನ್ನು ಕೇಳಿ ಶ್ರೀಲೀಲಾ ಫುಲ್ ಅಪ್‌ಸೆಟ್ ಆಗಿದ್ದಾರೆ. ಈ ಸುದ್ದಿ ನಿಜವಲ್ಲ ಎಂದು ಸ್ಪಷ್ಟನೆ ನೀಡಿದರೂ ಯಾರೂ ಕೇಳುತ್ತಿಲ್ಲ. ಸಿನಿಮಾ ಅಂದ ಮೇಲೆ ಈ ರೀತಿ ಗಾಳಿ ಸುದ್ದಿ ಸಾಮಾನ್ಯ. ಇನ್ನು 4 ವರ್ಷಗಳ ಹಿಂದೆ ಕನ್ನಡದ 'ಕಿಸ್' ಚಿತ್ರದಲ್ಲಿ ಶ್ರೀಲೀಲಾ ಮೊದಲಿಗೆ ಬಣ್ಣ ಹಚ್ಚಿದ್ದರು.

Read more Photos on
click me!

Recommended Stories